ತಿರುವನಂತಪುರಂ: ಇಂದು ಕೊಚ್ಚಿಯಿಂದ ಅಬುಧಾಬಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ (Air India) ಬೋಯಿಂಗ್ 737 (IX 415) ವಿಮಾನದ ಎಂಜಿನ್ನಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ನ ಸಮಯಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ.
ಟೇಕ್ಆಫ್ ಆದ ವೇಳೆ ವಿಮಾನದ ಎಂಜಿನ್ 1ರಲ್ಲಿ ತೈಲ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ಪೈಲಟ್ ತಕ್ಷಣ ಮಾರ್ಗ ಮಧ್ಯೆ ಕೊಚ್ಚಿ ಏರ್ಪೋರ್ಟ್ಗೆ ಮರಳಿದ್ದಾರೆ.
ವಿಮಾನ ಟೇಕ್ಆಫ್ ಆದ 50 ನಿಮಿಷಗಳ ನಂತರ, 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ, ಎಂಜಿನ್ 1ರಲ್ಲಿ ತೈಲದ ಪ್ರಮಾಣ ವೇಗವಾಗಿ ಕಡಿಮೆಯಾಗುತ್ತಿರುವುದನ್ನು ಪೈಲಟ್ ಮತ್ತು ಸಹ ಪೈಲಟ್ ಗಮನಿಸಿದ್ದಾರೆ. ಹಾರಾಟ ಮುಂದುವರಿದಂತೆ ಎಂಜಿನ್ನ ತೈಲದ ಒತ್ತಡವು ಅಪಾಯದ ಮಟ್ಟಕ್ಕೆ ಇಳಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆ ಎಂಜಿನ್ ಅನ್ನು ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿ: ನೆತ್ತರು ಹರಿದ ಜಾಗವೀಗ ಪ್ರವಾಸಿ ತಾಣ – ʻಡಾರ್ಕ್ ಟೂರಿಸಂʼನೊಂದಿಗೆ ಇತಿಹಾಸದ ಕರಾಳ ಪುಟಗಳ ಮೆಲುಕು
ಎಂಜಿನ್1 ತೈಲ ಪ್ರಮಾಣವು ಇನ್ನೇನು ಅಪಾಯದ ವಲಯವನ್ನು ಮೀರಬೇಕು ಅಷ್ಟರಲ್ಲಿ ಎಂಜಿನ್ ಆಫ್ ಮಾಡಲಾಗಿದೆ. ನಂತರ ವಿಮಾನ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ಅಪಾಯ ಅಥವಾ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ. ವಿಮಾನವನ್ನು ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದ್ದು, ಎಂಜಿನ್ನಲ್ಲಿ ತೈಲ ಪ್ರಮಾಣ ದಿಢೀರ್ ಕುಸಿಯಲು ಕಾರಣವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: ಪ್ರವಾಹದಲ್ಲಿ ಮೃತಪಟ್ಟವರ ಸ್ಮರಣಾರ್ಥ ನೇಪಾಳದಲ್ಲಿ ರಾಷ್ಟ್ರೀಯ ಶೋಕಾಚರಣೆ
