ನವದೆಹಲಿ/ಟೆಹ್ರಾನ್: ಅಮೆರಿಕವು ತೈಲ ಖರೀದಿ ಮೇಲಿನ ನಿರ್ಬಂಧವನ್ನ ತಾತ್ಕಾಲಿಕವಾಗಿ ತೆಗೆದುಹಾಕಿದ ಕೆಲ ದಿನಗಳಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ವಿಶ್ವದ ಅತಿದೊಡ್ಡ ಸಂಸ್ಕರಣಾ ಘಟಕ ಹೊಂದಿರುವ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಇರಾನ್‌ನಿಂದ 50 ಲಕ್ಷ ಬ್ಯಾರಲ್ ಕಚ್ಚಾ ತೈಲ ಖರೀದಿಸಿದೆ.
ಗುಜರಾತ್‌ನ ಜಾಮ್ ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತೈಲ ಸಂಸ್ಕರಣಾಗಾರವು ಇರಾನಿಯನ್ ತೈಲ ಕಂಪನಿಯಿಂದ (Iranian Oil Co.) ತೈಲ ಖರೀದಿಸಿದೆ. ಈ ಒಪ್ಪಂದವು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 350 ಮಿಲಿಯನ್ ಡಾಲರ್ (ಸುಮಾರು 32 ಸಾವಿರ ಕೋಟಿ ರೂಪಾಯಿ) ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಭಾರತ 40 ದೇಶಗಳಿಂದ ಹೇಗೆ ತೈಲ ಆಮದು ಮಾಡಿಕೊಳ್ತಿದೆ? ಎಲ್ಲಿ ಸಂಗ್ರಹಿಸುತ್ತಿದೆ?

ಅವುಗಳಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ರೆಂಟ್ ಫ್ಯೂಚರ್ಸ್‌ನ ಪ್ರತಿ ಬ್ಯಾರಲ್‌ಗೆ ಸುಮಾರು 7 ಡಾಲರ್ ಪ್ರೀಮಿಯಂ ನಿಗದಿಪಡಿಸಲಾಗಿದೆ. ಆದ್ರೆ ತೈಲ ಯಾವಾಗ ಭಾರತಕ್ಕೆ ಬರುತ್ತದೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಜೊತೆಗೆ ರಿಲಯನ್ಸ್ ಸಂಸ್ಥೆ ಕೂಡ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: ಅಮೆರಿಕದ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಲಿದೆ ಭಾರತದ ಕಚ್ಚಾ ತೈಲ
ಅಮೆರಿಕವು (USA) 30 ದಿನಗಳ ವರೆಗೆ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಭಾರತ ತಕ್ಷಣದ ಕ್ರಮ ಕೈಗೊಂಡಿದೆ. ಕಳೆದ 7 ವರ್ಷಗಳಲ್ಲಿ ಭಾರತೀಯ ಸಂಸ್ಕರಣಾಗಾರರು ಇರಾನಿನ ತೈಲವನ್ನ ಆಮದು ಮಾಡಿಕೊಳ್ಳುತ್ತಿರುವುದು ಇದೇ ಮೊದಲು ಅನ್ನೋದು ಗಮನಾರ್ಹ.

