ನವದೆಹಲಿ: ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಅಂಗವಿಕಲರ ವಿರುದ್ಧ ಮಾಡಿದ ಸಂವೇದನಾರಹಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಮಯ್ ರೈನಾ, ರಣವೀರ್ ಅಲ್ಲಾಬಾದಿಯಾ ಮತ್ತು ಇತರರ ವಿರುದ್ಧದ ಎಲ್ಲಾ ಎಫ್ಐಆರ್ಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಅಲ್ಲಾಬಾದಿಯ ಕಾರ್ಯಕ್ರಮವೊಂದರಲ್ಲಿ ಅಸಭ್ಯ ಭಾಷೆಯ ಬಳಕೆ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿ ಹಲವೆಡೆ ದೂರು ಮತ್ತು ಎಫ್ಐಆರ್ಗಳು ದಾಖಲಾಗಿದ್ದವು. ತನ್ನ ಮೇಲಿನ ಎಫ್ಐಆರ್ಗಳನ್ನು ಕ್ರೋಢೀಕರಿಸಲು ಮತ್ತು ಬಲವಂತದ ಕ್ರಮದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಇದನ್ನೂ ಓದಿ: ರಾಹುಲ್ಗೆ ಬಿಗ್ ರಿಲೀಫ್: ಸಾವರ್ಕರ್ ವಿರುದ್ಧದ ಮಾನನಷ್ಟ ಕೇಸ್ ರದ್ದು
ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಅವರ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಿತು. ವಾಕ್ ಸ್ವಾತಂತ್ರ್ಯವು ಸಾಮಾಜಿಕ ರೂಢಿಗಳನ್ನು ಉಲ್ಲಂಘಿಸುವ ಭಾಷೆಯನ್ನು ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿತು.
ಕೊಲೆ ಬೆದರಿಕೆ ವರದಿಗಳ ನಂತರ ನ್ಯಾಯಾಲಯವು ಅವರಿಗೆ ಮಧ್ಯಂತರ ರಕ್ಷಣೆ ನೀಡಿತು. ಪೊಲೀಸ್ ಭದ್ರತೆಯನ್ನು ಪಡೆಯಲು ಕೋರ್ಟ್ ಅವಕಾಶ ಕಲ್ಪಿಸಿತು. ಇದನ್ನೂ ಓದಿ: 224 ಶಾಸಕರೂ ನನಗೆ ಒಂದೇ, ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಡಿಕೆಶಿ
