ಅತಿದೊಡ್ಡ ಪಕ್ಷವಾಗುವತ್ತ ವಿಜಯ್ ಟಿವಿಕೆ – ದಳಪತಿ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತಮಿಳುನಾಡಲ್ಲಿ ಹೊಸ ಯುಗಾರಂಭ – ದಳಪತಿ ವಿಜಯ್‌ಗೆ ಡಿಕೆಶಿ ಅಭಿನಂದನೆ
16ನೇ ಸುತ್ತು – ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ 7,516 ಮತಗಳ ಮುನ್ನಡೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಇನ್ನೇನು ಕ್ಲೈಮ್ಯಾಕ್ಸ್ ಹಂತ ತಲುಪುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು 52,714 ಮತಗಳನ್ನು ಪಡೆದುಕೊಂಡಿದ್ದು, 7,516 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 45,196 ಮತಗಳನ್ನ ಪಡೆದು ಹಿನ್ನಡೆಯಲ್ಲಿದ್ದಾರೆ.
Urgent Message | ರಾತ್ರಿವರೆಗೂ ಮತ ಎಣಿಕೆ ಕೇಂದ್ರಗಳ ಸುತ್ತ ಕಾವಲಿರಿ – ಟಿಎಂಸಿ ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ಕರೆ
ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ವಿಜಯೋತ್ಸವ ಬ್ಯಾನ್!
ತಮಿಳುನಾಡಲ್ಲಿ ಟಿವಿಕೆಗೆ ಮುನ್ನಡೆ – ವಿಜಯ್‌ಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ

ಮಧ್ಯಾಹ್ನ 1 ಗಂಟೆ ಟ್ರೆಂಡ್ : ಯಾವ ರಾಜ್ಯದಲ್ಲಿ ಯಾರಿಗೆ ಮುನ್ನಡೆ?

ಬಂಗಾಳದಲ್ಲಿ ನಮ್ಮದೇನು ಇರ್ಲಿಲ್ಲ, ಕೇರಳದಲ್ಲಿ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ: ಸಿದ್ದರಾಮಯ್ಯ
ಕೇರಳದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಂಗಾಳದಲ್ಲಿ ನಮ್ಮದೇನು ಇರಲಿಲ್ಲ, ಅಸ್ಸಾಂ ಸೋಲು ಒಪ್ಪುತ್ತೇವೆ. ಆದ್ರೆ ಕೇರಳದಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ. ತಮಿಳುನಾಡು, ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು. ನಟ ವಿಜಯ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ತಮಿಳುನಾಡು ‘ವಿಜಯ’ ಭರವಸೆಗಳೇನು..?
- ಮಹಿಳೆಯರಿಗೆ ತಿಂಗಳಿಗೆ 2,500 ರೂ. ಸಹಾಯಧನ
- ಸಣ್ಣ ರೈತರ ಬೆಳೆ ಸಾಲ ಮನ್ನಾ
- ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ 3,000 ರೂ. ಭತ್ಯೆ
- ಸಹೋದರಿ, ಮಗಳ ಮದುವೆಗೆ 8 ಗ್ರಾಂ ಚಿನ್ನ
- 200 ಯೂನಿಟ್ ಉಚಿತ ವಿದ್ಯುತ್, ಕೊಳವೆ ನೀರು ಸರಬರಾಜು.
- ಪ್ರತಿ ವರ್ಷ ಆರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವ ಭರವಸೆ
- ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ.
- ಪದವೀಧರರಿಗೆ 4,000 ಭತ್ಯೆ, ಡಿಪ್ಲೊಮಾ ಪಡೆದವರಿಗೆ 2,500 ರೂ.

ಬಾಗಲಕೋಟೆ ಉಪ ಚುನಾವಣೆ ಫಲಿತಾಂಶ ಪ್ರಕಟ – ʻಕೈʼ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು
ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೊನೇ ಹಾಗೂ 23ನೇ ಸುತ್ತಿನ ಮುಕ್ತಾಯದ ವೇಳೆಗೆ ಉಮೇಶ್ ಮೇಟಿ ಒಟ್ಟು 87,941 ಮತಗಳನ್ನ ಪಡೆದು 21,866 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76,075 ಮತಗಳನ್ನ ಪಡೆದು ಪರಾಭವಗೊಂಡಿದ್ದಾರೆ.

