* 190 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿರುವ ಭಾರತ
ನವದೆಹಲಿ: ಅಣ್ವಸ್ತ್ರ ಸಿಡಿತಲೆ ಹೊಂದುವಲ್ಲಿ ಪಾಕಿಸ್ತಾನವನ್ನು ಭಾರತ (India-Pakistan) ಹಿಂದಿಕ್ಕಿದೆ.
ಅಮೆರಿಕ ಮೂಲದ ‘ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್’ (FAS) ನಡೆಸಿದ ಹೊಸ ಅಧ್ಯಯನದ ಪ್ರಕಾರ, ಭಾರತವು 190 ಪರಮಾಣು ಸಿಡಿತಲೆಗಳನ್ನು (Nuclear Warheads) ಹೊಂದಿರುವ ಅಂದಾಜಿದೆ. ಇದು ಪಾಕಿಸ್ತಾನಕ್ಕಿಂತ ಸುಮಾರು 20ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: BRICS Summit: ದೆಹಲಿಗೆ ಬಂದಿಳಿದ ರಷ್ಯಾ ಅಧ್ಯಕ್ಷ ಪುಟಿನ್
‘ಭಾರತದ ಪರಮಾಣು ಶಸ್ತ್ರಾಸ್ತ್ರಗಳು-2026’ ಎಂಬ ಶೀರ್ಷಿಕೆಯ ಲೇಖನವೊಂದರಲ್ಲಿ ಎಫ್ಎಎಸ್ ಪರಮಾಣು ಮಾಹಿತಿ ಯೋಜನೆಯ ನಿರ್ದೇಶಕ ಹ್ಯಾನ್ಸ್ ಕ್ರಿಸ್ಟೆನ್ಸೆನ್ ಅವರು, ಭಾರತವು ಕಾರ್ಯಾಚರಣೆಗೆ ಸಿದ್ಧವಿರುವ ಉಡಾವಣಾ ವ್ಯವಸ್ಥೆಗಳಿಗಾಗಿ 160ಕ್ಕೂ ಹೆಚ್ಚು ಸಿಡಿತಲೆಗಳನ್ನು ಹೊಂದಿದೆ. ಉತ್ಪಾದನೆಯ ಹಂತದಲ್ಲಿರುವ ಹೊಸ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸಿಡಿತಲೆಗಳನ್ನೂ ಹೊಂದಿದೆ ಎಂದು ತಿಳಿಸಿದ್ದಾರೆ.
ಭಾರತ ದಾಸ್ತಾನು ಹೆಚ್ಚಿಸಿಕೊಳ್ಳುವ ಮೂಲಕ ಪಾಕ್ಗೆ ಸೆಡ್ಡು ಹೊಡೆದಿದೆ. ಭಾರತದಲ್ಲಿ ಹೊಸ ತಲೆಮಾರಿನ ಪರಿಮಾಣು ಸಹಿತ ಕ್ಷಿಪಣಿಗಳಿವೆ. ಸದ್ಯ ಪಾಕಿಸ್ತಾನದ ಬಳಿ 170 ಅಣ್ವಸ್ತ್ರ ಸಿಡಿತಲೆಗಳಿವೆ. 2023ರಲ್ಲೇ ಪಾಕಿಸ್ತಾನವನ್ನು ಭಾರತ ಹಿಂದಿಕ್ಕಿದೆ. ಇದನ್ನೂ ಓದಿ: ದೆಹಲಿ ಕಟ್ಟಡ ಕುಸಿತ ಪ್ರಕರಣ – ನಿರ್ಲಕ್ಷ್ಯ ಆರೋಪದಡಿ ಮತ್ತೆ 3 ಎಂಜಿನಿಯರ್ಗಳು ಅಮಾನತು
ಯಾವ ದೇಶದಲ್ಲಿ ಎಷ್ಟು ಅಣ್ವಸ್ತ್ರ?
ರಷ್ಯಾ – 5420
ಅಮೆರಿಕಾ – 5042
ಚೀನಾ – 620
ಫ್ರಾನ್ಸ್ – 370
ಯುನೈಟೆಡ್ ಕಿಂಗ್ಡಮ್ – 225
ಭಾರತ – 190
ಪಾಕಿಸ್ತಾನ – 170
ಇಸ್ರೇಲ್ – 90
ಉತ್ತರ ಕೊರಿಯಾ – 60

