ಕಠ್ಮಂಡು: ನೇಪಾಳದಲ್ಲಿ (Nepal Flood) ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 1204ಕ್ಕೆ ಏರಿಕೆಯಾಗಿದೆ. ಈವರೆಗೆ 6,541 ಜನರನ್ನು ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
1,113 ಮೃತದೇಹಗಳ ಮರಣೋತ್ತರ ಪರೀಕ್ಷೆ ಮತ್ತು ಕಾನೂನಾತ್ಮಕವಾಗಿ ಗುರುತು ಪತ್ತೆ ಮಾಡುವ ಕಾರ್ಯ ಪೂರ್ಣಗೊಂಡಿದೆ. 95 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುತು ಪತ್ತೆಯಾಗದ 911 ಮೃತದೇಹಗಳ ಮಾಹಿತಿಯನ್ನು ನೇಪಾಳ ಪೊಲೀಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. 4,216 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹಲವೆಡೆ ನಿರಂತರ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ವತ ಪ್ರದೇಶಗಳಾದ ಕೋಶಿ, ಭಾಗಮತಿ ಮತ್ತು ಗಂಡಾಕಿ ಪ್ರಾಂತ್ಯಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯೆತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ
ರಕ್ಷಣಾ ಕಾರ್ಯಕ್ಕೆ ಡ್ರೋನ್ ನೆರವು
ನೇಪಾಳದಲ್ಲಿನ ಪ್ರವಾಹ ಪೀಡಿತ ಪ್ರದೇಶದಿಂದ ಮೃತದೇಹಗಳನ್ನು ರವಾನಿಸಲು ಡ್ರೋನ್ಗಳನ್ನು ಬಳಸಲಾಗುತ್ತಿದೆ. ರಕ್ಷಣಾ ಸಿಬ್ಬಂದಿ ತಲುಪಲು ಅಸಾಧ್ಯವಾದ ಸ್ಥಳಗಳಿಂದ ಈ ವಾರ ಏಳು ಮೃತದೇಹಗಳನ್ನು ಡ್ರೋನ್ ಮೂಲಕ ಮೇಲೆತ್ತಲಾಗಿದೆ.ಇದನ್ನೂ ಓದಿ: ಬೆಂಗಳೂರಿನ 100 ಹೋಟೆಲ್ಗಳಿಗೆ ಟ್ರೈನಿಂಗ್; ಎಫ್ಡಿಎ ದಾಳಿ ಬೆನ್ನಲ್ಲೇ ಅಸೋಸಿಯೇಷನ್ ನಿರ್ಧಾರ
ಸಂಪರ್ಕ ಕಡಿತಗೊಂಡಿರುವ ಸ್ಥಳಗಳಿಗೆ ಆಹಾರ ಮತ್ತು ಔಷಧ ರವಾನೆಗೆ ಹಾಗೂ ದುರ್ಗಮ ಪ್ರದೇಶದಲ್ಲಿ ಸಿಲುಕಿದವರ ಪತ್ತೆಗೂ ಡ್ರೋನ್ಗಳನ್ನು ಬಳಸಲಾಗುತ್ತಿದೆ. ದೇವಿಘಾಟ್-3ರ ಪ್ರದೇಶದಲ್ಲಿ ಇತ್ತೀಚೆಗೆ ಎ.ಐ ಆಧಾರಿತ ಡೋನ್ಗಳನ್ನು ಬಳಸಲಾಗಿತ್ತು. ಈ ಪ್ರದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಗ್ರಾಮಸ್ಥರಿಗೆ ನೀರು ಆಹಾರ ಔಷಧದ ಮುಂತಾದ ಅಗತ್ಯ ವಸ್ತುಗಳ ಬಗ್ಗೆ ವಿಚಾರಿಸಲಾಗುತ್ತಿದೆ. ಆಹಾರ ಸೇರಿದಂತೆ 1.15 ಟನ್ ಅಗತ್ಯ ವಸ್ತುಗಳನ್ನು ಮೂರು ದಿನಗಳಲ್ಲಿ ಡ್ರೋನ್ ಮೂಲಕ ಪೂರೈಸಲಾಗಿದೆ. ಇದನ್ನೂ ಓದಿ: ತಮಿಳುನಾಡಿಗೆ ನಿರಂತರ ನೀರು, ಮಂಡ್ಯದ ಬೆಳೆಗೆ ಕಟ್ಟು ಪದ್ಧತಿ – ದೇವರ ಮೇಲೆ ಭಾರ ಹಾಕಿ ಭತ್ತ ನಾಟಿಗಿಳಿದ ಅನ್ನದಾತರು
