ಬೆಂಗಳೂರು: ಸರ್ವರ್ ಡೌನ್ ಬೆನ್ನಲ್ಲೇ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿಗೆ (e-KYC) ತಾತ್ಕಾಲಿಕ ತಡೆ ನೀಡಲಾಗಿದೆ.
ಸೆಪ್ಟೆಂಬರ್ 1 ರ ಬಳಿಕ ಇ-ಕೆವೈಸಿಗೆ ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಬೇಕು. ಇದನ್ನೂ ಓದಿ: ಅನ್ನಭಾಗ್ಯದ ಅಕ್ಕಿಗೆ ಸರ್ವರ್ ಡೌನ್ – ಹಬ್ಬದ ತಯಾರಿ ಬದಲು ರೇಷನ್ ಅಂಗಡಿಯಲ್ಲಿ ಜನರ ಕ್ಯೂ
ಇ-ಕೆವೈಸಿಗೆ ಗಡುವು ವಿಧಿಸಿದ್ದರಿಂದ ಜನ ಏಕಾಏಕಿ ಮುಗಿಬಿದ್ದಿದ್ದರು. ಈ ತಿಂಗಳು ಒಂದೇ ಸಲ ಎರಡು ತಿಂಗಳ ಅಕ್ಕಿ ಕೊಡಬೇಕಾಗಿರುವುದರಿಂದ ಎರಡು ಸಲ ಬಯೋಮೆಟ್ರಿಕ್ ನೀಡಬೇಕಾಗಿತ್ತು. ಹೀಗಾಗಿ, ಸರ್ವರ್ ಕ್ಲ್ಯಾಷ್ ಆಗಿ ಜನ ಕ್ಯೂನಲ್ಲಿ ನಿಂತು ಪರದಾಡುವಂತಾಗಿತ್ತು.
ಇದರ ಬೆನ್ನಲ್ಲೇ ಆಹಾರ ಇಲಾಖೆಯಿಂದ ಇ-ಕೆವೈಸಿಗೆ ತಾತ್ಕಲಿಕ ತಡೆ ನೀಡಲಾಗಿದೆ. ರೇಷನ್ ವಿತರಣೆಯ ನಂತರ ಮುಂದಿನ ತಿಂಗಳು ಇ-ಕೆವೈಸಿ ಮಾಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: Exclusive: ನಕಲಿ ಔಷಧಿ ಜಾಲ 5 ರಾಜ್ಯಗಳಿಗೆ ಲಿಂಕ್
ಕೇಂದ್ರದಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಜಾರಿಯಲ್ಲಿದೆ. ಈ ತಿಂಗಳ ಅಂತ್ಯದೊಳಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿತ್ತು.

