ವಾಷಿಂಗ್ಟನ್: ಯೆಮೆನ್ನ ಹೌತಿ ಬಂಡುಕೋರರ(Houthi Forces) ವಿರುದ್ಧ ತಕ್ಷಣವೇ ವೈಮಾನಿಕ ದಾಳಿ ನಡೆಸುವಂತೆ ಸೌದಿ ಅರೇಬಿಯಾದ(Saudi Arabia) ರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಮಾಡಿದ್ದ ಮನವಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎರಡು ಬಾರಿ ತಿರಸ್ಕರಿಸಿದ್ದಾರೆ.
ಯೆಮೆನ್ನ(Yemen) ಆಯಕಟ್ಟಿನ ಕರಾವಳಿ ನಗರವಾದ ಮೋಖಾವನ್ನು ಹೌತಿ ಪಡೆಗಳು ವಶಪಡಿಸಿಕೊಂಡು ಸೌದಿ ಬೆಂಬಲಿತ ಯೆಮೆನ್ ಪಡೆಗಳು ಹಿಮ್ಮೆಟ್ಟುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ಎಂಬಿಎಸ್ ಟ್ರಂಪ್ ಅವರಿಗೆ ತುರ್ತು ಕರೆ ಮಾಡಿದ್ದರು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ (Axios) ವರದಿ ಮಾಡಿದೆ.
After Saudi-backed forces retreated from Mokha following the Houthi takeover, they headed toward Aden — only to be blocked at the city’s approaches by UAE-aligned southern forces.
The footage shows armed men stopping convoys, demanding weapons be handed over, filming the… pic.twitter.com/AjEvOrfEuq
— Clash Report (@clashreport) September 11, 2026
ಕೆಲ ಗಂಟೆಗಳ ನಂತರ ಮತ್ತೆ ಕರೆ ಮಾಡಿ ಹೌತಿಗಳ ನೆಲೆಗಳ ಮೇಲೆ ಅಮೆರಿಕ ಸೇನೆಯಿಂದ ದಾಳಿ ನಡೆಸುವಂತೆ ಒತ್ತಾಯಿಸಿದರು. ಆದರೆ ಸದ್ಯಕ್ಕೆ ನೇರ ಮಿಲಿಟರಿ ಹಸ್ತಕ್ಷೇಪ ಮಾಡುವ ಯಾವುದೇ ಯೋಜನೆ ಇಲ್ಲವೆಂದು ತಿಳಿಸಿದ ಟ್ರಂಪ್ ಅವರ ಮನವಿಯನ್ನು ನಿರಾಕರಿಸಿದ್ದಾರೆ. ದಾಳಿಗೆ ನಿರಾಕರಿಸಿದರೂ ಹೌತಿಗಳ ಚಲನವಲನದ ಗುಪ್ತಚರ ಮಾಹಿತಿ ಹಾಗೂ ಟಾರ್ಗೆಟಿಂಗ್ ಡೇಟಾವನ್ನು ಸೌದಿ ಅರೇಬಿಯಾಗೆ ಒದಗಿಸುವುದಾಗಿ ಅಮೆರಿಕ ಆಡಳಿತ ಭರವಸೆ ನೀಡಿದೆ. ಇದನ್ನೂ ಓದಿ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಘಟನೆಗೆ 25 ವರ್ಷ – ಇದೇ ದಿನ ಅಮೆರಿಕದ WTC ಮೇಲೆ ನಡೆದಿತ್ತು ಭಯೋತ್ಪಾದಕ ದಾಳಿ
🚨 BREAKING
🔴 Saudi front collapses in #Yemen as 3 full brigades surrender
🔹Three full brigades of #Saudi forces and their allied fighters, along with their light and heavy weapons, have surrendered to Yemeni #Houthi forces across the Hays, Al-Mokha, Al-Khokha, Taiz and… pic.twitter.com/SeGRXDmeVc
— Ghasem Makarem (@GhasemMakarem) September 10, 2026
ಸೌದಿ ಬೆಂಬಲಿತ ಪಡೆಗಳನ್ನು ದಕ್ಷಿಣದ ದುಬಾಬ್ ಕಡೆಗೆ ಹಿಮ್ಮೆಟ್ಟಿಸಿರುವ ಹೌತಿಗಳು, ಈ ಜಲಸಂಧಿಯ ಮೇಲೆ ಹಿಡಿತ ಸಾಧಿಸಿದರೆ ಜಾಗತಿಕ ಹಡಗು ಸಂಚಾರಕ್ಕೆ ಭಾರೀ ಭದ್ರತಾ ಬೆದರಿಕೆ ಎದುರಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು, “ಕೆಂಪು ಸಮುದ್ರದಲ್ಲಿ ಮುಕ್ತ ಹಡಗು ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಹಾಗೂ ನಮ್ಮ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸುವುದಷ್ಟೇ ಅಮೆರಿಕದ ಮುಖ್ಯ ಗುರಿ. ಪ್ರಾದೇಶಿಕ ಭದ್ರತಾ ಸವಾಲುಗಳನ್ನು ನಿರ್ವಹಿಸಲು ಮತ್ತು ಬಗೆಹರಿಸಲು ಈ ಭಾಗದ ಮಿತ್ರರಾಷ್ಟ್ರಗಳೇ ಮುಂಚೂಣಿಯಲ್ಲಿರಬೇಕು. ಪ್ರಾದೇಶಿಕ ಸ್ಥಿರತೆಗಾಗಿ ನಾವು ಸೌದಿ ಅರೇಬಿಯಾ ಮತ್ತು ಯೆಮೆನ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ತಿಳಿಸಿದ್ದಾರೆ.

