ವಿಜಯಪುರ: ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮವೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಿಜಯಪುರದ ಖದೀಮರು ಬಹುದೊಡ್ಡ ಅಕ್ರಮ ಜೊತೆಗೆ ಡೇಂಜರಸ್ ದಂಧೆ ಶುರು ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮದ ಬಳಿ ಶೆಡ್‌ನಲ್ಲಿ ಡೀಸೆಲ್ ಬಂಕ್ ಇದೆ. ಅನಧಿಕೃತವಾಗಿ ಡೀಸೆಲ್ ಬಂಕ್ ತೆರೆದು, ಲಾರಿಗಳಿಗೆ ಕಡಿಮೆ ಬೆಲೆಗೆ ಡೀಸೆಲ್ ಹಾಕಲಾಗುತ್ತದೆ. ಅಲ್ಲದೇ ಹಾಡಹಗಲೇ ಅಕ್ರಮವಾಗಿ ರಾಜಾರೋಷವಾಗಿ ಈ ದಂಧೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಡೆಲಿವರಿ ಬಾಯ್‌ನಿಂದ ಕಿರುಕುಳ ಆರೋಪ – ಮೊಬೈಲ್ ನಂಬರ್ ಕೊಡುವಂತೆ ಒತ್ತಾಯ, ವಿಡಿಯೋ ಹಂಚಿಕೊಂಡ ಯುವತಿ
ವಿಜಯಪುರ – ಸೋಲಾಪುರ ಹೈವೇನಲ್ಲಿ ಈ ಬಂಕ್ ಇದ್ದು, 24 ಗಂಟೆ ಓಪನ್ ಆಗಿರುತ್ತದೆ. ಗಲ್ಫ್ ರಾಷ್ಟ್ರಗಳ ಯುದ್ಧವನ್ನೇ ಇವರು ವರದಾನವಾಗಿಸಿಕೊಂಡಿದ್ದು, ಈ ಅಕ್ರಮ ದಂಧೆ ಇದೀಗ ಜನಸಾಮನ್ಯರ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ.
ಈ ಅಕ್ರಮ ಡೀಸೆಲ್ ದಂಧೆ ಎಲ್ಲೋ ಬಯಲಲ್ಲಿ ನಡೆಯುತ್ತಿಲ್ಲ. ಹೈವೇಯಲ್ಲಿರುವ ಡಾಬಾದಲ್ಲಿ ನಡೆಯುತ್ತಿದೆ. ಅಷ್ಟೆ ಅಲ್ಲದೇ ಈ ಡಾಬಾ ಪಕ್ಕದಲ್ಲೂ ಅನೇಕ ಡಾಬಾಗಳಿವೆ. ಪ್ರತಿ ದಿನ ನೂರಾರು ಲಾರಿಗಳು ಊಟಕ್ಕಾಗಿ ಈ ಡಾಬಾಗಳಿಗೆ ಬರ್ತಾರೆ. ಯಾವಾಗಲು ಜನ ದಟ್ಟಣೆಯಿಂದ ಕೂಡಿರುತ್ತೆ. ಯಾರಾದ್ರು ಬೀಡಿ, ಸಿಗರೇಟ್ ಕಿಡಿ ಬಿಳಿಸಿದ್ರೆ ಅಥವಾ ಹೋಟೆಲ್ ಕಿಡಿ ಏನಾದ್ರು ಅಪ್ಪಿತಪ್ಪಿ ಈ ಅಕ್ರಮ ಬಂಕ್ ಮೇಲೆ ಬಿದ್ರೆ ನೂರಾರು ಜೀವಗಳು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.
ಒಂದು ಕಡೆ ಅಕ್ರಮ ದಂಧೆ ನಡೆಸುತ್ತಿದ್ದರೆ, ಇನ್ನೊಂದೆಡೆ ಅಮಾಯಕ ಜೀವಗಳ ಪ್ರಾಣ ತೆಗೆಯುವ ಅಡ್ಡೆ ಇದಾಗಿದೆ. ಇಷ್ಟೆಲ್ಲ ರಾಜಾರೋಷವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ನಿದ್ರೆಗೆ ಜಾರಿದ್ದು ಅನುಮಾನ ಮೂಡಿಸುತ್ತಿದೆ.ಇದನ್ನೂ ಓದಿ: Exclusive: ಆರೋಪಿ ದರ್ಶನ್‌ಗೆ ಅತಿದೊಡ್ಡ ಸಂಕಷ್ಟ; ಪ್ರಕರಣದ ಎ-14 ಪ್ರದೋಷ್‌ನಿಂದ ಮಾಫಿ ಸಾಕ್ಷಿಗೆ ಅರ್ಜಿ
