ಮಡಿಕೇರಿ: ನ್ಯಾಯ ಒದಗಿಸೋದ್ರಲ್ಲಿ ಕರ್ನಾಟಕ ಪೊಲೀಸರು (Karnataka Police) ದೇಶದಲ್ಲೇ ನಂ.1 ಸ್ಥಾನದಲ್ಲಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ (G Parameshwar) ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೋಪ್ಪ ಗ್ರಾಮದಲ್ಲಿ ಪೊಲೀಸರ ನೂತನ ವಸತಿ ಗೃಹ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಇಂದು ಮಹಿಳೆಯರು ಸುರಕ್ಷಿತವಾಗಿ ಓಡಾಟ ನಡೆಸಲು ಇಡೀ ದೇಶದಲ್ಲೇ ಮೊದಲ ನಗರ ಯಾವುದು ಅಂದ್ರೆ ಬೆಂಗಳೂರು ಇದೆ. ಕರ್ನಾಟಕ ಪೊಲೀಸರು ನ್ಯಾಯ ಒದಗಿಸೋದ್ರಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ವಿಪಕ್ಷದವರು ಸುಮ್ಮನೆ ಟೀಕೆ ಮಾಡ್ತಾರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾರೆ. ಏನ್ ಸರಿಯಿಲ್ಲ ಅಂತ ಅವರೇ ಹೇಳಬೇಕು. ಸುಖಾ ಸುಮ್ಮನೆ ಅಸಮರ್ಥ ಗೃಹ ಸಚಿವ ಅನ್ನೋದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ

ಆಸ್ತಿ ವಿಚಾರಕ್ಕೆ ತಂದೆ-ತಾಯಿ ಜೊತೆ ಜಗಳ ಆಡ್ತಾರೆ, ಅದಕ್ಕೆ ಪೊಲೀಸ್ ಇಲಾಖೆ ಸರಿ ಇಲ್ಲ ಅಂದ್ರೆ ಇವರ ಮನಸ್ಥಿತಿ ಹೇಗಿರಬೇಕು? ಪ್ರತಿಯೊಬ್ಬ ಪೊಲೀಸರು ಮಳೆ, ಗಾಳಿ, ಬಿಸಿಲೆನ್ನದೇ ಹಗಲು ರಾತ್ರಿ ದುಡಿಯುತ್ತಾರೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಇರಬೇಕು ಅಂತ ಕೆಲಸ ಮಾಡ್ತಾರೆ. ಅವರ ಆತ್ಮವಿಶ್ವಾಸ ಕಳೆಯಬೇಡಿ ಎಂದು ತಿಳಿ ಹೇಳಿದ್ರು. ಇದನ್ನೂ ಓದಿ: ಕೋಮುವಾದದಿಂದ ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿ ಬಂಡವಾಳ ಹಾಕಲು ಹೆದರುತ್ತಿದೆ: ಪ್ರಿಯಾಂಕ್ ಖರ್ಗೆ

