ಚಿಕ್ಕೋಡಿ: “ನನಗೆ 620ಕ್ಕಿಂತ ಹೆಚ್ಚು ಅಂಕ ಸಿಗಬಹುದು ಎಂಬ ನಿರೀಕ್ಷೆ ಇತ್ತು. 625 ಅಂಕ ಪಡೆದಿದ್ದಕ್ಕೆ ಬಹಳ ಸಂತಸವಾಗುತ್ತಿದೆ” – ಇದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Exam) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ್ (Prarthana Nagappa Biradar Patil) ಅವರ ಸಂಭ್ರಮದ ನುಡಿಗಳು.
ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿಕ್ಕೋಡಿ (Chikkodi) ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲ್ಲೂಕಿನ ಕಟಗೇರಿಯ ಗ್ರಾಮೀಣ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ ಅವರನ್ನು ಪಬ್ಲಿಕ್ ಟಿವಿ ಮಾತನಾಡಿಸಿತು.
ಪೋಷಕರು, ಶಿಕ್ಷಕರು ನನಗೆ ಬಹಳ ಪ್ರೋತ್ಸಾಹ ನೀಡಿದರು. ಮುಂದೆ ನೀಟ್ ಪರೀಕ್ಷೆ ಬರೆದು ಮೆಡಿಕಲ್ ಓದಬೇಕು ಎಂಬ ಹಂಬಲವನ್ನು ಅವರು ವ್ಯಕ್ತಪಡಿಸಿದರು. ಇದನ್ನೂ ಓದಿ: SSLC Result 2026 | ಪರೀಕ್ಷೆ-1 ಫಲಿತಾಂಶ ಪ್ರಕಟ – ಇತಿಹಾಸದಲ್ಲೇ ಫಸ್ಟ್ ಟೈಂ ಶೇ.94.10 ರಷ್ಟು ಫಲಿತಾಂಶ
ಪ್ರಾರ್ಥನಾ ಅವರ ತಂದೆ ತಂದೆ ನಾಗಪ್ಪ ಬಿರಾದಾರ ಅವರು ಸರ್ಕಾರಿ ಶಾಲೆ ಶಿಕ್ಷಕರಾಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದೇನೆ. ಪುತ್ರಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು ಕೇಳಿ ನನಗೆ ಸಂತೋಷವಾಯಿತು. ಖಾಸಗಿ ಶಾಲೆಗಳು ಹೊರನೋಟದಲ್ಲಿ ಚೆನ್ನಾಗಿ ಕಾಣುತ್ತದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಬಂದಿರುತ್ತಾರೆ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎನ್ನುವುದಕ್ಕೆ ನನ್ನ ಮಗಳೇ ಉದಾಹರಣೆ ಸಂತಸಪಟ್ಟರು. ಇದನ್ನೂ ಓದಿ: SSLC Result 2026 | ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ – 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ
10ನೇ ತರಗತಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು 7 ವಿದ್ಯಾರ್ಥಿಗಳು ಪಡೆದರೆ, 624 ಅಂಕವನ್ನು 21 ವಿದ್ಯಾರ್ಥಿಗಳು ಹಾಗೂ 623 ಅಂಕವನ್ನು 28 ವಿದ್ಯಾರ್ಥಿಗಳು ಪಡೆದಿದ್ದಾರೆ. ಇದನ್ನೂ ಓದಿ: ಹಿಂದಿಯಲ್ಲಿ ಕಳೆದ ವರ್ಷ 75 ಸಾವಿರ, ಈ ಬಾರಿ 9,481 ಮಂದಿ ಫೇಲ್
7 ಟಾಪರ್‌ಗಳು ಯಾರು?
1. ಪ್ರಾರ್ಥನಾ ಪಾಟೀಲ್ – ಸರ್ಕಾರಿ ಪ್ರೌಢಶಾಲೆ, ಕಾಟಗೇರಿ-ಅಥಣಿ ತಾ. (ಬೆಳಗಾವಿ)
2. ಭರತ್ ಜಿ – ಶ್ರೀವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಬ್ಬಳ-ಚನ್ನಗಿರಿ ತಾ. (ದಾವಣಗೆರೆ -ಅನುದಾನಿತ)
3. ಬೃಂದಾ ತಾಪ್ಸಿ – ಸೆಂಟ್ ಮೇರಿಸ್ ಹೈಸ್ಕೂಲ್ ಫೋರ್ಟ್, ಚಿಕ್ಕಮಗಳೂರು (ಅನುದಾನಿತ)
4. ಧನುಷ್ – ಪೂರ್ಣ ಪ್ರಜ್ಞಾ ಎಜುಕೇಷನ್ ಸೆಂಟರ್, ಸದಾಶಿವನಗರ-ಬೆಂಗಳೂರು (ಅನುದಾನಿತ)
5. ಪ್ರೀತಂ ಪೂಜಾರಿ – ಮದರ್ ಥೆರೇಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣ-ಕುಂದಾಪುರ (ಉಡುಪಿ ಅನುದಾನಿತ)
6. ಸೌಜನ್ಯ ಕಂದಕೂರ – ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ನಗರಬೆಟ್ಟ-ಮುದ್ದೇಬಿಹಾಳ (ವಿಜಯಪುರ-ಅನುದಾನಿತ)
7. ಸುಖದೇವ – ಬಿವಿಆರ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಮಾನ್ವಿ (ರಾಯಚೂರು- ಅನುದಾನಿತ)



