Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Latest

ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Public TV
Last updated: April 23, 2026 3:59 pm
Public TV
Share
3 Min Read
thaad
SHARE

ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಉಭಯದೇಶಗಳ ನಡುವಿನ ಕದನವಿರಾಮ ಅಂತ್ಯವಾಗಲು ಕೇವಲ ಒಂದು ದಿನ ಮಾತ್ರ ಬಾಕಿಯಿದ್ದು, ಈ ನಡುವೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ನಲ್ಲಿ ಅಮೆರಿಕ ಇರಾನ್ ನೊಂದಿಗೆ ಮಾತುಕತೆಗೆ ಸಜ್ಜಾಗಿದೆ. ಈವರೆಗೂ ಮಾತುಕತೆಯಲ್ಲಿ ಭಾಗವಹಿಸುವಿಕೆಯ ಕುರಿತು ಇರಾನ್‌ ಸಕಾರಾತ್ಮಕ ಹೇಳಿಕೆ ನೀಡಿಲ್ಲ. ಆದಾಗ್ಯೂ, ಪ್ರಾದೇಶಿಕವಾಗಿ ಹಾರ್ಮುಜ್‌ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನ ಗಮನದಲ್ಲಿಟ್ಟುಕೊಂಡು ಇರಾನ್‌ ಭಾಗವಹಿಸಬಹುದು ಎಂಬ ಮಾತುಗಳಿವೆ. ಇತ್ತ ಇಸ್ರೇಲ್-ಲೆಬನಾನ್‌ ನಡುವಿನ ಸಮರ ಉಲ್ಬಣವಾಗುತ್ತಿದ್ದು, ಕದನವಿರಾಮದ ನಡುವೆಯೂ ಯುದ್ಧದ ಸೈರನ್‌ ಗಳು ಮೊಳಗುತ್ತಲೇ ಇವೆ. ಈ ಮಧ್ಯೆ ಪದೇ ಪದೇ ಇರಾನ್‌ ದೇಶವನ್ನ ಸರ್ವನಾಶಗೊಳಿಸುವ ಮಾತುಗಳನ್ನಾಡುತ್ತಿರುವ ಟ್ರಂಪ್‌ಗೆ ದೊಡ್ಡ ಸಂಕಷ್ಟ ಎದುರಾಗಿದೆ ಎನ್ನುತ್ತಿವೆ ವರದಿಗಳು.

ಜಾಗತಿಕ ಮಟ್ಟದಲ್ಲಿ ಅಮೆರಿಕದ (America) ಪಾರುಪತ್ಯ ಮೆರೆಯಲು ಟ್ರಂಪ್ ಹಿಂದೆಂದೂ ಕಾಣದಂತಹ ಆಕ್ರಮಣಕಾರಿ ವಿದೇಶಾಂಗ ನೀತಿ ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಇರಾನ್‌ನ ಸುಪ್ರೀಂ ಲೀಡರ್ ಖಮೇನಿ (Ayatollah Khamenei) ಹತ್ಯೆಯಿಂದ ಹಿಡಿದು, ವೆನೆಜುವೆಲಾದ ಅಧ್ಯಕ್ಷನನ್ನೇ ಬಂಧಿಸುವವರೆಗೂ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಜಗತ್ತನ್ನೇ ಬೆಚ್ಚಿಬೀಳಿಸಿವೆ. ಆದ್ರೆ ಒಂದು ಕಡೆ ಚರ್ಮರೋಗ ಸಮದ್ಯೆಯಿಂದ ಬಳಲುತ್ತಿರುವ ಟ್ರಂಪ್‌ ಇದೀಗ ಸೇನಾ ಅಸ್ತ್ರಗಳ ಕೊರತೆ ಎದುರಿಸುವಂತಾಗಿದೆ.

