ಬೆಳಗಾವಿ: ಸವದತ್ತಿ (Savadatti) ತಾಲೂಕಿನ ಇಂಚಲ ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಕೂಲಿ ಕಾರ್ಮಿಕರಿಗೆ ಗಂಗರ ಕಾಲದ ಚಿನ್ನದ ನಿಧಿ ಸಿಕ್ಕಿದೆ.
ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುವಾಗ ಗಡಿಗೆಯಲ್ಲಿ 14 ಚಿನ್ನದ ನಾಣ್ಯಗಳು ಕಾರ್ಮಿಕರಿಗೆ ಸಿಕ್ಕಿವೆ. ಸುಮಾರು 54.8 ಗ್ರಾಂ ತೂಕದ 8.27 ಲಕ್ಷ ರೂ. ಮೌಲ್ಯದ ನಾಣ್ಯಗಳಾಗಿವೆ. ನಿಧಿಯನ್ನು ಅಧಿಕಾರಿಗಳಿಗೆ ಒಪ್ಪಿಸಿ ಕೂಲಿ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಇದನ್ನೂ ಓದಿ: ರಾಯಚೂರು | ಮಾನ್ವಿಯಲ್ಲಿ 700 ವರ್ಷಗಳ ಹಿಂದಿನ ನಿಧಿ ಪತ್ತೆ

ಪಿಡಿಒ, ತಾಲೂಕು ಪಂಚಾಯ್ತಿ ಸಿಬ್ಬಂದಿ ಸಮ್ಮುಖದಲ್ಲಿ ಸವದತ್ತಿ ತಹಶೀಲ್ದಾರ್ ಅವರಿಗೆ ನಾಣ್ಯಗಳನ್ನು (Gold Coins) ಹಸ್ತಾಂತರ ಮಾಡಲಾಗಿದೆ. ಈ ಎಲ್ಲಾ ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರು ಖಜಾಂಚಿಗೆ ಒಪ್ಪಿಸಿದ್ದಾರೆ.
14 ನಾಣ್ಯಗಳ ಮೇಲೆ ಆನೆಯ ಚಿತ್ರವಿದೆ. ತಲಕಾಡಿನ ಗಂಗರ ರಾಜಲಾಂಛನ ಆನೆ ಆಗಿತ್ತು. ಕ್ರಿ.ಶ 10 ರಿಂದ 15ನೇ ಶತಮಾನದ ಅವಧಿಯಲ್ಲಿನ ನಾಣ್ಯಗಳಿವು ಎಂಬ ಮಾಹಿತಿ ಇದೆ. ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಯುವಕನಿಗೆ ಸಿಕ್ತು 98 ಕೋಟಿ ರೂ. ಮೌಲ್ಯದ ನಿಧಿ!