ಮೊದಲು ಮತದಾನ, ಬಳಿಕ ಜಲಪಾನ – ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ‘ಮಾಸ್ಟರ್ ಪ್ಲಾನ್’ ವರ್ಕೌಟ್!
ಪಶ್ಚಿಮ ಬಂಗಾಳದ ಚುನಾವಣಾ (West Bengal Election) ರಾಜಕಾರಣದಲ್ಲಿ ಬಿಜೆಪಿ (BJP) ಈ ಬಾರಿ ಅಚ್ಚರಿಯ ಫಲಿತಾಂಶ ನೀಡಲು ಕಮಲ ನಾಯಕರ ‘ಮೈಕ್ರೋ ಮ್ಯಾನೇಜ್‌ಮೆಂಟ್’ ಮತ್ತು ಸಮಯೋಚಿತ ತಂತ್ರಗಾರಿಕೆಗಳೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ವಿರೋಧಿಗಳ ಕೋಟೆಯನ್ನು ಭೇದಿಸಲು ಬಿಜೆಪಿ ರೂಪಿಸಿದ್ದ “ಬೆಳ್ಳಂಬೆಳಗ್ಗೆ ಬೂತ್‌ಗೆ ನಡಿ” ಎಂಬ ಅಭಿಯಾನ ಈಗ ಭಾರಿ ಚರ್ಚೆಯಾಗುತ್ತಿದೆ.
ಲೇಟ್ ಬೇಡ, ಲೇಟೆಸ್ಟ್ ಆಗಿ ಮತ ಹಾಕಿ
ಸಾಮಾನ್ಯವಾಗಿ ಜನರು ಮಧ್ಯಾಹ್ನದ ನಂತರ ನಿರಾಳವಾಗಿ ಮತದಾನ (Vote) ಮಾಡಲು ಇಷ್ಟಪಡುತ್ತಾರೆ. ಆದರೆ ಬಂಗಾಳದ ಸೂಕ್ಷ್ಮ ಪರಿಸ್ಥಿತಿಯಲ್ಲಿ ಇದು ಬಿಜೆಪಿಗೆ ಮುಳುವಾಗುತ್ತಿತ್ತು. ಮತದಾರರು ಬೂತ್‌ಗೆ ಬರುವಷ್ಟರಲ್ಲಿ ಅವರ ಹೆಸರಿನಲ್ಲಿ ಬೇರೆಯವರು ‘ನಕಲಿ ಮತ’ ಚಲಾಯಿಸಿರುತ್ತಿದ್ದರು. ಇದನ್ನು ತಡೆಯಲು ಬಿಜೆಪಿ ನಾಯಕರು ಈ ಬಾರಿ “ಮೊದಲು ಮತದಾನ, ಬಳಿಕ ಜಲಪಾನ” ಎಂಬ ಸಂದೇಶವನ್ನು ಪ್ರತಿ ಮನೆಮನೆಗೂ ತಲುಪಿಸಿದ್ದರು. “ತಿಂಡಿ ತಿನ್ನುವ ಮುನ್ನವೇ ನಿಮ್ಮ ಹಕ್ಕನ್ನು ಚಲಾಯಿಸಿ” ಎಂಬ ಕರೆಗೆ ಮತದಾರರು ಅಭೂತಪೂರ್ವ ಸ್ಪಂದನೆ ನೀಡಿದ್ದಾರೆ.
