ಇದು ನಮ್ಮ ಹುಡುಗನ ಸಿನಿಮಾ, ಯಶ್ ಸಲುವಾಗಿ ಬಂದು ಸಿನಿಮಾ ನೋಡಿದ್ದೇನೆ. ಲಾಸ್ಟ್ 20 ನಿಮಿಷ ಅಂತೂ ಗೇಮ್ ಚೇಂಜಿಂಗ್, ಅದ್ಭುತವಾಗಿ ಮಿಂಚಿದ್ದಾರೆ ಎಂದು ಟಾಕ್ಸಿಕ್ ಸಿನಿಮಾದ ಬಗ್ಗೆ ನಟ ಶಿವರಾಜ್‌ಕುಮಾರ್ (Shivaraj kumar) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಅವರು, ಸಿನಿಮಾದಲ್ಲಿ ಯಶ್ ಅದ್ಭುತವಾಗಿ ಮಿಂಚಿದ್ದಾರೆ. ಲಾಸ್ಟ್ 20 ಮಿನಿಟ್ಸ್ ಅಂತೂ ಗೇಮ್ ಚೇಂಜಿಂಗ್. ನೆಗೆಟಿವ್ ಯಾರು ಮಾಡ್ತಾರೆ ಅಂತ ನೀವೇ ಹುಡುಕಬೇಕು. `ಯಶ್ ಸಿನಿಮಾ’ ಅಂದರೆ ನಮ್ಮ ಹುಡುಗನ ಸಿನಿಮಾ. ನನ್ನ ತಮ್ಮನ ನೋಡಿದ ಹಾಗೆ ಯಶ್ ಅವರನ್ನ ನೋಡ್ತಿನಿ. ಯಶ್ ರಾಯ ಮತ್ತು ಟಿಕೆಟ್ 2 ಗೆಟಪ್ ಇಷ್ಟ ಆಯ್ತು. ಕೊನೆಯಲ್ಲಿ ಸಕತ್ ಆಗಿ ಕಾಣಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಟಾಕ್ಸಿಕ್ ಸಿನಿಮಾ , ಯಶ್ ನಟನೆ ಹಾಡಿಹೊಗಳಿದ ರಿಷಬ್ ಶೆಟ್ಟಿ

ಹೈದರಾಬಾದ್‌ನಲ್ಲಿ ನಾನು ಸಿನಿಮಾ ನೋಡುತ್ತೇನೆ ಅಂದಿದ್ದೆ. ನಿನ್ನೆನೇ ಟಿಕೆಟ್ ಬುಕ್ ಮಾಡಿದ್ದೆ. ಇವತ್ತು ಮನೆಯವರೆಲ್ಲ ಸೇರಿ ಸಿನಿಮಾ ನೋಡಿದ್ವಿ. ಟ್ರೈಲರ್ ನಾನೇ ಲಾಂಚ್ ಮಾಡಿದ್ದೆ. ಆಗ ನನ್ನ ಟ್ರೋಲ್ ಮಾಡಿದ್ರು. ಇಂದು ನಾನು ಶಿವರಾಜ್ ಕುಮಾರ್ ಆಗಿ ಅಲ್ಲ. ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಿದೆ. ನಾನು ಯಾವತ್ತೂ ನಟರ ಸಪೋರ್ಟ್‌ಗೆ ನಿಲ್ತೀನಿ. ನಾನು ಮೊದಲಿಂದಲೂ ಎಷ್ಟೋ ಜನ ಹೀರೋ ಪರ ನಿಂತಿದ್ದೇನೆ. ನನಗೆ ನಮ್ಮವರು, ಮತ್ತೆ ಇಂಡಸ್ಟ್ರಿ ಮುಖ್ಯ. ಇದೀಗ ನಾನು ಯಶ್‌ಗೋಸ್ಕರ ಬಂದು ಸಿನಿಮಾ ನೋಡಿದ್ದೇನೆ ಎಂದು ಹೇಳಿದ್ದಾರೆ.

ಪೈರಸಿ ಕಾಟ ಮೊದಲಿಂದಲೂ ಇದೆ. ಅದಕ್ಕೆ ನಾವು ಏನೂ ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಆದರೆ ಇಂಡಸ್ಟ್ರಿ ಬೆಳೆಯಬೇಕು, ನಮ್ಮ ಸಿನಿಮಾವಲ್ಲ. ಕನ್ನಡ ಸಿನಿಮಾ ಬೆಳೆಯಬೇಕು ಅಷ್ಟೇ. ನಮ್ಮವರು ಬರಿ ಸ್ಟಾರ್ ಸಿನಿಮಾ ನೋಡೋದು ಅಲ್ಲ, ಎಲ್ಲರ ಸಿನಿಮಾ ನೋಡಬೇಕು. ಕನ್ನಡ ಸಿನಿಮಾ ಟಾಪ್‌ನಲ್ಲಿದೆ. ಯಾರೇ ಸ್ಟಾರ್ ಆದ್ರೂ ಅವರು ಅಭಿಮಾನಿಗಳ ಸ್ಟಾರ್ ಅಷ್ಟೇ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: `ಟಾಕ್ಸಿಕ್’ ಚಿತ್ರ, ಯಶ್ ಪ್ರಯತ್ನವನ್ನು ಕೊಂಡಾಡಿದ ಕಿಚ್ಚ ಸುದೀಪ್

