Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?

Bengaluru City

ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?

Public TV
Last updated: February 18, 2026 1:01 pm
Public TV
Share
4 Min Read
Vidhana Soudha
SHARE

ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧದ (Media Restrictions) ಬಳಿಕ ಮತ್ತೆ ವಿಧಾನಸೌಧದಲ್ಲಿ ಭದ್ರತೆಯ ನೆಪವೊಡ್ಡಿ ಮಾಧ್ಯಮಗಳಿಗೆ ನಿರ್ಬಂಧ ಹಾಕುವ ಕೆಲಸಕ್ಕೆ ರಾಜ್ಯ ಸರ್ಕಾರ (Karnataka Government) ಮುಂದಾಗಿದೆ.

ಸೂಚಿಸಿದ ಸ್ಥಳದಲ್ಲಿ ಮಾತ್ರ ಜನಪ್ರತಿನಿಧಿಗಳನ್ನ ಮಾತನಾಡಿಸಬೇಕು ಎಂಬ ನಿಯಮ ತಂದು ಮಾಧ್ಯಮಗಳ ಸ್ವಾತಂತ್ರ‍್ಯ (Media Freedom) ಕಸಿಯೋ ಕೆಲಸಕ್ಕೆ ಕೈ ಹಾಕಿದೆ. ಇದನ್ನೂ ಓದಿ: ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್ – 10 ಮಂದಿ ವಿರುದ್ಧ ಎಫ್‌ಐಆರ್

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಲಕ್ಷ್ಮಣ ರೇಖೆ
ಪ್ರಜಾಪ್ರಭುತ್ವದ 4ನೇ ಸ್ತಂಭ ಎಂದೇ ಕರೆಯಲ್ಪಡುವ ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಮಾಧ್ಯಮ ಸ್ವಾತಂತ್ರ‍್ಯದ ಬಗ್ಗೆ ಮಾತನಾಡುವ ಸರ್ಕಾರವೇ ಈಗ ಮಾಧ್ಯಮಗಳ ಮೇಲೆ ಸವಾರಿ ಮಾಡಲು ಹೊರಟಿದೆ. ವಿಧಾನಸೌಧದಲ್ಲಿ ಮಾಧ್ಯಮಗಳನ್ನ ಹತ್ತಿಕ್ಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮತ್ತೆ ಮುಂದಾಗಿದೆ. ಭದ್ರತೆಯ ನೆಪವೊಡ್ಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮಾಧ್ಯಮಗಳಿಗೆ ಹೊಸ ಲಕ್ಷ್ಮಣ ರೇಖೆ ಎಳೆದಿದೆ.

ಮಾಧ್ಯಮಗಳನ್ನ ನಿಗದಿತ ಸ್ಥಳಕ್ಕೆ ಮಾತ್ರ ನಿಯಂತ್ರಣ ಮಾಡುವ ಹುನ್ನಾರ ಮಾಡಿದೆ. ಮಾಧ್ಯಮಗಳಿಂದ ಭದ್ರತೆಗೆ ಸಮಸ್ಯೆ ಆಗ್ತಿದೆ ಅಂತ ಹೇಳಿ ಇನ್ನು ಮುಂದೆ ವಿಧಾನಸೌಧದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಜನಪ್ರತಿನಿಧಿಗಳ ಪ್ರತಿಕ್ರಿಯೆ ಪಡೆಯಬೇಕು ಅಂತ ನಿಯಮ ಮಾಡಿದೆ. ಇದನ್ನೂ ಓದಿ: Rajya Sabha Elections: 10 ರಾಜ್ಯಗಳ 37 ಸ್ಥಾನಗಳಿಗೆ ಮಾ.16 ರಂದು ಮತದಾನ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ವಾರ್ತಾ ಇಲಾಖೆಗೆ ಈ ಸಂಬಂಧ ಪತ್ರ ಬರೆದಿದ್ದು, ಭದ್ರತೆಯ ನೆಪವೊಡ್ಡಿ ಮಾಧ್ಯಮಗಳ ಮೇಲೆ ಸರ್ಕಾರ ಸವಾರಿ ಮಾಡಲು ಹೊರಟಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ತರೋ ಕೆಲಸಕ್ಕೆ ಸರಕಾರವೇ ಮುಂದಾಗಿದೆ.

ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದದ್ದೇ ತಪ್ಪಾ..?
ಪದೇ ಪದೇ ವಿಧಾನಸೌಧದಲ್ಲಿ ಭದ್ರತೆಯ ಲೋಪ ಕಂಡು ಬರ್ತಿದೆ. ಇದನ್ನ ಮಾಧ್ಯಮಗಳು ತೋರಿಸುತ್ತಿರೋದೆ ದೊಡ್ಡ ಅಪರಾಧವಾಗಿದೆ. ಕಳೆದ ವಾರ ಸಿಬ್ಬಂದಿ ಮತ್ತು ಆಡಳಿತ ಸುಧಾಕರಣೆ ಇಲಾಖೆ ಸಿಬ್ಬಂದಿಯಿಂದಲೇ 300 ಗ್ರಾಂ ಚಿನ್ನದ ಸರ ಸಚಿವರ ಕೊಠಡಿಯಿಂದ ಕಳ್ಳತನ ಆಗಿತ್ತು. ಈಗ ತನ್ನ ಲೋಪದೋಷಗಳನ್ನ ಮುಚ್ಚಿಕೊಳ್ಳಲು ಮಾಧ್ಯಮಗಳ ಮೇಲೆ ನಿರ್ಬಂಧ ಅಸ್ತ್ರವನ್ನ ಡಿಪಿಎಆರ್ ಬಳಕೆ ಮಾಡಿದೆ. ಡಿಪಿಎಆರ್ ತಾಳಕ್ಕೆ ತಕ್ಕಂತೆ ವಾರ್ತಾ ಇಲಾಖೆ ಕುಣಿಯಲು ಹೊರಟಿದೆ.

ಹೊಸ ನಿಯಮದಲ್ಲಿ ಏನಿದೆ?
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಾರ್ತಾ ಇಲಾಖೆಗೆ ಪತ್ರ ಬರೆದಿದ್ದು, ಮಾಧ್ಯಮಗಳಿಗೆ ಕೆಲವು ಕಠಿಣ ಸೂಚನೆಗಳನ್ನ ನೀಡುವಂತೆ ತಿಳಿಸಿದೆ. ಇನ್ಮುಂದೆ ವಿಧಾನಸೌಧದಲ್ಲಿ ಎಲ್ಲೆಂದರಲ್ಲಿ ರಾಜಕೀಯ ನಾಯಕರ ಹೇಳಿಕೆ ಪಡೆಯುವಂತಿಲ್ಲ. ಕೇವಲ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಬೈಟ್ ಪಡೆಯಬೇಕು. ವಿಧಾನಸೌಧದ ಕಾರಿಡಾರ್‌ಗಳು ಅಥವಾ ಇತರ ಪ್ರಮುಖ ಸ್ಥಳಗಳಲ್ಲಿ ನಾಯಕರ ಅಭಿಪ್ರಾಯ ಪಡೆಯುವುದಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ರೈತರ ಮನೆ ಸೊಸೆ ಆಗುವವರಿಗೆ ಭತ್ಯೆ ಕೊಡಬೇಕು – ಸರ್ಕಾರಕ್ಕೆ ಶಾಸಕ ಕುಣಿಗಲ್ ರಂಗನಾಥ್ ಮನವಿ

ಮಾಧ್ಯಮಗಳ ಚಲನವಲನಕ್ಕೆ ಬ್ರೇಕ್
ಇಲ್ಲಿಯವರೆಗೆ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಕಾರಿಡಾರ್‌ಗಳಲ್ಲಿ, ಸಚಿವರ ಕೊಠಡಿಗಳ ಬಳಿ ಅಥವಾ ಮುಖ್ಯಮಂತ್ರಿಗಳ ಕಚೇರಿಯ ಹೊರಗೆ ರಾಜಕೀಯ ನಾಯಕರನ್ನು ಕಂಡಾಗ ತಕ್ಷಣವೇ ಪ್ರತಿಕ್ರಿಯೆ ಪಡೆಯುತ್ತಿದ್ದರು. ಆದರೆ, ಹೊಸ ನಿಯಮದ ಪ್ರಕಾರ ಮಾಧ್ಯಮದವರು ಎಲ್ಲೆಂದರಲ್ಲಿ ಕ್ಯಾಮೆರಾ ಹಿಡಿದು ನಿಲ್ಲುವಂತಿಲ್ಲ. ಇದು ರಾಜಕೀಯ ಬೆಳವಣಿಗೆಗಳ ಮೇಲೆ ಕ್ಷಣಕ್ಷಣದ ನಿಗಾ ಇಡುವ ಮಾಧ್ಯಮಗಳ ವೇಗಕ್ಕೆ ಅಡ್ಡಿಯಾಗಲಿದೆ.

