ಬೆಂಗಳೂರು: ಬರ ಪಟ್ಟಿಗೆ ನನ್ನ ಕ್ಷೇತ್ರ ಸೇರಿಸದಿದ್ರೆ ಹೋರಾಟ ಮಾಡುತ್ತೇನೆ ಎಂದು ಗುರುಮಿಟ್ಕಲ್ ಮತ್ತು ಯಾದಗಿರಿ ಕ್ಷೇತ್ರವನ್ನ ಬರ ಪಟ್ಟಿಯಿಂದ ಕೈ ಬಿಟ್ಟಿರುವುದನ್ನ ವಿರೋಧಿಸಿ ಜೆಡಿಎಸ್ (JDS) ಶಾಸಕ ಶರಣಗೌಡ ಕಂದಕೂರ್ (Sharanagouda Kandakur) ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ್ದಾರೆ.
ಕಪ್ಪು ಬಟ್ಟೆ ಧರಿಸಿ, ಹಸಿರು ಶಾಲು ಹಾಕಿ, ಬಿತ್ತಿ ಪತ್ರ ಹಿಡಿದು ಧರಣಿ ನಡೆಸಿದರು. ಗುರುಮಿಟ್ಕಲ್ ಮತ್ತು ಯಾದಗಿರಿ ಕ್ಷೇತ್ರವನ್ನ ಕೂಡಲೇ ಬರ ಪಟ್ಟಿಗೆ ಸೇರಿಸಬೇಕು ಅಂತ ಸರ್ಕಾರವನ್ನ ಆಗ್ರಹಿಸಿದ್ದಾರೆ.ಇದನ್ನೂ ಓದಿ: ಡಿಕೆಶಿ ಪ್ರಜಾಸೇವಾ ಆಂದೋಲನದಲ್ಲಿ `ಕೈ’ ಶಾಸಕನ ದರ್ಪ – ಸಮಸ್ಯೆ ಹೇಳಲು ಬಂದವರ ಮೇಲೆ ಧಿಮಾಕು
ಧರಣಿ ವೇಳೆ ʻಪಬ್ಲಿಕ್ ಟಿವಿʼ ಜೊತೆ ಮಾತಾಡಿದ ಅವರು, ನನ್ನ ಕ್ಷೇತ್ರ ಬರಕ್ಕೆ ತುತ್ತಾಗಿದೆ. ಹೀಗಿದ್ದರೂ ಸರ್ಕಾರ ಬರ ಅಂತ ಘೋಷಣೆ ಮಾಡಿಲ್ಲ. ಶರಣಗೌಡನ ಮೇಲೆ ಸರ್ಕಾರದಲ್ಲಿ ಇರೋರಿಗೆ ಜ್ವರ ಬಂದಿದೆ. ಎರಡೂ ಪಟ್ಟಿಯಲ್ಲೂ ನನ್ನ ಕ್ಷೇತ್ರ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ-ಜೆಡಿಎಸ್ 17 ಕ್ಷೇತ್ರದಲ್ಲಿ ಮಾತ್ರ ಬರ ಅಂತ ಸರ್ಕಾರ ಘೋಷಣೆ ಮಾಡಿದೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಮಾತ್ರ ಬರ ಬರೋದಾ?ಸರ್ಕಾರ 3ನೇ ಪಟ್ಟಿಯಲ್ಲಿ ನನ್ನ ಕ್ಷೇತ್ರ ಸೇರಿಸುವ ಭರವಸೆ ಇದೆ. 3ನೇ ಪಟ್ಟಿಯಲ್ಲಿ ಸೇರಿಸಿಲ್ಲ ಅಂದರೆ ಇದು ರಾಜಕೀಯ ಟಾರ್ಗೆಟ್ ಆಗುತ್ತದೆ. 3ನೇ ಪಟ್ಟಿಯಲ್ಲಿ ಸೇರಿಸಿಲ್ಲ ಅಂದರೆ ಏನ್ ಮಾಡ್ತೀನಿ ಅಂತ ಹೇಳಲ್ಲ. ಮಾಡಿ ತೋರಿಸ್ತೀನಿ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.ಇದನ್ನೂ ಓದಿ: ಡಿವೈಡರ್‌ಗೆ ಕಾರು ಡಿಕ್ಕಿ – ತಿಮ್ಮಪ್ಪನ ದರ್ಶನ ಪಡೆದು ವಾಪಸ್ಸಾಗ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವು
