ಬೆಳಗಾವಿ: ನಗರದಲ್ಲಿ ಕಾರನ್ನೇ ಬಾರ್ ಮಾಡಿಕೊಂಡವರಿಗೆ ಬೆಳಗಾವಿ ಪೊಲೀಸರು (Belagavi Police) ಶಾಕ್ ಕೊಟ್ಟಿದ್ದಾರೆ. ರಸ್ತೆ ಪಕ್ಕ ಕಾರು (Car) ನಿಲ್ಲಿಸಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಬೆಳಗಾವಿ ಮಹಾನಗರದಲ್ಲಷ್ಟೇ ಈವರೆಗೆ ಇಂತಹ 24 ಪ್ರಕರಣಗಳು ದಾಖಲಾಗಿವೆ. 1 ವಾರದಲ್ಲಿ 24 ಪ್ರಕರಣಗಳ ಪೈಕಿ 36 ಜನರ ವಿರುದ್ಧ ಮಹಾನಗರ ಪೊಲೀಸರು ಕ್ರಮ ಜರುಗಿಸಿದ್ದಾರೆ. ಸಾರ್ವಜನಿಕ ಸ್ಥಳ, ಕಾರು, ಜಮೀನು, ಮೈದಾನ ಸೇರಿದಂತೆ ವಿವಿಧೆಡೆ ಪಾರ್ಟಿ ಮಾಡ್ತಿದ್ದವರಿಗೆ ಈ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ಬಾರ್ & ರೆಸ್ಟೋರೆಂಟ್ ಇರುವಾಗಲೂ ಕಾರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದವರಿಗೆ ಹಾಗೂ ರಸ್ತೆ ಪಕ್ಕ ಕಾರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುವವರಿಗೂ ಸಹ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ಬೆಂಗಳೂರಿನ 4 ಕಡೆ ಸೇರಿ ರಾಜ್ಯದ ಹಲವೆಡೆ ದಾಳಿ
ರಸ್ತೆ ಅಕ್ಕಪಕ್ಕ ರಾತ್ರಿ ವೇಳೆ ನಿಲುಗಡೆ ಆಗುವ ಕಾರುಗಳನ್ನ ತಪಾಸಣೆ ಮಾಡಲು ಪೊಲೀಸರು ಶುರು ಮಾಡಿದ್ದರು. ಆ ಮೂಲಕ ಡ್ರಂಕ್ & ಡ್ರೈವ್ ಪ್ರಕರಣ ತಗ್ಗಿಸಲು ಬೆಳಗಾವಿ ಪೊಲೀಸರು ಮುಂದಾಗಿದ್ದರು. ಹೀಗೆ ಪರಿಶೀಲನೆ ಮಾಡುವ ವೇಳೆಯೇ 24 ಪ್ರಕರಣಗಳನ್ನ ಬೆಳಗಾವಿ ಪೊಲೀಸರು ದಾಖಲಿಸಿದ್ದಾರೆ. ಇದನ್ನೂ ಓದಿ: ಯುದ್ಧದ ಎಫೆಕ್ಟ್ – ವಾಣಿಜ್ಯ LPG ಸಿಲಿಂಡರ್‌ಗಳಿಗೆ ನೀಡಲಾಗಿದ್ದ ರಿಯಾಯಿತಿ ರದ್ದು

