ನವದೆಹಲಿ: ಟಾಪ್ ಆರ್ಡರ್‌ನ ಮೂವರು ಬ್ಯಾಟ್ಸಮನ್‌ಗಳು ಫಾರ್ಮ್‌ನಲ್ಲಿದ್ದರೆ ಈ ಬಾರಿ ಎಸ್‌ಆರ್‌ಹೆಚ್‌ಗೆ ಚಾಂಪಿಯನ್ ಪಟ್ಟ ಎಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದ ನಾಯಕ ಅಕ್ಷರ್ ಪಟೇಲ್ (Axar Patel) ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೀಗ್ ಹಂತದ ಕೊನೆಯ ಪಂದ್ಯದ ನಂತರ ಮಾತನಾಡಿದ ಅವರು, ಟಾಪ್ ಆರ್ಡರ್‌ನಲ್ಲಿರುವ ಆಟಗಾರರು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು (Sunrisers Hyderabad) ಈ ಟೂರ್ನಿಯ ಅತ್ಯಂತ ಬಲಿಷ್ಠ ತಂಡವನ್ನಾಗಿ ಮಾಡಿದೆ. ಪ್ಲೇಆಫ್ಸ್‌ನಲ್ಲಿ ಆ ಮೂವರು ಬ್ಯಾಟ್ಸಮನ್‌ಗಳು ಅಬ್ಬರಿಸಿದ್ರೆ ಎಸ್‌ಆರ್‌ಹೆಚ್ ಚಾಂಪಿಯನ್ಸ್ ಆಗೋದನ್ನ ಯಾರಿಂದಲೂ ತಡೆಯೋಕಾಗಲ್ಲ ಎಂದಿದ್ದಾರೆ. ಇದನ್ನೂ ಓದಿ: IPL 2026 | ಪ್ಲೇಆಫ್‌ಗೆ ತಂಡಗಳು ಫೈನಲ್ – ವೇಳಾಪಟ್ಟಿ ಹೀಗಿದೆ…
ಹೈದರಾಬಾದ್‌ನ ಹೆನ್ರಿಕ್ ಕ್ಲಾಸೆನ್, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಮೂವರು ಈ ಸೀಸನ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ಪಂದ್ಯಗಳಲ್ಲಿಯೂ ಉತ್ತರ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯಿದೆ ಎಂದಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟೇಬಲ್ ಟಾಪರ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 55 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್ಸ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಲೀಗ್ ಹಂತದಲ್ಲಿ ಒಟ್ಟು 9 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 5 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ 18 ಅಂಕಗಳನ್ನು ಗಳಿಸಿದೆ. ಆದರೆ ಆರ್‌ಸಿಬಿ ಹಾಗೂ ಜಿಟಿಗಿಂತ ಕಡಿಮೆ ನಿವ್ವಳ ರನ್ ರೇಟ್ ಹೊಂದಿರುವುದರಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಮೇ 26ರಂದು ಕ್ವಾಲಿಫೈಯರ್-1 ಪಂದ್ಯ ನಡೆಯಲಿದೆ. ಮೇ 27ರಂದು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಎಸ್‌ಆರ್‌ಹೆಚ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಮೇ 29ರಂದು ಕ್ವಾಲಿಫೈಯರ್-2 ಪಂದ್ಯ ನಡೆಯಲಿದೆ. ಮೇ 31ರಂದು ಐಪಿಎಲ್ 2026ರ ಫಿನಾಲೆ ನಡೆಯಲಿದೆ.ಇದನ್ನೂ ಓದಿ: IPL 2026 | ಗೆದ್ದು ಆಟ ಮುಗಿಸಿದ ಡೆಲ್ಲಿ – ಸೋಲಿನೊಂದಿಗೆ ವಿದಾಯ ಹೇಳಿದ ಕೋಲ್ಕತ್ತಾ
