ಚೆನ್ನೈ: ಚೆನ್ನೈನಲ್ಲಿ (Chennai) 804 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಭಾರತೀಯ ಮಾನದಂಡಗಳ ಬ್ಯೂರೋ (BIS) ಗುರುವಾರ ತಿಳಿಸಿದೆ. ಹಾಲ್ಮಾರ್ಕ್ ಮಾಡದ ಮತ್ತು ವಾಣಿಜ್ಯ ಮಾರಾಟಕ್ಕಾಗಿ ಪ್ರದರ್ಶಿಸದ ವಸ್ತುಗಳಿವು ಎಂದು ತಿಳಿಸಿದೆ.
ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಕಡ್ಡಾಯ ಹಾಲ್ಮಾರ್ಕಿಂಗ್ ಅನ್ನು 2021 ರಲ್ಲಿ ಪ್ರಾರಂಭಿಸಲಾಯಿತು. ಹಾಲ್ಮಾರ್ಕಿಂಗ್ ಅಮೂಲ್ಯ ಲೋಹದ ವಸ್ತುಗಳ ಶುದ್ಧತೆ ಅಥವಾ ಸೂಕ್ಷ್ಮತೆಯ ಅಧಿಕೃತ ಸೂಚನೆಯಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ಸೇತುವೆ ನಿರ್ಮಾಣ ವೇಳೆ ಕಾಂಕ್ರೀಟ್ ಸ್ಲ್ಯಾಬ್, ಬೀಮ್ ಲಾಂಚರ್ ಕುಸಿತ – 8 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ಸೆ.1 ರಂದು ಚೆನ್ನೈನ ಅಂಬತ್ತೂರಿನಲ್ಲಿರುವ ಆಭರಣ ಅಂಗಡಿಯಲ್ಲಿ ಜಾರಿ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ 803.99 ಗ್ರಾಂ ಹಾಲ್ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಲ್ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ವಾಣಿಜ್ಯ ಮಾರಾಟಕ್ಕಾಗಿ ಪ್ರದರ್ಶಿಸಿರುವುದು ಕಂಡುಬಂದ ಹಿನ್ನೆಲೆ, 2016 ರ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಕಾಯ್ದೆಯ ಸೆಕ್ಷನ್ 28 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ ಆಭರಣಗಳಲ್ಲಿ 671.50 ಗ್ರಾಂ ತೂಕದ 175 ಮಂಗಳಸೂತ್ರಗಳು (ತಾಳಿ), 25.02 ಗ್ರಾಂ ತೂಕದ 12 ಮಕ್ಕಳ ಬಳೆಗಳು, 86.14 ಗ್ರಾಂ ತೂಕದ 40 ಕಿವಿಯೋಲೆಗಳು ಮತ್ತು 21.33 ಗ್ರಾಂ ತೂಕದ 10 ಪೆಂಡೆಂಟ್ಗಳು ಸೇರಿವೆ. ಇದನ್ನೂ ಓದಿ: ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನ

