ಮಂಡ್ಯ: ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ನಮ್ಮ ಹೈಕಮಾಂಡ್. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು. ಆದರೆ ಹೈಕಮಾಂಡ್‌ಗೆ ನಾವು ನೋಟೀಸ್ ಕೊಡಲು ಸಾಧ್ಯವಿಲ್ಲ ಎಂದು ಶಾಸಕ ಗಣಿಗ ರವಿಕುಮಾರ್ (Ganiga Ravikumar) ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ನಮ್ಮ ಹೈಕಮಾಂಡ್ ಎಂದು ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ನಾನೂ ಅದನ್ನೇ ಪುನರ್ ಉಚ್ಚರಿಸುತ್ತೇನೆ. ಅವರು ನಮ್ಮ ಹೈಕಮಾಂಡ್ ಅನ್ನೋದನ್ನ 100 ಪರ್ಸೆಂಟ್ ಒಪ್ಪಿಕೊಳ್ಳುತ್ತೀವಿ. ಯಾರೂ ಸ್ಟೇಟ್‌ಮೆಂಟ್ ಕೊಡಬೇಡಿ ಅಂತ ನಾಲ್ಕು ಬಾರಿ ಹೇಳಿದರು. ಆದರು ಸ್ಟೇಟ್‌ಮೆಂಟ್ ಕೊಡುತ್ತಿದ್ದಾರೆ ಅಂದ್ರೆ ಅವರು ಸುಪ್ರೀಂ. ಖರ್ಗೆಯವರಿಗಿಂತ ಜಾಸ್ತಿ, ಡಿಕೆ ಅವರಿಗಿಂತ ಕಡಿಮೆ ಅಂತ ಹೇಳೋದಕ್ಕೆ ಆಗಲ್ಲ. ಮಾತನಾಡಬೇಡಿ ಅಂದರೂ ಮಾತನಾಡುತ್ತಿದ್ದಾರೆ ಅಂದ್ರೆ ಪವರ್‌ಫುಲ್ ಮ್ಯಾನ್ ಎಂದು ಯತೀಂದ್ರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾ ಬಲೆಗೆ
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೇಬೇಕು. ಅವರು ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ. ಡಿಕೆಶಿ ರಾಜಕಾರಣವನ್ನು ಅರೆದು ಕುಡಿದಿದ್ದಾರೆ. ಯಾವಾಗ, ಯಾವ ಪಾನ್ ಮೂ ಮಾಡಿದ್ರೆ ಗೇಮ್ ಗೆಲ್ಲಬಹುದು ಅಂತ ಗೊತ್ತಿದೆ. ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಅವರಿಗಿದೆ. ಗೆಲ್ಲುವ ಬುದ್ಧಿವಂತಿಕೆ ಇರೋದಕ್ಕೆ ಸೈಲೆಂಟಾಗಿ ಕಾಯಿನ್ ಮೂ ಮಾಡುತ್ತಿದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು. ಆಟವನ್ನು ಬಿಟ್ಟು ಬಿಡಲು ಆಗಲ್ಲ. ನಮ್ಮದು ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠ ಭಾರತ ಟೀಂ ಎಂದು ಡಿಕೆಶಿ ಟೀಂ ಅನ್ನು ಭಾರತದ ಕ್ರಿಕೆಟ್ ಟೀಂಗೆ ಹೋಲಿಸಿದರು. ಸಿಎಂ ಆಗಬೇಕು ಅನ್ನುವ ಆಸೆ ಡಿ.ಕೆ.ಶಿವಕುಮಾರ್ ಅವರಿಗಿದೆ. ಪ್ರಶ್ನೆಗಳಿಗೆ ಅತೀ ಶೀಘ್ರದಲ್ಲೇ ಉತ್ತರ ಬರಲಿದೆ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟ – ಮನೆ ಗೋಡೆ ಛಿದ್ರ
ಭ್ರಷ್ಟ ಸರ್ಕಾರ ತೆಗೆಯುವುದೇ ನನ್ನ ಅಜೆಂಡ ಎಂದು ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ, ಬೆಸ್ಟ್ ಆಫ್ ಲಕ್. ಯಾವಾಗಲೂ ಸರ್ಕಾರ ತೆಗೆಯುವುದರಲ್ಲೇ ಇರುತ್ತಾರೆ. ಅವರ ಸರ್ಕಾರವನ್ನೇ 12 ತಿಂಗಳಲ್ಲಿ ತೆಗೆದುಕೊಂಡು ಬಿಟ್ಟರಲ್ಲ. ಐದು ವರ್ಷ ಸಿಎಂ ಆಗಿ ಇರಬಹುದಿತ್ತು. ಆದರೆ ಅವರಿಗೆ ತಮ್ಮದು ಆಡಳಿತ ಪಕ್ಷನ ಅಥವಾ ವಿರೋಧ ಪಕ್ಷನ ಎಂಬುದು ಗೊಂದಲವಿದೆ. ಸರ್ಕಾರ ನಡೆಯುತ್ತಿದ್ದರೆ ಅಮೆರಿಕಗೆ ಹೋಗಿ ಕೂತುಕೊಳ್ಳುತ್ತಾರಾ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಜರಾಯಿ ಇಲಾಖೆ ನಿರ್ಲಕ್ಷ್ಯ – ಪಾಳು ಬಿದ್ದ 140 ವರ್ಷ ಇತಿಹಾಸವುಳ್ಳ ಪುರಾತನ ದೇವಾಲಯ!
ಎಆರ್‌ಎಐ ಘಟಕ ಸ್ಥಾಪನೆಗೆ ಜಾಗ ನೀಡಿರುವ ವಿಚಾರದ ಕುರಿತು ಮಾತನಾಡಿದ ಅವರು, ಜಾಗ ಕೊಟ್ಟಿದ್ದೇವೆ, ಕುಮಾರಸ್ವಾಮಿ ಕೈಗಾರಿಕೆ ತರಲಿ. ನಮ್ಮ ಕೆಲಸ ಮುಗಿದಿದೆ, ಭೂಮಿ ಪೂಜೆ ಯಾವಾಗ? ನನ್ನ ಕ್ಷೇತ್ರ ಅಭಿವೃದ್ಧಿ ಆಗಬೇಕು. ಕುಮಾರಸ್ವಾಮಿಗೆ ನಮ್ಮ ಸಹಕಾರ ಕೊಡುತ್ತೇವೆ. ಸೆಮಿಕಂಡಕ್ಟರ್, ಅಮೆರಿಕ ಕಥೆ ಮುಗೀತು. ಎಆರ್‌ಎಐಗೆ ಜಾಗ ಕೊಟ್ಟಿದ್ದೇವೆ, ನೋಡೋಣ ಇನ್ನು ಎಷ್ಟು ಪಿಕ್ಚರ್ ಬರುತ್ತೆ ಅಂತ. ಜಾಗ ನೀಡುವ ಜೊತೆಗೆ 100% ಮೂಲ ಸೌಕರ್ಯ ಕೊಟ್ಟಿದ್ದೇವೆ. ನಾನು ಕುಮಾರಸ್ವಾಮಿ ಪರ ಇದ್ದೇನೆ ನಾನು ರಾಜಕೀಯ ಟೀಕೆ ಮಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ಶಿವರಾತ್ರಿ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಮಹಾರುದ್ರಾಭಿಷೇಕ

