ಬೆಂಗಳೂರು: ವರದಕ್ಷಿಣೆ ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಬೆಂಗಳೂರಿನ ಹೆಚ್ಎಎಲ್ ಪೊಲೀಸರು (Bengaluru HAL Police) ಜೈಪುರದಲ್ಲಿ ಟ್ರ್ಯಾಪ್ ಆಗಿರುವ ಘಟನೆ ನಡೆದಿದೆ.
ಆರೋಪಿಯ (Accused) ಬಂಧನಕ್ಕೆ ತೆರಳಿದ್ದ ಪೊಲೀಸರು, ಆತನ ಬಳಿ ಹಣಕ್ಕೆ ಬೇಡಿಕೆಯಿಟ್ಟು ರಾಜಸ್ಥಾನದ ಎಸಿಬಿ ಅಧಿಕಾರಿಗಳಿಗೆ ಲಾಕ್ ಆಗಿದ್ದಾರೆ. ಇದನ್ನೂ ಓದಿ: Hassan | ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಸಾವು
ಪಿಎಸ್ಐ ಅನಿತಾ, ಹೆಡ್ ಕಾನ್ಸ್ಟೇಬಲ್ ಉಳುವಪ್ಪ, ಕಾನ್ಸ್ಟೇಬಲ್ ಯತೀಶ್ ಟ್ರ್ಯಾಪ್ ಆದ ಪೊಲೀಸರು. ಇದನ್ನೂ ಓದಿ: ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ಮೇಲೆ ಬಿದ್ದ ಪೊಲೀಸ್ ಮೇಲೆ ಹರಿದ ಟ್ರಕ್; ದಾರುಣ ಸಾವು

ವರದಕ್ಷಿಣೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಶುಕ್ರವಾರ ಆರೋಪಿ ಬಂಧನಕ್ಕೆ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದರು. ಈ ವೇಳೆ ಸಿಕ್ಕ ಆರೋಪಿ ಬಳಿ 2 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆದ್ರೆ ಆರೋಪಿ ಸಾಧ್ಯವಾದಷ್ಟು ಹಣ ಕೊಡುವುದಾಗಿ ಹೇಳಿದ್ದ. ಜೈಪುರದ ಗಂಗೌರ್ನ ಹೋಟೆಲ್ವೊಂದರಲ್ಲಿ 40,000 ರೂ. ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಲಾಕ್ ಆಗಿದ್ದಾರೆ.
ಸದ್ಯ ಹೆಚ್ಎಎಲ್ ಪೊಲೀಸರನ್ನೇ ಬಂಧಿಸಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಪ್ರೇಯಸಿಯ ಕೊಲೆ
