– ಈ ಅವಧಿಯಲ್ಲೇ ಡಿಕೆಶಿಗೆ ಅವಕಾಶ ಸಿಗುತ್ತೆ ಎಂದ ಶಾಸಕ
ರಾಮನಗರ: ಸಿದ್ದರಾಮಯ್ಯ (Siddaramaiah) ನಂತರ ಸಿಎಂ ರೇಸ್‌ನಲ್ಲಿರೋದು ಡಿಕೆಶಿ ಮಾತ್ರ. ಬೇರೆಯವರೂ ರೇಸ್‌ನಲ್ಲಿದ್ದಾರೆ, ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತೆ. ಸದ್ಯಕ್ಕೆ ಸಿದ್ದರಾಮಯ್ಯನವರು ಬೇಡ ಅಂದಾಗ ಆ ಸ್ಥಾನದ ರೇಸ್‌ನಲ್ಲಿರೋದು ಡಿಕೆಶಿ. ಈ ಅವಧಿಯಲ್ಲೇ ಡಿಕೆಶಿಗೆ ಅವಕಾಶ ಸಿಗುತ್ತೆ. ನಮ್ಮ ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತೆ ಎಂದು ರಾಮನಗರದಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ಡಿ.ಸುಧಾಕರ್ ಅನಾರೋಗ್ಯ ವಿಚಾರದ ಬಗ್ಗೆ ಹೆಚ್ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇಂತಹ ನಾಯಕರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಬಾಲಿಷವಾದ ಹೇಳಿಕೆ. ಯಾವ ಆಧಾರದಲ್ಲಿ ಇದನ್ನ ಹೇಳಿದ್ದಾರೆ ಅಂತ ಗೊತ್ತಿಲ್ಲ. ಯಾರು ಹೆಬ್ಬೆಟ್ಟು ಹಾಕಿಸಿಕೊಳ್ಳಲು ಹೋಗಿದ್ದಾರೆ? ಡಿಕೆಶಿಗೂ-ಸುಧಾಕರ್‌ಗೂ ಹಳೇ ವಿಶ್ವಾಸ. ಅಂದಿನಿಂದ ಇಂದಿನವರೆಗೂ ಅವರ ಕುಟುಂಬದ ಜೊತೆ ಡಿಕೆಶಿ ನಿಂತಿದ್ದಾರೆ. ಅವರ ಆರೋಗ್ಯದ ವಿಚಾರ ನೋಡಿಕೊಳ್ಳಲು ಕುಣಿಗಲ್ ಶಾಸಕ ರಂಗನಾಥ್‌ಗೆ ತಿಳಿಸಿದ್ದಾರೆ. ಅವರ ಆರೋಗ್ಯದ ಕಡೆ ಮೊದಲು ಗಮನ ಹರಿಸೋಣ. ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನ ಕೊಟ್ಟು ಕುಮಾರಸ್ವಾಮಿ ಸಣ್ಣವರಾಗೋದು ಬೇಡ ಎಂದು ಹೆಚ್ಡಿಕೆಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ಟಾಂಗ್ ಕೊಟ್ಟಿದ್ದಾರೆ.
ಸಂಪುಟ ಪುನರಚನೆ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ನಾವು ಮನವಿ ಮಾಡಿದ್ದೀವಿ. ಹೈಕಮಾಂಡ್ ಶೀಘ್ರದಲ್ಲಿ ತೀರ್ಮಾನ ತಗೆದುಕೊಳ್ಳುತ್ತೆ. ಹೈಕಮಾಂಡ್ ಯಾಕೆ ವಿಳಂಬ ಮಾಡ್ತಿದೆ ಗೊತ್ತಿಲ್ಲ. ನಾಳೆಯೇ ಸಂಪುಟ ವಿಸ್ತಾರಣೆ ಮಾಡಿದ್ರೂ ನಮಗೆ ಖುಷಿ. ನಾವು ಅದನ್ನ ಹೈಕಮಾಂಡ್ ಮಾಡಲು ಆಗಲ್ಲ. ನಮ್ಮ ಹೈಕಮಾಂಡ್ ವೀಕ್ ಇಲ್ಲ, ಸ್ಟ್ರಾಂಗ್ ಇದೆ. ಸಂಪುಟ ರಚನೆ ಬಗ್ಗೆ ಸಾಧಕಬಾಧಕಗಳ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಹಾಗಾಗಿ, ವಿಳಂಬ ಆಗ್ತಿರೋದು ಎಂದು ತಿಳಿಸಿದ್ದಾರೆ.