ನಕಲಿ ಮತದಾನಕ್ಕೆ ಬ್ರೇಕ್
ಹಿಂದಿನ ಚುನಾವಣೆಗಳಲ್ಲಿ ಟಿಎಂಸಿ (TMC) ಕಾರ್ಯಕರ್ತರು ಮತಗಟ್ಟೆಗಳನ್ನು ವಶಪಡಿಸಿಕೊಂಡು ಮೊದಲೇ ಮತದಾನ ಮಾಡುತ್ತಿದ್ದರಿಂದ ಬಿಜೆಪಿಯ ನಿಷ್ಠಾವಂತ ಮತದಾರರಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಈ ಬಾರಿ ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಸ್ಥಳೀಯ ನಾಯಕರಿಗೆ ತಮ್ಮ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮತದಾನ ಮಾಡಿಸುವ ಗುರಿಯನ್ನು ನೀಡಿತ್ತು. ಮುಂಜಾನೆಯೇ ಮತಗಟ್ಟೆಗಳ ಮುಂದೆ ಬಿಜೆಪಿ ಬೆಂಬಲಿಗರನ್ನು ಸಾಲುಗಟ್ಟುವಂತೆ ಮಾಡುವ ಮೂಲಕ ಅಕ್ರಮಗಳಿಗೆ ತಡೆಯೊಡ್ಡಲಾಗಿತ್ತು.
‘ನೋಟಾ’ ವಿರುದ್ಧ ಜಾಗೃತಿ ಅಭಿಯಾನ
ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯ ಕುರಿತು ಸಣ್ಣಪುಟ್ಟ ಅತೃಪ್ತಿಗಳಿದ್ದವು. ಇದರಿಂದ ಬೇಸತ್ತು ಮತದಾರರು ನೋಟಾ (None of the Above) ಒತ್ತಲು ಮುಂದಾಗಿದ್ದರು. ಹಲವು ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಹೆಚ್ಚಿರುತ್ತಿದ್ದವು. ಈ ಅಪಾಯವನ್ನು ಅರಿತ ಬಿಜೆಪಿ ನಾಯಕರು “ನೋಟಾ ಬೇಡ, ನಿಮ್ಮ ಮತ ವ್ಯರ್ಥ ಮಾಡಬೇಡಿ” ಎಂಬ ಅಭಿಯಾನ ನಡೆಸಿದರು. ಅತೃಪ್ತ ಮತದಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಪಕ್ಷವು, ಪ್ರತಿಯೊಂದು ಮತವೂ ಗೆಲುವಿಗೆ ನಿರ್ಣಾಯಕ ಎಂಬ ಹಠಕ್ಕೆ ಬಿದ್ದಂತೆ ಕೆಲಸ ಮಾಡಿತು.
ಒಟ್ಟಿನಲ್ಲಿ ತಳಮಟ್ಟದ ಕಾರ್ಯಕರ್ತರ ಶ್ರಮ ಮತ್ತು ಸಮಯ ಪ್ರಜ್ಞೆಯ ತಂತ್ರಗಾರಿಕೆಗಳು ಬಿಜೆಪಿಗೆ ಬಂಗಾಳದ ನೆಲದಲ್ಲಿ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿವೆ. ವಿರೋಧಿಗಳ ಗೂಂಡಾಗಿರಿ ಮತ್ತು ಮತಗಳ ಸೋರಿಕೆಯನ್ನು ತಡೆಯುವಲ್ಲಿ ಬಿಜೆಪಿ ಹಾಕಿದ ಈ ಯೋಜನೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.
ಯಾರಾಗ್ತಾರೆ ಕೇರಳದ ಮುಂದಿನ ಸಿಎಂ? – ಅಚ್ಚರಿ ಉತ್ತರ ಕೊಟ್ಟ ಶಶಿ ತರೂರ್!
ಕೇರಳಂ ನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 85 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಈ ಮಧ್ಯೆ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅಚ್ಚರಿ ಉತ್ತರ ಕೊಟ್ಟಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿದ ತರೂರ್, ಪ್ರಾಮಾಣಿಕವಾಗಿ ಹೇಳಬೇಕೆಂದ್ರೆ, ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಯಾವುದೇ ಸುಳಿವು ಇಲ್ಲ. ಗೆದ್ದ ಶಾಸಕರ ಜೊತೆಗೆ ಪಕ್ಷದ ಅಧ್ಯಕ್ಷರು ಸಮಾಲೋಚನೆ ನಡೆಸುತ್ತಾರೆ. ನಂತರ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉತ್ತರಿಸಿದ್ದಾರೆ.