THAAD 1

ಹೌದು. ಯುರೇನಿಯಂ ಮತ್ತು ಹಾರ್ಮುಜ್‌ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಇರಾನ್‌ ಮೇಲೆ ಆಕ್ರಮಣ ಮಾಡುತ್ತಿರುವ ಅಮೆರಿಕ ಸೇನೆ ಮದ್ದುಗುಂಡುಗಳು ಹಾಗೂ ಪ್ರಮುಖ ಸೇನಾ ಅಸ್ತ್ರಗಳ ಕೊರತೆ ಎದುರಿಸುತ್ತಿದೆ ಎಂದು ಪೆಂಟಗನ್‌ನ ಆಪ್ತಮೂಲಗಳನ್ನಾಧರಿಸಿ ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ ಸಂಧಾನಕ್ಕೆ ಒಪ್ಪದೇ ಇರಾನ್‌ ಯುದ್ಧ ಮುಂದುವರಿಸಲು ನಿರ್ಧರಿಸಿದ್ರೆ, ಅದು ಅಮೆರಿಕಕ್ಕೇ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಹಾಗಿದ್ರೆ ಅಮೆರಿಕ ಸಂಷ್ಟಕ್ಕೆ ಸಿಲುಕುತ್ತಿರುವುದು ಏಕೆ? ಪದೇ ಪದೇ ಇರಾನ್‌ ಸರ್ವನಾಶ ಮಾಡಿಬಿಡುತ್ತೇನೆ ಎನ್ನುವ ಟ್ರಂಪ್‌ ಮತ್ತೊಂದು ಕಡೆಯಿಂದ ಕದನ ವಿರಾಮಕ್ಕೆ ಒತ್ತಾಯಿಸುತ್ತಿರುವುದು ಏಕೆ? ಯುದ್ಧ ಮುಂದುವರಿದರೆ ಅಮೆರಿಕಕ್ಕೆ ಏಕೆ ಆಪತ್ತು? ಎಂಬಿತ್ಯಾದಿ ವಿಷಯಗಳನ್ನು ತಿಳಿಯಬೇಕಿದ್ದರೆ ಮುಂದೆ ಓದಿ…

ಶಕ್ತಿಶಾಲಿ ಅಸ್ತ್ರಗಳು 50% ಖಾಲಿ ಖಾಲಿ
ಇರಾನ್‌ ಮೇಲೆ ಇಷ್ಟು ದಿನಗಳ ಕಾಲ ಪ್ರಭಾವ ಸಾಧಿಸಲು ನೆರವಾಗಿದ್ದ ಹೆಚ್ಚು ನಿಖರತೆ ಹೊಂದಿರುವ ಕ್ಷಿಪಣಿಗಳು ಮತ್ತು ಮತ್ತು ಶಕ್ತಿಶಾಲಿ ಥಾಡ್‌ (THAAD) & ಪೇಟ್ರಿಯಾಟ್ ವಾಯುರಕ್ಷಣಾ ವ್ಯವಸ್ಥೆಯಲ್ಲಿನ ಶೇ.50 ರಷ್ಟು ಕ್ಷಿಪಣಿಗಳೇ ಖಾಲಿಯಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯೊಂದಿಗೆ ಸಂಪರ್ಕದಲ್ಲಿರುವ ತಜ್ಞರು ಹೇಳಿದ್ದಾರೆ. ಹೀಗಾಗಿ ಇರಾನ್‌ ವಿರುದ್ಧ ಅಮೆರಿಕ ಪೂರ್ಣ ಪ್ರಮಾಣದ ಯುದ್ಧಕ್ಕಿಳಿದಿದ್ರೆ, ವಿಶ್ವದ ದೊಡ್ಡಣ್ಣನಿಗೂ ಅದೇ ಆಪತ್ತಾಗಲಿದೆ.

mojtaba khamenei and trump

ಇಸ್ರೇಲ್‌ಗೂ ಬಲ ನೀಡಿದ್ದ ʻಥಾಡ್‌ʼ
ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್‌ (THAAD) ಎನ್ನಲಾಗುವ ಈ ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಥಾಡ್ ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತದೆ. ಈ ಕ್ಷಿಪಣಿ ವ್ಯವಸ್ಥೆಯು ಎಂಥದ್ದೇ ಖಂಡಾಂತರ ಕ್ಷಿಪಣಿ, ಡ್ರೋನ್ ಹಾಗೂ ರಾಕೆಟ್ ದಾಳಿಯನ್ನ ತಡೆಯಬಲ್ಲದಾಗಿದೆ. ಹೈಪರ್ ಸಾನಿಕ್ ಕ್ಷಿಪಣಿಗಳನ್ನ ಹೊಡೆದುರುಳಿಸಬಲ್ಲ ಸಾಮರ್ಥ್ಯ ಈ ವ್ಯವಸ್ಥೆಗೆ ಇದೆ. ಈ ವ್ಯವಸ್ಥೆಯ ಅಡಿ ಬೃಹತ್ ಗಾತ್ರದ ಬ್ಯಾಟರಿಗಳು, ಕ್ಷಿಪಣಿಗಳನ್ನು ಉಡಾಯಿಸಬಲ್ಲ 6 ಟ್ರಕ್‌ಗಳು, ಪ್ರತಿ ಟ್ರಕ್ ಜೊತೆಯಲ್ಲೇ 8 ಇಂಟರ್‌ಸೆಪ್ಟರ್‌ಗಳು ಹಾಗೂ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಮೂಲಕ ಇಸ್ರೇಲ್ ವಾಯು ಗಡಿ ಪ್ರವೇಶಿಸುವ ಕ್ಷಿಪಣಿಗಳನ್ನ ಪತ್ತೆ ಮಾಡುವ ಸೌಲಭ್ಯ ಇದೆ. ಈ ಥಾಡ್ ವ್ಯವಸ್ಥೆಯನ್ನ ನಿರ್ವಹಿಸಲು 100 ಮಂದಿಯ ಅಗತ್ಯತೆ ಇದ್ದು, ಅಮೆರಿಕದಿಂದಲೇ 100 ಮಂದಿಯ ತಂಡವನ್ನೂ ರವಾನೆ ಮಾಡಿತ್ತು. ಅಮೆರಿಕದ ಈ ನಡೆಗೆ ಇರಾನ್‌ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು.

THAAD – ಅಲ್ಪ-ಶ್ರೇಣಿಯ (1,000 ಕಿಮೀ ವರೆಗೆ), ಮಧ್ಯಮ-ಶ್ರೇಣಿಯ (1,000-3,000 ಕಿಮೀ), ಮತ್ತು ಸೀಮಿತ ಮಧ್ಯಂತರ-ಶ್ರೇಣಿಯ (3,000-5,000 ಕಿಮೀ) ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ.

THAAD 3

ಶಸ್ತ್ರಾಸ್ತ್ರಗಳ ಕೊರತೆ ನೀಗಿಸಬಹುದೇ ಅಮೆರಿಕ?
ಒಂದು ಕಡೆ ಪಾಕ್‌ ಮಧ್ಯಸ್ಥಿತಿಕೆಯಲ್ಲಿ ಪದೇ ಪದೇ ಸಂಧಾನಕ್ಕೆ ಯತ್ನಿಸುತ್ತಿರುವ ಅಮೆರಿಕ, ದಾಸ್ತಾನುಗಳ ಕೊರತೆ ನೀಗಿಸುವತ್ತಲೂ ತಲೆ ಕೆಡಿಸಿಕೊಂಡಿದೆ. ಅದಕ್ಕಾಗಿ ಈ ವರ್ಷಾರಂಭದಲ್ಲಿ ಕ್ಷಿಪಣಿಗಳು, ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಹಲವಾರು ಒಪ್ಪಂದಗಳಿಗೆ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ. ಆದ್ರೆ ಈ ಕೊರತೆ ನೀಗಿಸಲು ಅಮೆರಿಕಕ್ಕೆ ಕನಿಷ್ಠ 3 ರಿಂದ 5 ವರ್ಷಗಳ ಕಾಲ ಬೇಕಾಗಬಹುದು. ಅದರ ನಂತರವೂ ಅವುಗಳನ್ನು ಅಗತ್ಯ ಸ್ಥಳಕ್ಕೆ ವಿಸ್ತರಿಸಲು ಹಲವು ವರ್ಷಗಳೇ ಬೇಕಾಗಬಹುದು. ಈ ವಿಳಂಬವು ಅಮೆರಿಕದ ಕಾರ್ಯತಂತ್ರದ ಮೇಲೆ ಅಪಾಯ ಸೃಷ್ಟಿಬಹುದು. ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಮಿಲಿಟರಿ ಸನ್ನದ್ಧತೆಯ ಮೇಲೆ ಸಂಭಾವ್ಯ ಪರಿಣಾಮವೂ ಉಂಟಾಗಬಹುದು ಎನ್ನುತ್ತಾರೆ CSIS (ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರ) ಲೇಖಕ ಮಾರ್ಕ್ ಕ್ಯಾನ್ಸಿಯನ್.