ನಿಗದಿತ ಸ್ಥಳದಲ್ಲೇ ಬೈಟ್
ಸರ್ಕಾರವು ವಿಧಾನಸೌಧದಲ್ಲಿ ನಿರ್ದಿಷ್ಟವಾದ ಒಂದು ಅಥವಾ ಎರಡು ಸ್ಥಳಗಳನ್ನು ಮಾತ್ರ ‘ಮೀಡಿಯಾ ಪಾಯಿಂಟ್’ ಎಂದು ಗುರುತಿಸಲಿದೆ. ರಾಜಕೀಯ ನಾಯಕರು ಅಥವಾ ಸಚಿವರು ತಮಗೆ ಇಷ್ಟವಿದ್ದರೆ ಮಾತ್ರ ಆ ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕಾಗುತ್ತದೆ.

ಕಾರಿಡಾರ್‌ಗಳಲ್ಲಿ ‘ಕ್ಯಾಮೆರಾ’ ನಿಷೇಧ
ವಿಧಾನಸೌಧದ ಕಾರಿಡಾರ್‌ಗಳು (ಪಡಸಾಲೆಗಳು) ಪ್ರಮುಖ ಚರ್ಚೆಗಳು ನಡೆಯುವ ತಾಣಗಳು. ಇಲ್ಲಿ ನಾಯಕರನ್ನ ಪ್ರಶ್ನಿಸುವುದು ಪತ್ರಕರ್ತರಿಗೆ ಸುಲಭವಾಗಿತ್ತು. ಈಗ ಇಲ್ಲಿ ಬೈಟ್ ಪಡೆಯುವುದನ್ನು ನಿಷೇಧಿಸಿರುವುದರಿಂದ, ಒಳಗಡೆ ನಡೆಯುವ ಭ್ರಷ್ಟಾಚಾರ ಅಥವಾ ಭದ್ರತಾ ಲೋಪಗಳಂತಹ ವಿಚಾರಗಳನ್ನು ಪ್ರಶ್ನಿಸಲು ಮಾಧ್ಯಮಗಳಿಗೆ ಅವಕಾಶವೇ ಸಿಗದಂತೆ ಮಾಡುವ ತಂತ್ರ ಇದಾಗಿದೆ.

ವಿರೋಧ ಪಕ್ಷದ ಧ್ವನಿ ಹತ್ತಿಕ್ಕುವಿಕೆ
ಸರ್ಕಾರದ ತಪ್ಪುಗಳನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಥವಾ ಕಾರಿಡಾರ್‌ಗಳಲ್ಲಿ ನಿಂತು ಮಾಧ್ಯಮಗಳ ಮುಂದೆ ವಿರೋಧ ಪಕ್ಷದ ನಾಯಕರು ಬಿಚ್ಚಿಡುತ್ತಿದ್ದರು. ಈಗ ‘ನಿಗದಿತ ಸ್ಥಳ’ದ ನಿಯಮದಿಂದಾಗಿ ವಿರೋಧ ಪಕ್ಷದ ನಾಯಕರು ಮಾಧ್ಯಮಗಳಿಗೆ ಸಿಗದಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಸಂಶಯ ದಟ್ಟವಾಗಿದೆ.

ಭದ್ರತಾ ಲೋಪಗಳ ಮರೆಮಾಚಲು ಈ ನಡೆ?
ಇತ್ತೀಚೆಗೆ ವಿಧಾನಸೌಧದ ಹೈ-ಸೆಕ್ಯೂರಿಟಿ ವಲಯದಲ್ಲೇ ನಡೆದ ಚಿನ್ನದ ಕಳ್ಳತನದಂತಹ ಪ್ರಕರಣಗಳು ಸರ್ಕಾರದ ಭದ್ರತಾ ವೈಫಲ್ಯವನ್ನ ತೋರಿಸಿದ್ದವು. ಮಾಧ್ಯಮಗಳು ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸುಳಿದಾಡುವುದರಿಂದ ಈ ಲೋಪಗಳು ಪದೇ ಪದೇ ಜಗಜ್ಜಾಹೀರಾಗುತ್ತಿವೆ ಎಂಬುದು ಸರ್ಕಾರದ ಅಸಮಾಧಾನ.

