ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆ (Heavy Rain) ಸುರಿಯುತ್ತಿರುವ ಹಿನ್ನೆಲೆ ಮೂಡಿಗೆರೆ (Mudigere) ತಾಲೂಕಿನ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ (School) ಇಂದು ರಜೆ (Holiday) ಘೋಷಣೆ ಮಾಡಲಾಗಿದೆ.
ಭಾನುವಾರ ಮಧ್ಯಾಹ್ನದಿಂದ ಮಲೆನಾಡಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ ತಾಲೂಕಿನ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿ ಮೂಡಿಗೆರೆ ತಹಶೀಲ್ದಾರ್ ಅಶ್ವಿನಿ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕಾಶ್ಮೀರ ಕೊಡಗಿನಲ್ಲಿ ಸಾವಿರಾರು ವರ್ಷಗಳ ನಾಗರಿಕತೆಯ ಹೆಜ್ಜೆ – ಕಬ್ಬಿಣ ಯುಗದ ಕುರುಹುಗಳು ಪತ್ತೆ
ಭಾರೀ ಗಾಳಿಗೆ ಮರ ಬಿದ್ದು ಮಲೆನಾಡಿನಾದ್ಯಂತ ತೀವ್ರ ಅನಾಹುತ ಸಂಭವಿಸಿದೆ. ರಸ್ತೆಗೆ ಬೃಹತ್ ಮರಗಳು ಬಿದ್ದು, ಹತ್ತಾರು ಗ್ರಾಮಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದು ಮಲೆನಾಡ ಹತ್ತಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿದೆ. ಭಾರಿ ಮಳೆ ಜೊತೆ ಬೀಸುತ್ತಿರುವ ರಣ ಗಾಳಿಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ತಂದು ಕರಗಿಸಿದ್ರಾ ರಾಮನ ಚಿನ್ನ? – ರೈಲಿನಲ್ಲಿ ಸಾಗಿಸಿ ಬಿಸ್ಕೆಟ್ ಮಾಡಿರುವ ಶಂಕೆ
