ಚಾಮರಾಜನಗರ: ಅಪಘಾತ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ 1 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಹದಿನಾರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಅಪರಾಧಿಯನ್ನ ಚಾಮರಾಜನಗರ ಗ್ರಾಮಾಂತರ ಪೊಲೀಸರು (Chamarajanagara Rural Police) ಬಂಧಿಸಿದ್ದಾರೆ.
ನಂಜನಗೂಡು ಪಟ್ಟಣ ನೀಲಕಂಠ ನಗರದ ಸಫಿ ಬಿನ್ ಸೈಯದ್ ಮಹಮ್ಮದ್ ಎಂಬ ಆಟೋ ಚಾಲಕ (Auto Driver) 2010 ರಿಂದ ಪೊಲೀಸರ ಕೈಗೂ ಸಿಗದೆ, ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮನಸೋ ಇಚ್ಛೆ ಮಾರ್ಪಡಿಸಿದ ಐಷಾರಾಮಿ ಕಾರು ಸೀಜ್

ಸಫಿಗೆ ಅಪಘಾತ ಪ್ರಕರಣವೊಂದರಲ್ಲಿ ಚಾಮರಾಜನಗರ ಜೆಎಂಎಫ್ಸಿ ನ್ಯಾಯಾಲಯ 2010 ರಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಅಂದಿನಿಂದಲು ತಲೆ ಮರೆಸಿಕೊಂಡಿದ್ದ ಸಫಿಯನ್ನ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: ಒಂದೂವರೆ ವರ್ಷದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಎಸ್.ಜಿ.ನಂಜಯ್ಯನಮಠ

