ಬೆಂಗಳೂರು: ಆಷಾಢ ಮುಗಿದು ಶ್ರಾವಣಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರುತ್ತಿವೆ. ಶುಕ್ರವಾರ ನಾಡಿನ ದೊಡ್ಡ ಹಬ್ಬ ವರಮಹಾಲಕ್ಷ್ಮಿ ಹಬ್ಬವಿದ್ದು (Varamahalakshmi Festival), ಹಬ್ಬದ ಖರೀದಿಗೆ ಕೆ.ಆರ್ ಮಾರ್ಕೆಟ್ಗೆ (KR Market) ಜನ ಮುಗಿ ಬೀಳುತ್ತಿದ್ದಾರೆ. ಆದರೆ ಹೂವು, ಹಣ್ಣುಗಳ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ.
ಶ್ರಾವಣ ಮಾಸದ ದೊಡ್ಡ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ಕೌಂಟ್ಡೌನ್ ಶುರುವಾಗಿದೆ. ಹಬ್ಬದ ಖರೀದಿಗೆ ಬೆಂಗಳೂರಿನ ಮಾರ್ಕೆಟ್ಗೆ ಜನಸಾಗರವೇ ಹರಿದು ಬರುತ್ತಿದೆ. ಅದರಲ್ಲೂ ಕೆ.ಆರ್ ಮಾರ್ಕೆಟ್ನಲ್ಲಂತೂ ಹೂವು, ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಶುಕ್ರವಾರ ಹಬ್ಬವಿದ್ರೂ ಬುಧವಾರದಿಂದಲೇ ಜನರ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ಹೂವಿನ ಮಾರ್ಕೆಟ್ನಲ್ಲಿ ಕಾಲಿಡಲು ಜಾಗವಿಲ್ಲ. ಶುಕ್ರವಾರ ಇನ್ನೂ ಬೆಲೆ ಹೆಚ್ಚಾಗುತ್ತೆ ಅಂತಾ ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದನ್ನೂ ಓದಿ: ಹನೂರು ಎನ್ಕೌಂಟರ್ ಕೇಸ್ – ಮೃತ ಮೂವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ವಿತರಣೆ
ಯಾವ ಹೂವಿಗೆ ಎಷ್ಟು ಬೆಲೆ?
ಹೂವಿನ ವಿಧ – ಕೆ.ಜಿ – ರೂ.
ಕನಕಾಂಬರ – 1 ಕೆಜಿ – 3 ರಿಂದ 4 ಸಾವಿರ ರೂ.
ಮಲ್ಲಿಗೆ – 1 ಕೆಜಿ – 1 ರಿಂದ 2 ಸಾವಿರ ರೂ.
ಮಳ್ಳೆ ಹೂವು – 1 ಕೆಜಿ – 600 ರಿಂದ 800 ರೂ.
ಕಾಕಡ ಹೂವು – 1 ಕೆಜಿ – 600 ರಿಂದ 700 ರೂ.
ಸೇವಂತಿಗೆ – 1 ಕೆಜಿ – 500 ರಿಂದ 800 ರೂ.
ಗುಲಾಬಿ – 1 ಕೆಜಿ – 400 ರೂ.
ಕಣಗಲೆ ಹೂವು – 1 ಕೆಜಿ – 250 ರೂ.
ತಾವರೆ ಹೂವು – 1 ಜೋಡಿ – 100 ರೂ.
ಬಾಳೆಕಂದು – 1 ಜೊತೆ – 100 ರೂ.
ಸುಗಂಧರಾಜ ಹಾರ – 1,500 ರಿಂದ 2000 ರೂ.
ಇನ್ನು, ಹಣ್ಣುಗಳ ಬೆಲೆಯಲ್ಲೂ ಕೊಂಚ ಏರಿಕೆಯಾಗಿದೆ. ಸೇಬು ಹಣ್ಣು 200 ರೂ.ನಿಂದ 250 ರೂ.ವರೆಗೂ ಏರಿಕೆಯಾಗಿದೆ. ಎಲ್ಲಾ ಹಣ್ಣುಗಳ ಬೆಲೆಯಲ್ಲೂ 10-20 ರೂ.ವರೆಗೂ ಹೆಚ್ಚಾಗಿದೆ. ಇದನ್ನೂ ಓದಿ: 10 ವರ್ಷಗಳ ಕನಸು ನನಸು; ಗುರುವಾಯೂರು ದೇವಸ್ಥಾನದಲ್ಲಿ ಮತ್ತೆ ಮದುವೆಯಾದ ಸ್ಕಾಟಿಷ್ ದಂಪತಿ

