ಬೆಂಗಳೂರು: ಶೌಚಾಲಯಕ್ಕೆ ಹೋಗಬೇಕೆಂದು ಒಂಟಿ ಮಹಿಳೆಯ ಮನೆಗೆ ಬಲವಂತವಾಗಿ ನುಗ್ಗಿ, ಆಕೆಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಡೆಲಿವರಿ ಬಾಯ್ (Delivery Boy) ಒಬ್ಬನನ್ನ ಮಾರತ್ತಹಳ್ಳಿ ಪೊಲೀಸರು (Marathahalli Police) ಬಂಧಿಸಿದ್ದಾರೆ.
ವಿಜಯ್ ಮಲ್ಲಿಕಾರ್ಜುನ್ ಕಾಮತ್ ಬಂಧಿತ ಡೆಲಿವರಿ ಬಾಯ್. ಇದನ್ನೂ ಓದಿ: ಮಸ್ಸೂರಿ ಹೋಂಸ್ಟೇಯಲ್ಲಿ ಟೆಕ್ಕಿ ಅನುಮಾನಾಸ್ಪದ ಸಾವು; ಒಂದು ತಿಂಗಳ ಬಳಿಕ ಪತಿ ಅರೆಸ್ಟ್
We have forwarded your complaint to @dcpwhitefield @acpmarathahalli @marathallips for necessary action.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) July 11, 2026
ಕಾಮುಕ ಮಾಡಿದ್ದೇನು?
ಸಂತ್ರಸ್ತೆ ಘಟನೆಗೆ ಸಂಬಂಧಿಸಿದ ವಿಡಿಯೊವನ್ನ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಂಡಿದ್ದರು. ಈ ವಿಡಿಯೋ ಅನ್ವಯ, ಮಾರತಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ಪಾರ್ಸೆಲ್ ತಲುಪಿಸಲು ಬಂದ ಡೆಲಿವರಿ ಬಾಯ್, ಶೌಚಾಲಯ ಬಳಸಬಹುದೇ ಎಂದು ಕೇಳಿದ್ದಾನೆ. ಆದರೆ, ಆ ಸಮಯದಲ್ಲಿ ಮಹಿಳೆಯು ಮನೆಯಲ್ಲಿ ಒಬ್ಬರೇ ಇದ್ದ ಕಾರಣ, ಅನುಮತಿ ನಿರಾಕರಿಸಿದ್ದಾರೆ. ಆದರೆ, ಅದನ್ನು ಲೆಕ್ಕಿಸದ ಆರೋಪಿ, ಬಲವಂತವಾಗಿ ಮನೆಗೆ ನುಗ್ಗಿದ್ದಾನೆ.
Horrific news from Bengaluru where a delivery partner allegedly forced his way into a flat against a woman’s consent to use the washroom, then exposed himself.
Absolute shame. Immediate, strict legal action must be taken. @Flipkart @myntra #SafetyFirst #Bengaluru pic.twitter.com/9aKRr4gYjt— Sonel (@allthingzabsurd) July 12, 2026
ನಾನು ಹಲವು ಸಲ ಬೇಡ ಎಂದು ನಿರಾಕರಿಸಿದೆ. ಅಪರಿಚಿತರಿಗೆ ಫ್ಲಾಟ್ ಒಳಗೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ತುರ್ತಿದ್ದರೆ, ಅಕ್ಕಪಕ್ಕದ ಪುರುಷರೊಂದಿಗೆ ಮಾತನಾಡಿಕೊಳ್ಳುವಂತೆ ಸಲಹೆ ನೀಡಿದೆ. ಅದ್ಯಾವುದನ್ನೂ ಲೆಕ್ಕಿಸದ ಅವನು, ಚಪ್ಪಲಿಗಳನ್ನು ಕಳಚಿ ಬಲವಂತವಾಗಿ ಒಳಗೆ ನುಗ್ಗಿದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅನುಮತಿ ಇಲ್ಲದೇ, ಶೌಚಾಲಯ ಬಳಸಿದ್ದಲ್ಲದೇ, ಮಹಿಳೆ ಒಂಟಿಯಾಗಿರುವುದನ್ನ ಕಂಡು ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಕಾಮುಕ ಡೆಲಿವರಿ ಬಾಯ್ ಹುಚ್ಚಾಟವನ್ನ ಕಂಡು ಗಾಬರಿದ ಮಹಿಳೆ ಕಣ್ಣಿರು ಹಾಕುತ್ತಾ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಿಪೇರಿ ವೇಳೆ ಕುಸಿದು ಬಿದ್ದ ಮನೆ – ಇಬ್ಬರು ಕಾರ್ಮಿಕರು ದುರ್ಮರಣ
ಬಳಿಕ ಘಟನೆ ಸಂಬಂಧ ಮಾರತ್ತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆತನ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಪರಿಶೀಲನೆಗೂ ಪೊಲೀಸರು ಮುಂದಾಗಿದ್ದಾರೆ.
