– ಭಾರತದಿಂದ ಕೇವಲ 374 ಕಿಮೀ ಅಂತರದಲ್ಲಿ ದಾಳಿ
ವಾಷಿಂಗ್ಟನ್/ಟೆಲ್‌ಅವಿವ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಉಲ್ಬಣಗೊಂಡಿದೆ. ಅಮೆರಿಕ-ಇಸ್ರೇಲ್ (US – Israel) ಜಂಟಿಯಾಗಿ ಇರಾನ್ ಮೇಲಿನ ದಾಳಿ 6ನೇ ದಿನಕ್ಕೆ ಕಾಲಿಟ್ಟಿದೆ. ಸುಪ್ರೀಂ ಲೀಡರ್ ಖಮೇನಿ ಹತ್ಯೆಗೆ ಪ್ರತಿಯಾಗಿ ಇರಾನ್ ಕೂಡ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಗಲ್ಫ್‌ನಲ್ಲಿರುವ ಅಮೆರಿಕದ (America) ಮಿತ್ರರಾಷ್ಟ್ರಗಳ ಮೇಲೆ ಪ್ರತಿದಾಳಿ ಮುಂದುವರಿಸಿದೆ. ನಿರಂತರವಾಗಿ ಕ್ಷಿಪಣಿ, ಡ್ರೋನ್‌ಗಳ ಸುರಿಮಳೆಗೈಯ್ಯುತ್ತಿದೆ. ಇಸ್ರೇಲ್, ಅಮೆರಿಕ ಮೇಲೆ ಸೇಡಿನ ಜ್ವಾಲೆ ಉಗುಳುತ್ತಿದೆ. ಇತ್ತ ಇಸ್ರೇಲ್ ನಿರಂತರವಾಗಿ ಲೆಬನಾನ್, ಇರಾನ್ ಮೇಲೆ ದಾಳಿ ಮುಂದುವರಿಸಿದೆ.
“100 Hours” of Operation Epic Fury. pic.twitter.com/XW5ZnRAJJL
— U.S. Central Command (@CENTCOM) March 4, 2026
ವಿಶೇಷ ವೀಡಿಯೋ ಪೋಸ್ಟ್ ಮಾಡಿದ ಅಮೆರಿಕ
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಸಮರ ಸಾರಿವೆ. ಇರಾನ್ ವಿರುದ್ಧ ನಡೆಯುತ್ತಿರೋ ಯುದ್ಧ 100 ಗಂಟೆ ಪೂರ್ಣಗೊಂಡಿದೆ. ಈ ಕುರಿತು ಅಮರಿಕ ವಿಡಿಯೋ ಬಿಡುಗಡೆ ಮಾಡಿದೆ. ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಕಾರ್ಯಾಚರಣೆಯ ವಿಶೇಷ ವೀಡಿಯೋವೊಂದನ್ನ ಅಮೆರಿಕ ಪೋಸ್ಟ್ ಮಾಡಿದೆ. ಇದುವರೆಗೆ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ಇರಾನ್‌ನ 1000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಯುದ್ಧದ ನಡುವೆ ವಿನಾಶಕಾರಿ ʻಡೂಮ್ಸ್‌ಡೇʼ ಕ್ಷಿಪಣಿ ಪರೀಕ್ಷಿಸಿದ ಅಮೆರಿಕ – 3ನೇ ಮಹಾಯುದ್ಧ ಫಿಕ್ಸಾ?

