ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಜೂ.13ರವರೆಗೆ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಅತಿ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಮುಂದಿನ 7 ದಿನಗಳ #ಮಳೆ #ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) #ಕರ್ನಾಟಕ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆ ಹಾಗೂ ಜೂನ್ 13 ರವರೆಗೆ ಅಲ್ಲಲ್ಲಿ ಭಾರಿ ಮಳೆ, ಕರಾವಳಿ ಜಿಲ್ಲೆಗಳಲ್ಲಿ ಜೂನ್ 10 ರಂದು ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.#KSNDMC pic.twitter.com/2EDqw0wLvX
— Karnataka State Natural Disaster Monitoring Centre (@KarnatakaSNDMC) June 10, 2026
ನಗರಗಳ ಹವಾಮಾನ ವರದಿ:
ಬೆಂಗಳೂರು: 29-22
ಮಂಗಳೂರು: 28-26
ಶಿವಮೊಗ್ಗ: 29-23
ಬೆಳಗಾವಿ: 30-23
ಮೈಸೂರು: 29-22

ಮಂಡ್ಯ: 30-23
ಮಡಿಕೇರಿ: 25-21
ರಾಮನಗರ: 30-22
ಹಾಸನ: 27-22
ಚಾಮರಾಜನಗರ: 30-23
ಚಿಕ್ಕಬಳ್ಳಾಪುರ: 29-21

ಕೋಲಾರ: 30-22
ತುಮಕೂರು: 29-22
ಉಡುಪಿ: 29-26
ಕಾರವಾರ: 31-28
ಚಿಕ್ಕಮಗಳೂರು: 25-20
ದಾವಣಗೆರೆ: 31-24

ಹುಬ್ಬಳ್ಳಿ: 31-24
ಚಿತ್ರದುರ್ಗ: 31-23
ಹಾವೇರಿ: 31-24
ಬಳ್ಳಾರಿ: 34-25
ಗದಗ: 32-23
ಕೊಪ್ಪಳ: 34-24

ರಾಯಚೂರು: 36-27
ಯಾದಗಿರಿ: 37-27
ವಿಜಯಪುರ: 36-26
ಕಲಬುರಗಿ: 36-27
ಬಾಗಲಕೋಟೆ: 34-25

