ಚಿತ್ರದುರ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿಗೆ (Gruhalakshmi) ಮರು ಅರ್ಜಿಸಲ್ಲಿಕೆಗೆ ಸೂಚಿಸಿದ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದ (Chitradurga) ಫಲಾನುಭವಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರ ಅಧಿಕಾರಕ್ಕೆ ಬರುವಾಗ ಕೊಟ್ಟ ಅಶ್ವಾಸನೆ ಸಮರ್ಪಕವಾಗಿ ಈಡೇರಿಸಿಲ್ಲ. ಒಂದು, ತಿಂಗಳು ಗೃಹಲಕ್ಷ್ಮಿ ಹಣ ಬಂದರೆ ಎರಡು ತಿಂಗಳ ಹಣ ಬಾಕಿ ನಿಲ್ಲಿಸಲಾಗುತ್ತಿದೆ. ಈಗ ಮತ್ತೆ ಮರು ಅರ್ಜಿ ಕರೆದಿರೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ – ಏನೆಲ್ಲಾ ದಾಖಲೆ ಕೊಡಬೇಕು?

ವಯಸ್ಸಾದ ವೃದ್ಧೆಯರು, ಕೂಲಿಕಾರ್ಮಿಕ ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸೋದು ದೊಡ್ಡ ಸಾಹಸವಾಗಲಿದೆ. ಆದ್ದರಿಂದ ಗೃಹಲಕ್ಷ್ಮಿ ಯೋಜನೆಯನ್ನು ಯಥಾಸ್ಥಿತಿ ಮುಂದುವರೆಸಲಿ ಅಥವಾ ಸರ್ಕಾರಕ್ಕೆ ಈ ಯೋಜನೆ ನಡೆಸೋದು ಕಷ್ಟಕರವಾದರೆ ಸಂಪೂರ್ಣ ಸ್ಥಗಿತಗೊಳಿಸಲಿ. ಅದರ ಬದಲಾಗಿ ನಾಮಕಾವಸ್ಥೆಗೆ ಗೃಹಲಕ್ಷ್ಮಿ ಯೋಜನೆ ನಡೆಸೋದು ಬೇಡವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಸದ ಟೆಂಡರ್ನಲ್ಲಿ ಗೋಲ್ಮಾಲ್ ಆರೋಪ; ವಿವಾದಿತ ಟೆಂಡರ್ ಪರಿಶೀಲಿಸುತ್ತಿರುವ ಸಮಿತಿಗೆ ಆರ್.ಅಶೋಕ್ ಪತ್ರ
