ಟೆಹ್ರಾನ್: ದಕ್ಷಿಣ ಇರಾನ್‌ನ (Iran) ಬಾಲಕಿಯರ ಶಾಲೆ ಮೇಲೆ ಶನಿವಾರ ಅಮೆರಿಕ-ಇಸ್ರೇಲ್ (US-Israel Strike) ನಡೆಸಿದ ದಾಳಿಗೆ ಮೃತಪಟ್ಟವರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ.
ದಕ್ಷಿಣ ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್‌ನಲ್ಲಿರುವ ಶಾಲೆಗೆ ಕ್ಷಿಪಣಿ ಅಪ್ಪಳಿಸಿ ಸಾವು-ನೋವು ಸಂಭವಿಸಿದೆ. ಈ ನಗರವು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳ ನೆಲೆಯಾಗಿದೆ. ಇದನ್ನೂ ಓದಿ: ಅಬುಧಾಬಿ, ದೋಹಾ, ರಿಯಾದ್ ಮೇಲೆ ಇರಾನ್ ದಾಳಿ – ದುಬೈನಲ್ಲೂ ಸ್ಫೋಟ
ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯಲ್ಲಿ ಹುತಾತ್ಮರ ಸಂಖ್ಯೆ 85 ಕ್ಕೆ ಏರಿದೆ ಎಂದು ನ್ಯಾಯಾಂಗದ ಮಿಜಾನ್ ಆನ್‌ಲೈನ್ ವೆಬ್‌ಸೈಟ್, ಪ್ರದೇಶದ ಪ್ರಾಸಿಕ್ಯೂಟರ್ ಕಚೇರಿಯನ್ನು ಉಲ್ಲೇಖಿಸಿ ತಿಳಿಸಿದೆ.
ದಾಳಿಯನ್ನು ಖಂಡಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಧ್ವಂಸಗೊಂಡ ಕಟ್ಟಡವು ದಕ್ಷಿಣ ಇರಾನ್‌ನಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲೆಯಾಗಿದೆ. ಹಗಲು ಹೊತ್ತಿನಲ್ಲಿ ವಿದ್ಯಾರ್ಥಿಗಳಿಂದ ತುಂಬಿದ್ದಾಗ ಅದರ ಮೇಲೆ ಬಾಂಬ್ ದಾಳಿ ನಡೆಸಲಾಯಿತು. ಈ ಸ್ಥಳದಲ್ಲೇ ಮುಗ್ಧ ಮಕ್ಕಳನ್ನು ಕೊಲ್ಲಲಾಗಿದೆ. ಇರಾನಿನ ಜನರ ವಿರುದ್ಧದ ಈ ಅಪರಾಧಗಳಿಗೆ ಉತ್ತರಿಸದೇ ಬಿಡುವುದಿಲ್ಲ ಎಂದು ಇಸ್ರೇಲ್-ಅಮೆರಿಕ ದಾಳಿಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್-ಅಮೆರಿಕ ದಾಳಿ – ಇರಾನ್‌ನಲ್ಲಿ ವಿದ್ಯಾರ್ಥಿಗಳು ಸೇರಿ 40 ಮಂದಿ ಸಾವು
ಕತಾರ್, ಯುಎಇ, ಸೌದಿ ಅರೇಬಿಯಾ ಮತ್ತು ಬಹ್ರೇನ್ ಸೇರಿದಂತೆ ಹಲವಾರು ದೇಶಗಳಲ್ಲಿನ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ ನಡೆಸಿದೆ. ತಕ್ಕ ಪ್ರತ್ಯುತ್ತರ ನೀಡುವುದಾಗಿ ಇರಾನ್ ಗುಡುಗಿದೆ.