Strait of Hormuz 1

ಅಮೆರಿಕದ ಮುಂದಿನ ದಾರಿ ಏನು?
ಸದ್ಯ ಕದನ ವಿರಾಮ ಜಾರಿಯಲ್ಲಿರುವಾಗಲೇ ಅಮೆರಿಕ ತನ್ನ ಕಾರ್ಯತಂತ್ರವನ್ನ ಬದಲಿಸಿ, ಸಂಧಾನ ಮಾಡಿಕೊಳ್ಳುವುದು. ಯುದ್ಧದ ಪ್ರಭಾವನ್ನ ಕಡಿಮೆಗೊಳಿಸುವುದು. ಇರಾನ್‌ನ ಯುರೇನಿಯಂ ಮೇಲಿನ ಆಸೆ ಬಿಟ್ಟು ಹಾರ್ಮುಜ್‌ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು, ಯುದ್ಧ ಶುರುವಾದಾಗಿನಿಂದ ಕಡಲಿನಲ್ಲೇ ಬೀಡುಬಿಟ್ಟಿರುವ ಸೇನೆಗಳನ್ನ ವಾಪಸ್‌ ಕರೆಸಿಕೊಳ್ಳುವುದು ಅಮೆರಿಕಕ್ಕೆ ಇರುವ ದಾರಿ.

TAGGED:donald trumpTHAADUS Iran Warಅಮೆರಿಕ ಇರಾನ್‌ ಯುದ್ಧಅಮೆರಿಕ ಸೇನೆಡೊನಾಲ್ಡ್ ಟ್ರಂಪ್ಥಾಡ್‌ಯುರೇನಿಯಂಹಾರ್ಮುಜ್ ಜಲಸಂಧಿ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

bad touch for young women 2 arrested in bengaluru
Bengaluru City

ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್‌

Public TV
By Public TV
22 seconds ago
Kolar SSLC Student Kusuma
Districts

ಸ್ಟ್ರೆಚರ್‌ನಲ್ಲಿ ಮಲಗಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್‌ನಲ್ಲಿ ಪಾಸ್

Public TV
By Public TV
11 minutes ago
SIDDAPURA DEATH
Crime

ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್‌ – ನೇಣಿಗೆ ಶರಣಾದ ಯುವಕ

Public TV
By Public TV
13 minutes ago
hindi
Bengaluru City

ಹಿಂದಿಯಲ್ಲಿ ಕಳೆದ ವರ್ಷ 75 ಸಾವಿರ, ಈ ಬಾರಿ 9,481 ಮಂದಿ ಫೇಲ್‌

Public TV
By Public TV
31 minutes ago
Election vote ink
Latest

ಇಂದು ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಚುನಾವಣೆ

Public TV
By Public TV
1 hour ago
CET Exam
Chikkamagaluru

ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರ ಮೂಗುತಿಗೆ ಗಮ್ ಟೇಪ್ ಅಂಟಿಸಿದ ಸಿಬ್ಬಂದಿ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?