ಶತಕದತ್ತ ಕಾಂಗ್ರೆಸ್ – ಕೇರಳದ ಕ್ಯಾಲಿಕಟ್ ತಲುಪಿದ ಜಮೀರ್ ಅಹ್ಮದ್
ಬಹುಮತದತ್ತ ದಾಪುಗಾಲು – TVK ಫಸ್ಟ್ ರಿಯಾಕ್ಷನ್
RG ಕರ್ ವೈದ್ಯಕೀಯ ಕಾಲೇಜು ಸಂತ್ರಸ್ತೆಯ ತಾಯಿಗೆ ಮುನ್ನಡೆ
ಪಣಿಹಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ತಾಯಿ ರತ್ನ ದೇಬ್ನಾಥ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪ್ರಸ್ತುತ ಕ್ಷೇತ್ರದಿಂದ 2,763 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬೆಳಗ್ಗೆ 11 ಗಂಟೆಯ ಟ್ರೆಂಡ್ – ಯಾವ ರಾಜ್ಯದಲ್ಲಿ ಯಾರು ಮುನ್ನಡೆ?
ತಮಿಳುನಾಡಲ್ಲಿ ನಮ್ಮ ಸರ್ಕಾರ ಫಿಕ್ಸ್ ಎಂದ TVK
ತಮಿಳುನಾಡಲ್ಲಿ TVK ಸರ್ಕಾರ ರಚಿಸಲಿದೆ ಎಂದು ಪಕ್ಷದ ನಾಯಕ ಫೆಲಿಕ್ಸ್ ಜೆರಾಲ್ಡ್ ಹೇಳಿದ್ದಾರೆ. ಬೆಳಗ್ಗೆ 11:15 ಗಂಟೆ ಸುಮಾರಿಗೆ ಟಿವಿಕೆ 105, ಆಡಳಿತ ಪಕ್ಷ ಡಿಎಂಕೆ (DMK) 50 ಎಐಎಡಿಎಂಕೆ ಮೈತ್ರಿಕೂಟ 77 ಸ್ಥಾನಗಳು ಹಾಗೂ ಇತರೇ 2 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.

13ನೇ ಸುತ್ತು – ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ
13ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 10,321 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಉಮೇಶ್ ಮೇಟಿ 53,849 ಮತಗಳನ್ನ ಪಡೆದುಕೊಂಡಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 43,528 ಮತಗಳನ್ನ ಪಡೆದುಕೊಂಡಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್
ಬಿಜೆಪಿ 95, ಕಾಂಗ್ರೆಸ್ 29, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ
ದಾವಣಗೆರೆಯಲ್ಲಿ 6ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
8,539 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ. ಸಮರ್ಥ್ ಶಾಮನೂರಿಗೆ 17,189, ಶ್ರೀನಿವಾಸ್ ದಾಸಕರಿಯಪ್ಪ 25,728, ಎಸ್‌ಡಿಪಿಐ ಅಫ್ಸರ್ ಕೊಡ್ಲಿಪೇಟೆ 2,659 ಮತಗಳು
ಪಶ್ಚಿಮ ಬಂಗಾಳದಲ್ಲಿ 170 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
ಬಿಜೆಪಿ 170, ಟಿಎಂಸಿ 115, ಕಾಂಗ್ರೆಸ್ 2, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ
ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ 10,881 ಮತಗಳ ಮುನ್ನಡೆ
ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ. ಚೆನ್ನೈನಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿದ್ದ ಚಯರ್,ಶಾಮಿಯಾನ ತೆಗೆದ ಕಾರ್ಯಕರ್ತರು
ಶಾಮಿಯಾನ, ಚಯರ್ ತೆಗೆದ ಡಿಎಂಕೆ
ತಮಿಳುನಾಡಿನಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಡಿಎಂಕೆ. ಚೆನ್ನೈನಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವಕ್ಕೆ ಸಿದ್ಧತೆ ನಡೆಸಿದ್ದ ಚಯರ್, ಶಾಮಿಯಾನ ತೆಗೆದ ಕಾರ್ಯಕರ್ತರು. ಆರಂಭಿಕ ಮುನ್ನಡೆ ವೇಳೆ ಸಂಭ್ರಮಿಸಿದ್ದ ಡಿಎಂಕೆ ಕಾರ್ಯಕರ್ತರು
ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ 13,391 ಮತಗಳ ಮುನ್ನಡೆ
ಕಾಂಗ್ರೆಸ್ -27,314,
ಬಿಜೆಪಿ – 13,923
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
ಬಿಜೆಪಿ 157, ಟಿಎಂಸಿ 119, ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಮುನ್ನಡೆ
ಅಸ್ಸಾಂನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
ಬಿಜೆಪಿ 80, ಕಾಂಗ್ರೆಸ್ 26, ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ
ಮೂರನೇ ಸ್ಥಾನಕ್ಕೆ ಕುಸಿದ ಡಿಎಂಕೆ
ತಮಿಳುನಾಡು – ಟಿವಿಕೆ: 76, ಎಐಎಡಿಎಂಎಕೆ 57, ಡಿಎಂಕೆ 51 ಕ್ಷೇತ್ರಗಳಲ್ಲಿ ಮುನ್ನಡೆ
ದಾವಣಗೆರೆಯಲ್ಲಿ 577 ಮತಗಳಿಂದ ಬಿಜೆಪಿ ಮುನ್ನಡೆ
ಶ್ರೀನಿವಾಸ್ ದಾಸಕರಿಯಪ್ಪ – 3711, ಕಾಂಗ್ರೆಸ್ – ಸಮರ್ಥ್ ಶಾಮನೂರು 3134
ಬಾಗಲಕೋಟೆಯಲ್ಲಿ ಕಾಂಗ್ರೆಸ್‌ಗೆ ಮುನ್ನಡೆ
ಬಿಜೆಪಿಯ ವೀರಣ್ಣ ಚರಂತಿಮಠಗೆ ಹಿನ್ನಡೆ, ಉಮೇಶ್ ಮೇಟಿ 8,600 ಮತಗಳ ಮುನ್ನಡೆ
ತಮಿಳುನಾಡಿನಲ್ಲಿ ವಿಜಯ್ ಸುನಾಮಿ
ಟಿವಿಕೆ 61, ಡಿಎಂಕೆ 54, ಎಐಎಡಿಎಂಕೆ 40 ಮುನ್ನಡೆ
ಬೆಳಗ್ಗೆ 9 ಗಂಟೆ ಟ್ರೆಂಡ್ ಯಾರಿಗೆ ಮುನ್ನಡೆ

ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ
ಶ್ರೀನಿವಾಸ್ ದಾಸಕರಿಯಪ್ಪಗೆ ಮುನ್ನಡೆ, ಸಮರ್ಥ್ ಶಾಮನೂರ್‌ಗೆ ಹಿನ್ನಡೆ – 1 ರಿಂದ 14 ಬೂತ್ ಗಳಲ್ಲಿ ಬಿಜೆಪಿ 1000 ಮತಗಳ ಮುನ್ನಡೆ
ಕೇರಳದ 5 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಯುಡಿಎಫ್ 70, ಎಲ್‌ಡಿಎಫ್ 65, ಬಿಜೆಪಿ 5 ಕ್ಷೇತ್ರಗಳಲ್ಲಿ ಮುನ್ನಡೆ
ತಮಿಳುನಾಡಿನಲ್ಲಿ ಡಿಎಂಕೆಗೆ ಮುನ್ನಡೆ
ಡಿಎಂಎಕೆ 56, ಎಐಎಡಿಎಂಕೆ 26, ಟಿವಿಕೆ 19 ಕ್ಷೇತ್ರಗಳಲ್ಲಿ ಮುನ್ನಡೆ
ಆರಂಭಿಕ ಮುನ್ನಡೆ ಯಾರಿಗೆ ಎಷ್ಟು?
