ಬೆಂಗಳೂರು: ಇಸ್ರೋದ (ISRO) ಸಾಧನೆ ದೇಶದ ಹೆಮ್ಮೆ, ಕರ್ನಾಟಕದ ಹೆಮ್ಮೆ. ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ, SpaceTech, DeepTech, ಸ್ಟಾರ್ಟ್ಅಪ್ಗಳು ಮತ್ತು ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರಂ ಸಿಂಗ್ (Ajay Dharam Singh) ಹೇಳಿದ್ದಾರೆ.
ಇತ್ತೀಚಿನ GSLV-F17/EOS-05 ಯಶಸ್ವಿ ಉಡಾವಣೆ ಹಿನ್ನೆಲೆ ಅಜಯ್ ಸಿಂಗ್ ಅವರು ಮಂಗಳವಾರ ಬೆಂಗಳೂರಿನಲ್ಲಿ ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಇಸ್ರೋದ ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ತಾಂತ್ರಿಕ ತಂಡದ ಸಾಧನೆಯನ್ನು ಶ್ಲಾಘಿಸಿದ ಸಚಿವರು, ಈ ಯಶಸ್ಸು ಭಾರತದ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಲಕ್ಷ್ಮೇಶ್ವರದಲ್ಲಿ ಬೀದಿ ನಾಯಿಗಳ ಕಾಟ; ಪುರಸಭೆ ವಿರುದ್ಧ ಸ್ಥಳೀಯರ ಆಕ್ರೋಶ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಂದ ಇಸ್ರೋ ಅಧ್ಯಕ್ಷರಿಗೆ ಅಭಿನಂದನೆ:
ಭೇಟಿಯ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೂರವಾಣಿ ಮೂಲಕ ಇಸ್ರೋ ಅಧ್ಯಕ್ಷರಾದ ಡಾ. ವಿ. ನಾರಾಯಣನ್ ಅವರೊಂದಿಗೆ ಮಾತುಕತೆ ನಡೆಸಿದರು. ಇತ್ತೀಚಿನ ಯಶಸ್ವಿ ಉಡಾವಣೆಗೆ ಇಸ್ರೋ ಅಧ್ಯಕ್ಷರು ಹಾಗೂ ಇಡೀ ತಂಡವನ್ನು ಮುಖ್ಯಮಂತ್ರಿ ಅಭಿನಂದಿಸಿದರು. ಇಸ್ರೋ ಮತ್ತು ಕರ್ನಾಟಕ ಸರ್ಕಾರದ ನಡುವಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ವಿಜಯಪುರದಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ

ಕರ್ನಾಟಕವು ಇಸ್ರೋದ ಐತಿಹಾಸಿಕ ತವರು. ಭಾರತದ ಮುಂದಿನ SpaceTech ಮತ್ತು DeepTech ಬೆಳವಣಿಗೆಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿ ಇರಬೇಕು. ಈ ದಿಸೆಯಲ್ಲಿ ಇಸ್ರೋದ ಮಾರ್ಗದರ್ಶನ ಮತ್ತು ಸಹಕಾರ ಅತ್ಯಂತ ಮಹತ್ವದ್ದು, ಎಂದು ಹೇಳಿದರು. ಇದೇ ವೇಳೆ, ಈ ತಿಂಗಳ ಕೊನೆಯ ವಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ಆಯೋಜಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿ ಭಾಗಶಃ ಅಂಗೀಕಾರ
