ಗದಗ: ಶಿಥಿಲಗೊಂಡ ಶಾಲೆಯ ಮೇಲ್ಚಾವಣಿ ಏಕಾಏಕಿ ಕುಸಿತವಾಗಿದ್ದು ಅದೃಷ್ಟವಶಾತ್ (Gadag) ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ದುಂದೂರು ಗ್ರಾಮದಲ್ಲಿ ನಡೆದಿದೆ.
ದುಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅವಘಡ ನಡೆದಿದ್ದು, ಕೆಲವು ವಿದ್ಯಾರ್ಥಿಗಳು ಆಟವಾಡುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದಿದೆ. ಮೂರು ಕಡೆಗಳಲ್ಲಿ ಮೇಲ್ಚಾವಣಿ ಕುಸಿತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.
ಇನ್ನು ಅವಘಡ ನಡೆದ ಕಟ್ಟಡ ಸುಮಾರು 60 ವರ್ಷಗಳಷ್ಟು ಹಳೆಯದ್ದಾಗಿದೆ. ವಿದ್ಯಾರ್ಥಿಗಳು ಯಾವಾಗ, ಏನಾಗುತ್ತದದೋ ಎಂಬ ಭಯದಲ್ಲೇ ಈ ಹಳೆಯ ಕಟ್ಟಡದಲ್ಲಿ ಪ್ರತಿನಿತ್ಯ ಪಾಠ ಕೇಳಬೇಕಾದ ಸಂಗತಿ ಎದುರಾಗಿದೆ.
ಇನ್ನು ಈ ಕಟ್ಟಡದಲ್ಲಿ ಕೇವಲ 4 ಹೊಸ ಕೊಠಡಿಗಳಿವೆ. 1 ರಿಂದ 7ನೇ ತರಗತಿ, ಸ್ಟಾಪ್ ರೂಮ್, ಮುಖ್ಯ ಕಚೇರಿ, ಅಡುಗೆ ಕೋಣೆಗೆ ತುಂಬಾನೆ ಸಮಸ್ಯೆ ಆಗಿದೆ. ಶಿಥಿಲಗೊಂಡ ಕಟ್ಟಡದಲ್ಲೇ ಮಕ್ಕಳ ಶಿಕ್ಷಣ, ಅಡುಗೆ ಕೋಣೆ ಮುಂದುವರಿದಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಜೀವ ಭಯದಲ್ಲಿ ಬದುಕುವಂತಾಗಿದೆ.ಇದನ್ನೂ ಓದಿ: ಪತ್ನಿ, ಮೂವರು ಹೆಣ್ಣುಮಕ್ಕಳ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದ ಕ್ರೂರಿ
ಶಾಲಾ ಕೊಠಡಿಗಳ ದುರಸ್ತಿ ಮಾಡದಕ್ಕೆ ಶಿಕ್ಷಣ ಇಲಾಖೆ ವಿರುದ್ಧ ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಶಾಲಾ ಕೊಠಡಿಗಳ ದುರಸ್ತಿ ಮಾಡಬೇಕು. ಇಲ್ಲವೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರ ಒತ್ತಾಯಿಸಿದರು.ಇದನ್ನೂ ಓದಿ: ಜೈಲಲ್ಲಿ ಪ್ರಜ್ವಲ್ ರೇವಣ್ಣ ಬಳಸಿದ್ದ ಮೊಬೈಲ್ನ ಸೀಕ್ರೆಟ್ ಬಯಲು – 7 ಜನರ ವಿರುದ್ಧ FIR

