– ನನಗೆ ಸಚಿವ ಸ್ಥಾನ ಬೇಡ
ರಾಮನಗರ: ನಾವು ಹೈಕಮಾಂಡ್‌ಗೆ ಪತ್ರ ಬರೆದಿರೋದು ನಿಜ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಕಾಂಗ್ರೆಸ್ (Congress) ಶಾಸಕರು ಪತ್ರ ಬರೆದ ವಿಚಾರ ಕುರಿತು ರಾಮನಗರದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಾಕಷ್ಟು ಸಚಿವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಮಗೆ ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ. ಹಾಗಾಗಿ ಸಂಪುಟದಲ್ಲಿ ಒಂದಷ್ಟು ಬದಲಾವಣೆ ಆಗಬೇಕು. ಎಲ್ಲಾ ಸಚಿವರನ್ನೂ ಬದಲಾವಣೆ ಮಾಡಿ ಅಂತಲ್ಲ, ಒಂದಷ್ಟು ಜನ ಬದಲಾವಣೆ ಆಗಬೇಕು. ಹಾಗಾಗಿ ಹೈಕಮಾಂಡ್‌ಗೆ ಬರೆದ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ. ನನಗೆ ಸಚಿವ ಸ್ಥಾನ ಬೇಕು ಅಂತ ನಾನು ಸಹಿ ಹಾಕಿಲ್ಲ. ಬದಲಾವಣೆ ಮಾಡಿ ಅಂತ ಸಹಿ ಹಾಕಿದ್ದೇನೆ ಎಂದರು. ಇದನ್ನೂ ಓದಿ: ಕುರ್ಚಿ ಕದನದ ಮಧ್ಯೆ ಹೊಸಬರಿಗೆ ಮಂತ್ರಿ ಸ್ಥಾನಕ್ಕೆ ಬೇಡಿಕೆ – ಪತ್ರ ಬರೆದ 31 ಶಾಸಕರು ಯಾರು?
ನನಗೆ ಶಾಸಕ ಸ್ಥಾನವೇ ಸಾಕು, ಜನರ ಸೇವೆ ಮಾಡಿಕೊಂಡು ಇದ್ದೇನೆ. ಬೇರೆ ಶಾಸಕರು, ಅನುಭವಸ್ಥರಿಗೂ ಅವಕಾಶ ಬೇಕು. ಹಾಗಾಗಿ ಹೈಕಮಾಂಡ್‌ಗೆ ಪತ್ರ ಬರೆದಿದ್ದೇವೆ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿ. ಎಐಸಿಸಿಗೆ ಪತ್ರ ಬರೆದಿದ್ದೇವೆ, ನಮ್ಮ ಬೇಡಿಕೆಯನ್ನ ಹೈಕಮಾಂಡ್‌ಗೆ ತಿಳಿಸಿದ್ದೇವೆ. ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸುವ ಭರವಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಗೂ ಅವಕಾಶ ಕೊಡಿ – ಸಚಿವ ಸಂಪುಟ ಪುನಾರಚನೆಗೆ 31 ಹೊಸ ಶಾಸಕರ ಪತ್ರ

