ಭಾನುವಾರ ಬಂತೆಂದರೆ ಸಾಕು ಏನಾದರೂ ಸ್ಪೆಷಲ್ ಮಾಡಿಕೊಂಡು ತಿನ್ನಬೇಕು ಎನಿಸುತ್ತದೆ. ಅದರಲ್ಲೂ ನಾನ್ ವೆಜ್ ತಿನ್ನಬೇಕು ಅನಿಸುತ್ತೆ. ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಹೀಗೆ ವಿಭಿನ್ನವಾಗಿ ಏನಾದರೂ ಮಾಡ್ಬೇಕು ಅನಿಸುತ್ತದೆ. ಇನ್ನೂ ಚಿಕನ್ ಚಾಪ್ಸ್ ಅಂದರೆ ವಾಯಲ್ಲಿ ನೀರೂರಿಸುತ್ತೆ.
ಈ ರೀತಿ ಸುಲಭವಾಗಿ ಚಿಕನ್ ಚಾಪ್ಸ್ ಮಾಡಿ, ಸವಿಯಿರಿ.

ಬೇಕಾಗುವ ಸಾಮಾಗ್ರಿಗಳು:
1. ಈರುಳ್ಳಿ
2. ಪುದಿನ ಸೊಪ್ಪು
3. ಕೊತ್ತಂಬರಿ ಸೊಪ್ಪು
4. ತೆಂಗಿನ ತುರಿ
5. ಬೆಳ್ಳುಳ್ಳಿ
6. ಹಸಿರು ಮೆಣಸಿನಕಾಯಿ
7. ಶುಂಠಿ
8. ಚಕ್ಕೆ-ಲವಂಗ
9. ಚಿಕನ್
10. ಎಣ್ಣೆ
11. ಉಪ್ಪು
12. ದನಿಯಾ ಪುಡಿ
13. ಮೆಣಸಿನ ಪುಡಿ

ಮಸಾಲಾ ರುಬ್ಬಿಕೊಳ್ಳಿ
* ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ್, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನಾ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
ಮಾಡುವ ವಿಧಾನ
ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ಚಿಟಿಕೆ ಅರಿಶಿಣ ಮತ್ತು ಚಿಟಿಕೆ ಉಪ್ಪನ್ನು ಹಾಕಿ ನೆನೆಸಿಡಿ. ಇನ್ನೊಂದು ಒಂದು ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ ಚಿಕ್ಕದಾಗಿ ಹೆಚ್ಚಿಕೊಂಡ 2 ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ಈರುಳ್ಳಿ ಫ್ರೈ ಆದ ಮೇಲೆ ತೊಳೆದಿಟ್ಟಿದ್ದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿಕನ್ ಚೆನ್ನಾಗಿ ಫ್ರೈ ಮಾಡಿ.
ಚಿಕನ್ ಹಾಕಿದ ನಂತರ ನೀರಿನಾಂಶ ಬಿಟ್ಟುಕೊಳ್ಳುತ್ತದೆ. ನೀರು ಸಂಪೂರ್ಣವಾಗಿ ಕಡಿಮೆ ಆಗುವವರೆಗೆ ಚಿಕನ್ ಫ್ರೈ ಮಾಡಿಕೊಳ್ಳಿ. ಬಳಿಕ 1 ಚಮಚ ದನಿಯಾ ಪುಡಿ ಮತ್ತು 1 ಚಮಚ ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ. ಆನಂತರ ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ಮುಚ್ಚಿ 10 ನಿಮಿಷ ಬೇಯಲು ಬಿಡಿ
ಈಗ ಸ್ಟವ್ ಆಫ್ ಮಾಡಿದರೆ ಚಿಕನ್ ಚಾಪ್ಸ್ ತಿನ್ನಲು ಸಿದ್ಧ.

