– 2 ಲಕ್ಷ ಕೋಟಿ ಸಾಲ ಮಾಡಿದೆ, ಕೇಂದ್ರದ ಖಜಾನೆ ಖಾಲಿಯಾಗಿದೆ ಅಂತ ಕಿಡಿ
ಬೆಂಗಳೂರು: ನಮ್ಮ ಮೆಟ್ರೋ ದರದ (Namma Metro Ticket Price Hike) ಕುರಿತು ಬಿಜೆಪಿಗರು ಪ್ರತಿಭಟನೆ ಮಾಡ್ತಾರೆ. ಆದರೆ ದರ ಹೆಚ್ಚಳಕ್ಕೆ ಅವರೇ ಕಾರಣ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಮೆಟ್ರೋ ಕೇಂದ್ರದ ಅಧೀನದಲ್ಲಿ ಬರುತ್ತದೆ. ಎಲ್ಲ ಮೆಟ್ರೋಗಳಿಗೆ ಕೇಂದ್ರದ ನಗರಾಭಿವೃದ್ಧಿಯ ಪ್ರಧಾನ ಕಾರ್ಯದರ್ಶಿ ಮುಖ್ಯಸ್ಥರಾಗಿರುತ್ತಾರೆ. ದರ ನಿಗದಿಗೆ ಸಮಿತಿ ಇರುತ್ತದೆ. ಆ ಸಮಿತಿ ನಿರ್ಧಾರ ತಗೆದುಕೊಂಡಿದೆ. ಕೊನೆಗೆ ಕೇಂದ್ರದ (Central Government) ಅಡಿಯಲ್ಲಿ ಇದೆಲ್ಲ ಬರುತ್ತದೆ. ನಮ್ಮ ಪ್ರತಿನಿಧಿ ಒಬ್ಬರು ಇರುತ್ತಾರೆ ಅಷ್ಟೇ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಹಾರಾಡುತ್ತಿದ್ದಾಗ ಇಂಧನ ಖಾಲಿಯಾಗಿದ್ದು ಹೇಗೆ? – ವಿಮಾನ ಪತನದ ಬಗ್ಗೆ ಮೂಡಿವೆ ಅನುಮಾನ

ಮೆಟ್ರೋಗೆ ಕೇಂದ್ರ ಸಬ್ಸಿಡಿ ಕೊಡಲಿ ನಾವು ಕೋಟ್ಯಂತರ ರೂಪಾಯಿ ಟ್ಯಾಕ್ಸ್ ಕಟ್ಟುತ್ತೇವೆ. ನಮಗೆ ಒಂದು ರೂಪಾಯಿಗೆ 13 ಪೈಸೆ ಮಾತ್ರ ಕೊಡ್ತಾರೆ. ಒಳ್ಳೆದು ಮಾಡಿದ್ರೆ ಮೋದಿ ಮಾಡಿದ್ದು, ಇಲ್ಲದಿದ್ದರೇ ಸಿದ್ದರಾಮಯ್ಯ ಮಾಡಿದ್ದು ಅಂತಾರೆ. ದೊಡ್ಡ ಡ್ರಾಮಾ ಮಾಡ್ತಾರೆ. ಇವೆರಲ್ಲ ರಾಜಕಾರಣ ಬಿಟ್ಟು ಡ್ರಾಮ ಕಂಪನಿ ಮಾಡೋದು ಒಳ್ಳೆಯದು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ದೆಹಲಿಗೆ ಹೋಗೋದು ರಾಜಕಾರಣ; ಹೈಕಮಾಂಡ್ ನಾಯಕರೊಬ್ಬರು ಕರೆದಿದ್ದಾರೆ – ಡಿಕೆಶಿ
ಮೋದಿ ಸರ್ಕಾರ ಹೆಚ್ಚು ಹೊಸ ಸಾಲ ಮಾಡಿದೆ. ಹೀಗಾಗಿ ಅಂಕಿ-ಅಂಶಗಳನ್ನು ನೋಡಿ ಯಾರ ಖಜಾನೆ ಖಾಲಿಯಾಗಿದೆ ಅಂತ ಗೊತ್ತಾಗುತ್ತದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಮೆಟ್ರೋ ಬರುತ್ತೆ. ಕೇಂದ್ರದ ಅರ್ಬನ್ ಡೆವಲಪ್ಮೆಂಟ್ ಸೆಕ್ರೆಟರಿ ಹೆಡ್ ಆಗಿರ್ತಾರೆ. ಮೂರು ಜನರ ಒಂದುಕಮಿಟಿ ಇದೆ. ಒಂದು ರಾಜ್ಯ ಎರಡು ಕೇಂದ್ರ ಸರ್ಕಾರದ ಅಧಿಕಾರಿಗಳು ಇರ್ತಾರೆ. ಅವರು ರೆಫರ್ ಮಾಡಿದ ಮೇಲೆ ಕೇಂದ್ರ ನಿರ್ಧಾರ ಮಾಡುತ್ತೆ, ಬಿಜೆಪಿಗರು ಸುಳ್ಳು ಆರೋಪ ಮಾಡುತ್ತಾರೆ ಎಂದು ತಿವಿದಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ವಾಪಸ್ ಪಡೆಯಬೇಕು – ಆರ್.ಅಶೋಕ್ ಆಗ್ರಹ

3 ಲಕ್ಷ ಕೋಟಿ ಬೆಂಗಳೂರಿನಿಂದ ಕೇಂದ್ರಕ್ಕೆ ಹೋಗುತ್ತೆ. ಆದ್ರೆ ಮೆಟ್ರೋ ಗೆ ಕೇಂದ್ರ ಸಬ್ಸಿಡಿ ನೀಡಲಿ ಅಂತ ಬಿಜೆಪಿ ಸಂಸದರು ಮಾತನಾಡಲ್ಲ. ಕೇಂದ್ರ ಸರ್ಕಾರ ಮಾಡಿದ್ದೇ ಸರಿ ಅಂತಾರೆ. ಎಲ್ಲ ನಿರ್ಧಾರ ಅವರ ಕೈಯಲ್ಲಿ ಇದೆ. ಒಳ್ಳೆಯ ಕೆಲಸ ಆದ್ರೆ ಮೋದಿ ಅಂತಾರೆ, ಬೆಲೆ ಏರಿಕೆ ರಾಜ್ಯ ಸರ್ಕಾರ ಅಂತಾರೆ, ಹುಟ್ಟು ಸುಳ್ಳುಗಾರರು, ಸುಳ್ಳು ಹೇಳಿಲ್ಲ ಅಂದ್ರೆ ತಿಂದ ಅನ್ನ ಅರಗಲ್ಲ ಅವರಿಗೆ. ಡ್ರಾಮಾ ಮಾಸ್ಟರ್ ಗಳು ಬಿಜೆಪಿಗರು. ನಮ್ಮ ಸಾಲದ ಬಗ್ಗೆ ಮಾತನಾಡುತ್ತಾರೆ, ಕೇಂದ್ರ ಸರ್ಕಾರ ಸಾಲ ಎಷ್ಟಿದೆ? ಪ್ರತಿ ವರ್ಷ ಕೇಂದ್ರ ಸರ್ಕಾರ ಸಾಲ ಮಾಡುತ್ತಿದೆ. 2 ಲಕ್ಷ ಕೋಟಿ ಸಾಲ ಕೇಂದ್ರ ಮಾಡಿದೆ, ಖಜಾನೆ ಯಾರದ್ದು ಖಾಲಿಯಾಗಿದೆ? ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.

