– ಕೊಟ್ಟ ಮಾತು ಉಳಿಸಿಕೊಂಡ ಸರ್ಕಾರ ಇದ್ರೆ ಅದು ಸಿದ್ದರಾಮಯ್ಯ ಸರ್ಕಾರ ಎಂದ ಮಾಜಿ ಸಿಎಂ
ಚಿಕ್ಕಮಗಳೂರು: ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಸರ್ ಅಂದ್ರು. ಇಲ್ಲ, ಮಾತು ಕೊಟ್ಟಿದ್ದೇನೆ ಅಂತ ಕೊಟ್ಟೆ ಎಂದು ರಾಜೀನಾಮೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿದರು.
ಕಡೂರಿನಲ್ಲಿ ಸಿದ್ದರಾಮಯ್ಯ ಮಾತನಾಡಿ, ನಾನು ಯಾವುದೋ ದೇವಸ್ಥಾನಕ್ಕೆ ಹೋದಾಗ ಮೋದಿ…ಮೋದಿ… ಅಂತಿದ್ರು. ಮೋದಿ ಸ್ವಾತಂತ್ರ‍್ಯಕ್ಕೆ ಹೋರಾಡಿದ್ರಾ, ಸಂಗೊಳ್ಳಿ ರಾಯಣ್ಣ ರೀತಿ ಹೋರಾಡಿದ್ರಾ? ಜನ ಸುಮ್ನೆ ಮೋದಿ… ಮೋದಿ… ಅಂತಾರೆ. 2 ಕೋಟಿ ಕೆಲಸ ಎಲ್ಲಿ, ಅಚ್ಚೇ ದಿನ್ ಎಲ್ಲಿ, ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು ಮಾಡಿದ್ರಾ? 12 ವರ್ಷ ಆಯ್ತು ಪ್ರಧಾನಿ ಆಗಿ, ಕಪ್ಪು ಹಣ ತಂದು 15 ಲಕ್ಷ ಹಾಕ್ತೀನಿ ಅಂದ್ರು ಹಾಕಿದ್ರಾ? ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಮತ ಹಾಕಬೇಕು? ಪಾಪ… ಜನರಗೆ ತಪ್ಪು ಮಾಹಿತಿ ನೀಡಿ ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಿಂದ ಅವರ ಬಿಪಿ, ಶುಗರ್ ಕಡಿಮೆಯಾಗುತ್ತಿದೆ: ಲಕ್ಷ್ಮಣ್ ಸವದಿ ಟಾಂಗ್
ತಮ್ಮಯ್ಯಾ… ಯಾರಯ್ಯಾ… ನಿನ್ನ ಮೇಲೆ ಸೋತದ್ದು… ಸಿ.ಟಿ.ರವಿ. ಸಿ.ಟಿ.ರವಿ ಮೊನ್ನೆ ಹೇಳ್ತಿದ್ನಂತೆ. ನಾನು ಹೇಳಲ್ಲ… ನಮ್ಮ ಕಡೆ ಅವನನ್ನ ಲೂಟಿ ರವಿ ಅಂತ ಕರೆಯುತ್ತಾರೆ. ಗೃಹಲಕ್ಷ್ಮಿ ಯೋಜನೆ ಕೊಡ್ಲಿಲ್ಲ ಅದಕ್ಕೆ ಸಿಎಂ ಸ್ಥಾನ ಹೋಯ್ತು ಅಂದನಂತೆ. ನಾನು, ರಾಹುಲ್ ಗಾಂದಿಗೆ ಮಾತು ಕೊಟ್ಟಿದ್ದೆ. ಅವರು ರಾಜೀನಾಮೆ ಕೊಡು ಅಂದ್ರು ಕೊಟ್ಟೆ. ಬಹಳ ಜನ ನನಗೆ ಕೊಡಬೇಡಿ ಸರ್ ಅಂದ್ರು, ಇಲ್ಲ ಮಾತು ಕೊಟ್ಟಿದ್ದೇನೆ ಕೊಡಬೇಕು ಅಂತ ಕೊಟ್ಟೆ. ರಾಜಕೀಯದಲ್ಲಿ ಕೊಟ್ಟ ಮಾತು ಉಳಿಸಿಕೊಂಡ ಯಾವುದಾದರೂ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.
