ವಾಷಿಂಗ್ಟನ್: ಅಮೆರಿಕದ (America) ಮಿಸ್ಸಿಸ್ಸಿಪ್ಪಿಯ (Mississippi) ಕ್ಲೇ ಕೌಂಟಿಯಲ್ಲಿ ನಡೆದ ಸರಣಿ ಗುಂಡಿನ ದಾಳಿಗೆ 6 ಮಂದಿ ಬಲಿಯಾಗಿದ್ದಾರೆ. ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ. ‘ನಮ್ಮ ಸಮುದಾಯಕ್ಕೆ ಇನ್ಮುಂದೆ ಯಾವುದೇ ಬೆದರಿಕೆಯನ್ನು ಒಡ್ಡುತ್ತಿಲ್ಲ’ ಎಂದು ಕ್ಲೇ ಕೌಂಟಿ ಶೆರಿಫ್ ಎಡ್ಡಿ ಸ್ಕಾಟ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ಯುವಕನನ್ನು ಥಳಿಸಿ ವಿಷ ಕುಡಿಸಿ ಕೊಂದ ದುಷ್ಕರ್ಮಿಗಳು
ಘಟನೆ ಸಂಬಂಧ ಕ್ಲೇ ಕೌಂಟಿ ಶೆರಿಫ್ ಕಚೇರಿ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಹೆಚ್ಚಿನ ಮಾಹಿತಿಯನ್ನು ನಿಗದಿತ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಶಾನ್ಯ ಮಿಸಿಸಿಪ್ಪಿಯಲ್ಲಿರುವ ಕ್ಲೇ ಕೌಂಟಿಯು ಸುಮಾರು 20,000 ಜನಸಂಖ್ಯೆಯನ್ನು ಹೊಂದಿದೆ.
ಮಿಸ್ಸಿಸ್ಸಿಪ್ಪಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೂರು ಗುಂಡಿನ ದಾಳಿಗಳು ನಡೆದಿದ್ದವು. ಇವೆಲ್ಲವೂ ಪ್ರೌಢಶಾಲಾ ಫುಟ್‌ಬಾಲ್ ಆಟಗಳಿಗೆ ಸಂಬಂಧಿಸಿವೆ ಎಂದು ವರದಿಯಾಗಿದೆ. ವಾಯುವ್ಯ ಮಿಸ್ಸಿಸ್ಸಿಪ್ಪಿ ನಗರದ ಲೆಲ್ಯಾಂಡ್‌ನಲ್ಲಿ ನಡೆದ ಇಂತಹ ಒಂದು ದಾಳಿಯಲ್ಲಿ ಆರು ಜನರು ಸಾವಿಗೀಡಾಗಿ, 12 ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ಇರಾನ್‌ನಲ್ಲಿ ಭುಗಿಲೆದ್ದ ಹಿಂಸಾಚಾರ – ರಾಜಧಾನಿಯಲ್ಲೇ 217 ಮಂದಿ ಬಲಿ