ಕಳೆದ ವಾರವಷ್ಟೇ ವಿಧಾನಸೌಧದ ಒಳಗಡೆ 300 ಗ್ರಾಂ ಚಿನ್ನದ ಕಳ್ಳತನವಾಗಿತ್ತು. ಇದು ಸರ್ಕಾರದ ಭದ್ರತಾ ಲೋಪವನ್ನು ಜಗಜ್ಜಾಹೀರು ಮಾಡಿತ್ತು. ಪದೇ ಪದೇ ಬಹಿರಂಗವಾಗುತ್ತಿರುವ ಭದ್ರತಾ ಲೋಪಗಳ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಬಾರದು ಮತ್ತು ಸರ್ಕಾರದ ನಕಾರಾತ್ಮಕ ಸುದ್ದಿಗಳನ್ನು ಹತ್ತಿಕ್ಕಬೇಕು ಎಂಬ ಉದ್ದೇಶ ಈ ಆದೇಶದ ಹಿಂದೆ ಇದೆಯೇ ಎಂಬ ಸಂಶಯ ಮೂಡಿದೆ.

TAGGED:Karnataka GovernmentMedia BanNews Mediasiddaramaiahvidhana soudhaಕರ್ನಾಟಕ ಸರ್ಕಾರಮಾಧ್ಯಮ ನಿರ್ಬಂಧವಿಧಾನಸೌಧಸಿದ್ದರಾಮಯ್ಯಸುದ್ದಿ ಮಾಧ್ಯಮ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

g.parameshwara 2
Bengaluru City

ಕಾಂಗ್ರೆಸ್‌ಗೆ ಮುಸ್ಲಿಮರ ತಲಾಖ್‌ ಎಚ್ಚರಿಕೆ – ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ ಎಂದ ಪರಮೇಶ್ವರ್‌

Public TV
By Public TV
18 seconds ago
Jayanagar Blackmail 2
Bengaluru City

ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು 1.5 ಕೋಟಿ ರೂ.ಗೆ ಬೇಡಿಕೆ – ಲೇಡಿ ಇನ್ಫ್ಲುಯೆನ್ಸರ್‌ ವಿರುದ್ಧ FIR

Public TV
By Public TV
8 minutes ago
West Bengal Election Election elephant appeared at a booth in the Jangalmahal forest region during the first phase of voting
Latest

West Bengal Election | ಮತದಾನ ಆರಂಭವಾಗುವ ಮೊದಲೇ ಮತಗಟ್ಟೆಗೆ ಆಗಮಿಸಿದ ಆನೆ!

Public TV
By Public TV
33 minutes ago
G Parameshwar 1
Bengaluru City

ಕಬಡ್ಡಿ ಬೆಟ್ಟಿಂಗ್ ಕೇಸ್‌ನಲ್ಲಿ ಪರಮೇಶ್ವರ್‌ಗೆ ಬಿಗ್ ರಿಲೀಫ್ – FIR ದಾಖಲಿಸದಂತೆ ಹೈಕೋರ್ಟ್ ತಡೆ

Public TV
By Public TV
36 minutes ago
SSLC Results Chikkodis Prathana who studied in a government school secured first place in Karnataka
Belgaum

SSLC Results| ಸರ್ಕಾರಿ ಶಾಲೆಯಲ್ಲಿ ಓದಿದ ಚಿಕ್ಕೋಡಿಯ ಪ್ರಾರ್ಥನಾ ರಾಜ್ಯಕ್ಕೆ ಫಸ್ಟ್‌

Public TV
By Public TV
59 minutes ago
kea
Bengaluru City

ಸಿಇಟಿ ಪರೀಕ್ಷೆಯ ಮೊದಲ ದಿನ 96% ಹಾಜರಾತಿ – ಕೊನೆಕ್ಷಣದಲ್ಲಿ ಬಂದವರಿಗೂ ಬರೆಯಲು ಅವಕಾಶ: KEA

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?