– ಚಿರಂಜೀವಿ ಬುದ್ಧಿಮಾತಿಗೆ ನಿರ್ಧಾರ ಬದಲಿಸಿದ್ದ ನಟ
ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಯುವಕರಾಗಿದ್ದಾಗ ನಕ್ಸಲನಾಗಲು (Naxalism) ಬಯಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಸಾಮಾಜಿಕ ಅನ್ಯಾಯದಿಂದ ನಾನು ತೀವ್ರವಾಗಿ ಕೋಪಗೊಂಡಿದ್ದೆ. ಇದರಿಂದ ನಾನು ಬಂದೂಕನ್ನು ಎತ್ತಿಕೊಳ್ಳಬೇಕೆಂದು ಬಯಸಿದ್ದೆ. ಆಗ ನನ್ನ ಸಹೋದರ ಚಿರಂಜೀವಿ (Chiranjeevi) ನನಗೆ ಹೆಚ್ಚು ಉತ್ತಮ ಕೆಲಸದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದ. ಅವರ ಬುದ್ಧಿಮಾತಿಂದ ಆ ನಿರ್ಧಾರ ಕೈಬಿಟ್ಟೆ ಎಂದಿದ್ದಾರೆ.
17 ರಿಂದ 21ರ ವಯಸ್ಸಿನವರೆಗೆ ಈ ಆಲೋಚನೆ ಇತ್ತು. ಯಾರಾದರೂ ಆಕಡೆಗೆ ವಾಲಬಹುದಾದ ವಯಸ್ಸು ಅದು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಸಹೋದರನ ಬಗ್ಗೆ ಪವನ್ ಕಲ್ಯಾಣ್ ಮಾತು
ಮಾರ್ಚ್‌ನಲ್ಲಿ ನಡೆದ ಉಸ್ತಾದ್ ಭಗತ್ ಸಿಂಗ್ ಚಿತ್ರದ ಕಾರ್ಯಕ್ರಮದಲ್ಲಿ, ಪವನ್ ಕಲ್ಯಾಣ್ ಅವರು ತನ್ನ ಸಹೋದರ ಚಿರಂಜೀವಿಯವರನ್ನು ʻಏಕೈಕ ನಾಯಕʼ ಎಂದು ಕರೆದಿದ್ದರು. ನಾನು ಅವರ ಪಕ್ಕದಲ್ಲಿ ನಿಂತಾಗ, ಸ್ವತಃ ನಾಯಕ ಎಂಬುದನ್ನು ಮರೆತುಬಿಡುತ್ತೇನೆ ಎಂದಿದ್ದರು.
ಪವನ್ ಕಲ್ಯಾಣ್ ಸಿನಿ ಜೀವನ
1996 ರಲ್ಲಿ ಪವನ್, ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಲ್ಯಾಣ್ ಬಾಬು ಪಾತ್ರದಲ್ಲಿ ಪಾದಾರ್ಪಣೆ ಮಾಡಿದರು. 1998ರ ಚಿತ್ರ ಥೋಲಿ ಪ್ರೇಮದೊಂದಿಗೆ ಅವರು ತಮ್ಮ ಮೊದಲ ಹಿಟ್ ಚಿತ್ರ ನೀಡಿದರು.
2025 ರಲ್ಲಿ ಹರಿ ಹರ ವೀರ ಮಲ್ಲು ಮತ್ತು ದೆ ಕಾಲ್ ಹಿಮ್ ಒಜಿ ಮತ್ತು ಈ ವರ್ಷ ಉಸ್ತಾದ್ ಭಗತ್ ಸಿಂಗ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