ಹಿಂದೂ ಮಹಾಸಾಗರಕ್ಕೂ ಕಾಲಿಟ್ಟ ಕೊಲ್ಲಿ ಯುದ್ಧ
ಶ್ರೀಲಂಕಾದ ಕರಾವಳಿ ಸಮೀಪ ಇರಾನ್‌ನ ಯುದ್ಧನೌಕೆ ಸ್ಫೋಟಗೊಂಡಿದೆ. ಇರಾನ್ ಯುದ್ಧನೌಕೆಯನ್ನ ಅಮೆರಿಕದ ನೌಕೆ ಹೊಡೆದುರುಳಿಸಿದೆ. 87 ಮಂದಿ ಸಾವನ್ನಪ್ಪಿದ್ದು 100ಕ್ಕೂ ಅಧಿಕ ಜನರು ಕಣ್ಮರೆಯಾಗಿದ್ದಾರೆ. ಐರಿಸ್ ದೇನಾ ಎಂಬ ಯುದ್ಧನೌಕೆ ಕೆಲವೇ ವಾರಗಳ ಹಿಂದೆ ಭಾರತದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು. ಮೌಡ್ಜ್ ಕ್ಲಾಸ್ ಫ್ರಿಗೇಟ್ ಆಗಿರುವ ಐರಿಸ್ ದೇನಾ 2024 ರಲ್ಲಿ ಭಾರತಕ್ಕೆ ಬಂದಿದ್ದು, ಬಹುಪಕ್ಷೀಯ ನೌಕಾ ಅಭ್ಯಾಸ ಮಿಲನ್‌ನಲ್ಲಿ ಭಾಗವಹಿಸಿತ್ತು. ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಜಲಾಂತರ್ಗಾಮಿ ದಾಳಿಯನ್ನು ದೃಢಪಡಿಸಿದ್ದಾರೆ. ಅಂತಾರಾಷ್ಟ್ರೀಯ ನೀರಿನಲ್ಲಿ ಸುರಕ್ಷಿತವಾಗಿದೆ ಎಂದು ಭಾವಿಸಿದ್ದ ಇರಾನಿನ ಯುದ್ಧನೌಕೆಯನ್ನ ಅಮೆರಿಕದ ಜಲಾಂತರ್ಗಾಮಿ ನೌಕೆ ಹೊಡೆದು ಮುಳುಗಿಸಿತು ಎಂದು ಹೆಗ್ಸೆತ್ ತಿಳಿಸಿದ್ದಾರೆ.
ಹೆಜ್ಬುಲ್ಲಾ ಭದ್ರಕೋಟೆಯ ಮೇಲೆ ದಾಳಿ
ಇರಾನ್-ಇಸ್ರೇಲ್ ಯುದ್ಧದಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಕೋಲಾಹಲ ಎದ್ದಿದೆ. ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿಗಳ ಸುರಿಮಳೆ ಸುರಿಸುತ್ತಿದೆ. ಹೆಜ್ಬುಲ್ಲಾ ಭದ್ರಕೋಟೆಯ ಮೇಲೆ ಇರಾನ್ ದಾಳಿ ನಡೆಸಿದೆ. ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿ ಗುರಿಯಾಗಿಸಿ ದಾಳಿ ಮಾಡಲಾಗಿದೆ. ಇರಾನ್ ಬೆಂಬಲಿತ ಹೆಜ್ಬೊಲ್ಲಾ ಗುಂಪು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಇರಾನ್‌ನ ರಾಜಧಾನಿ ಟೆಹರಾನ್ ಮೇಲೂ ಇಸ್ರೇಲ್ ದಾಳಿ ಮಾಡಿದೆ. ಇದನ್ನೂ ಓದಿ: ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಆಪತ್ಭಾಂದವ – ಈ ವಾರವೇ 22 ಕೋಟಿ ಲೀಟರ್ ತೈಲ ಪೂರೈಕೆ

ಅಬ್ಬಾಸ್ ಬಂದರಿನಲ್ಲಿ ಸ್ಫೋಟ
ದಕ್ಷಿಣ ಇರಾನ್‌ನ ಬಂದರು ಅಬ್ಬಾಸ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಐಆರ್‌ಜಿಸಿ ನೌಕಾನೆಲೆಯಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ. ಹಾರ್ಮುಜ್ ಜಲಸಂಧಿಗೆ ಹತ್ತಿರವಿರುವ ಮಿಲಿಟರಿ ಘಟಕ ಇದಾಗಿದ್ದು ನೌಕಾವಲಯ ಬಂದರ್-ಎ ಬಹೋನಾರ್ ಬಳಿ ಸ್ಫೋಟವಾಗಿದೆ. ಈ ನಡುವೆ ಇಸ್ರೇಲ್-ಅಮೆರಿಕ ದಾಳಿಗೆ ಇರಾನ್ ದೊಡ್ಡ ಎಚ್ಚರಿಕೆ ನೀಡಿದೆ. ಇಸ್ರೇಲ್‌ನ ಪರಮಾಣು ತಾಣ ಸ್ಫೋಟಿಸುವ ವಾರ್ನ್ ಮಾಡಿದೆ. ಡಿಮೋನಾ ಪರಮಾಣು ತಾಣ ಸ್ಫೋಟಿಸುವ ಎಚ್ಚರಿಕೆ ನೀಡಿದೆ.