ಪಶ್ಚಿಮಬಂಗಾಳ – ಬಿಜೆಪಿ : 106, ಟಿಎಂಸಿ : 100
ಕೇರಳ – ಎಲ್‌ಡಿಎಫ್ : 61, ಯುಡಿಎಫ್ : 50, ಬಿಜೆಪಿ : 2
ತಮಿಳುನಾಡು – ಡಿಎಂಕೆ+ : 51, ಎನ್‌ಡಿಎ : 21, ಟಿವಿಕೆ : 8
ಅಸ್ಸಾಂ – ಎನ್‌ಡಿಎ: 62, ಕಾಂಗ್ರೆಸ್ : 9
ಪುದುಚೇರಿ – ಬಿಜೆಪಿ+ : 13, ಕಾಂಗ್ರೆಸ್+ : 4
ಪಶ್ಚಿಮ ಬಂಗಾಳದಲ್ಲಿ ನೆಕ್-ಟು-ನೆಕ್‌ಸ್ಪರ್ಧೆ
ಬಿಜೆಪಿ 103, ಟಿಎಂಸಿ 106 ಕ್ಷೇತ್ರಗಳಲ್ಲಿ ಮುನ್ನಡೆ
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ
ದಾವಣಗೆರೆಯಲ್ಲಿ ಸಮರ್ಥ್ ಶಾಮನೂರು, ಬಾಗಲಕೋಟೆಯಲ್ಲಿ ಉಮೇಶ ಮೇಟಿ ಮುನ್ನಡೆ
ಮಮತಾ ಮುನ್ನಡೆ
ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿಗೆ ಮುನ್ನಡೆ, ಸುವೇಂದು ಅಧಿಕಾರಿಗೆ ಹಿನ್ನಡೆ
ಕೇರಳದಲ್ಲಿ ನೆಕ್-ಟು-ನೆಕ್ ಸ್ಪರ್ಧೆ
ಯುಡಿಎಫ್ 65, ಎಲ್‌ಡಿಎಫ್ 60 ಕ್ಷೇತ್ರಗಳಲ್ಲಿ ಮುನ್ನಡೆ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ
ಬಿಜೆಪಿ 76, ಟಿಎಂಸಿ 76 ಕ್ಷೇತ್ರಗಳಲ್ಲಿ ಮುನ್ನಡೆ
ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ
ಅಂಚೆ ಮತೆಣಿಕೆಯಲ್ಲಿ ಬಿಜೆಪಿ 35, ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಮುನ್ನಡೆ
ದಾವಣಗೆರೆಯಲ್ಲಿ ಕಾಂಗ್ರೆಸ್ ಮುನ್ನಡೆ
ಅಂಚೆ ಮತ ಎಣಿಕೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಕಾಂಗ್ರೆಸ್ ಮುನ್ನಡೆ
ಟಿಎಂಸಿ, ಬಿಜೆಪಿ ಮಧ್ಯೆ ನಿಖಟ ಸ್ಪರ್ಧೆ
ಅಂಚೆ ಮತದಾನದಲ್ಲಿ ಟಿಎಂಸಿ 51, 65 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಬಾಗಲಕೋಟೆ ಉಪಚುನಾವಣೆ
ಕಾಂಗ್ರೆಸ್ಸಿನ ಉಮೇಶ್ ಮೇಟಿಗೆ ಆರಂಭಿಕ ಮುನ್ನಡೆ
ದಾವಣಗೆರೆಯಲ್ಲಿ ಡೋರ್ ತೆರೆಯಲು ಪರದಾಟ
ಸ್ಟ್ರಾಂಗ್ ರೂಂ ಕೀ ಮಿಸ್ ಮ್ಯಾಚ್. ಸುತ್ತಿಗೆ ಮೂಲಕ ಡೋರ್ ಒಡೆದು ಸ್ಟ್ರಾಂಗ್ ರೂಂ ಓಪನ್
ಅಂಚೆ ಮತಗಳ ಎಣಿಕೆ ಆರಂಭ
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಬೆಳಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಆರಂಭ












