ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ (SSLC Results) ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ ತೃತೀಯ ಭಾಷೆ ಹಿಂದಿಯಲ್ಲಿ (Hindi) 9,481 ಮಂದಿ ಫೇಲ್ ಆಗಿದ್ದಾರೆ.
ಒಟ್ಟು 7,02,009 ಮಂದಿ ಹಿಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 6,92,528 ಮಂದಿ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹಿಂದಿಯಲ್ಲಿ 98.7% ಫಲಿತಾಂಶ ಪ್ರಕಟವಾಗಿದೆ. ಇದನ್ನೂ ಓದಿ: SSLC Result 2026 | ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ – 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ
ಕಳೆದ ವರ್ಷ 5,99,859 ಮಂದಿ ಪರೀಕ್ಷೆ ಬರೆದಿದ್ದು 75,792 ಮಂದಿ ಫೇಲ್ ಆಗುವ ಮೂಲಕ 87.4% ಫಲಿತಾಂಶ ದಾಖಲಾಗಿತ್ತು. ಇದನ್ನೂ ಓದಿ: SSLC Result 2026 | ಪರೀಕ್ಷೆ-1 ಫಲಿತಾಂಶ ಪ್ರಕಟ – ಇತಿಹಾಸದಲ್ಲೇ ಫಸ್ಟ್ ಟೈಂ ಶೇ.94.10 ರಷ್ಟು ಫಲಿತಾಂಶ
ತೃತೀಯ ಭಾಷೆ ಅರೆಬಿಕ್, ಕೊಂಕಣಿ, ಸಂಸ್ಕೃತ, ಮರಾಠಿಯಲ್ಲಿ ಯಾರೂ ಫೇಲ್ ಆಗಿಲ್ಲ. ಇಂಗ್ಲಿಷ್ 1,180, ಹಿಂದಿ ಎನ್‌ಸಿಆರ್‌ಟಿ 6, ತುಳು 1, ಉರ್ದುವಿನಲ್ಲಿ 6 ಮಂದಿ ಫೇಲ್ ಆಗಿದ್ದಾರೆ.




