– ಮುಂಬೈ, ವಡೋದರಾದಲ್ಲಿ ಪಂದ್ಯಾವಳಿ
ದುಬೈ: ಚೊಚ್ಚಲ ಆವೃತ್ತಿಯ ಮಹಿಳಾ ಟಿ20 ಚಾಂಪಿಯನ್ಸ್ ಟ್ರೋಫಿ (Women’s T20 Champions Trophy) ಟೂರ್ನಿಯನ್ನು ಭಾರತದಲ್ಲಿ (India) ಫೆ.14 ರಿಂದ ನಡೆಯಲಿದೆ.
ಶ್ರೀಲಂಕಾದಿಂದ ಆತಿಥ್ಯದ ಹಕ್ಕು ಹಿಂಪಡೆದ ಬೆನ್ನಲ್ಲೇ ಭಾರತದಲ್ಲಿ ಆಯೋಜಿಸುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಧಿಕೃತವಾಗಿ ಪ್ರಕಟಿಸಿದೆ. ಟೂರ್ನಿಯು 2027ರ ಫೆಬ್ರವರಿ 14 ರಿಂದ 28 ರವರೆಗೆ ಮುಂಬೈ (Mumbai) ಮತ್ತು ವಡೋದರಾದಲ್ಲಿ(Vadodara) ನಡೆಯಲಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಅಲ್ಲಿಂದ ಆತಿಥ್ಯವನ್ನು ರದ್ದುಗೊಳಿಸಲಾಗಿತ್ತು. ಬಳಿಕ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಪರಿಶೀಲನೆ ನಡೆಸಿದ ಐಸಿಸಿ, ಅಂತಿಮವಾಗಿ ಭಾರತಕ್ಕೆ ಆತಿಥ್ಯ ವಹಿಸಲು ಹಸಿರು ನಿಶಾನೆ ತೋರಿದೆ.
A landmark moment for women’s cricket awaits.
The dates and venues for the inaugural Women’s Champions Trophy in 2027 are now confirmed, as India prepares to welcome the world’s best teams from 14-28 February.
Read more ➡️ https://t.co/QrY2iyDwyU pic.twitter.com/m7cWLxY8I8
— ICC (@ICC) September 2, 2026
ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಭಾಗಿಯಾಗಲಿವೆ. ಶ್ರೀಲಂಕಾ ಆರಂಭದಲ್ಲಿ ಆತಿಥೇಯ ರಾಷ್ಟ್ರವಾಗಿ ಆಯ್ಕೆಯಾಗಿದ್ದರೂ, ಅರ್ಹತಾ ಕಟ್ಆಫ್ ದಿನಾಂಕವಾದ ಜುಲೈ 6ರ ವೇಳೆಗೆ ಐಸಿಸಿ ಶ್ರೇಯಾಂಕದಲ್ಲಿ 6ನೇ ಸ್ಥಾನದಲ್ಲಿದ್ದ ಕಾರಣ ಟೂರ್ನಿಯಲ್ಲಿ ಸ್ಥಾನ ಉಳಿಸಿಕೊಂಡಿದೆ.
ಪಂದ್ಯಗಳು ರೌಂಡ್-ರಾಬಿನ್ (Round-Robin) ಮಾದರಿಯಲ್ಲಿ ನಡೆಯಲಿದ್ದು, ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಪ್ರವೇಶಿಸಲಿವೆ.
ಈ ಅವಧಿಯಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಹಾಗೂ ರಣಜಿ ಟ್ರೋಫಿ ಸೇರಿದಂತೆ ಹಲವು ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸುತ್ತಿದ್ದರೂ, ಐಸಿಸಿ ಈ ಜವಾಬ್ದಾರಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ನೀಡಿದೆ.
