ಬಿಹಾರದಲ್ಲಿ ಎನ್‌ಡಿಎ ಕಮಾಲ್
NDA – 208
MGB – 28
OTH – 7 ಸ್ಥಾನಗಳಲ್ಲಿ ಮುನ್ನಡೆ
6 ಸ್ಥಾನಗಳಲ್ಲಿ AIMIM ಮುನ್ನಡೆ
ಚುನಾವಣಾ ವೆಬ್‌ಸೈಟ್ ಪ್ರಕಾರ AIMIM 6 ಕ್ಷೇತ್ರಗಳಲ್ಲಿ ಮುನ್ನಡೆ, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ
5 ಸ್ಥಾನದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ
ಕಣಕ್ಕೆ ಇಳಿದ 61 ಕ್ಷೇತ್ರಗಳ ಪೈಕಿ 5 ರಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ. ಆರ್‌ಜೆಡಿ 28 ಕ್ಷೇತ್ರಗಳಲ್ಲಿ ಮುನ್ನಡೆ. ಬಿಜೆಪಿ 89, ಜೆಡಿಯು 83 ಕ್ಷೇತ್ರಗಳಲ್ಲಿ ಮುನ್ನಡೆ
ವಿಜಯ ಉತ್ಸವ ಮಾಡುತ್ತೇವೆ: ಸಂಜಯ್ ಜೈಸ್ವಾಲ್
“ಪ್ರಧಾನಿ ಮೋದಿ-ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎಯನ್ನು ಬೆಂಬಲಿಸಿದ್ದಕ್ಕಾಗಿ ಬಿಹಾರದ ಮತದಾರರಿಗೆ ನಾನು ಧನ್ಯವಾದ ಹೇಳುತ್ತೇನೆ. ಸಂಜೆ 5 ಗಂಟೆ ಸುಮಾರಿಗೆ ಪಾಟ್ನಾದ ಬಿಜೆಪಿ ಕಚೇರಿಯಲ್ಲಿ ವಿಜಯ ಉತ್ಸವ ನಡೆಯಲಿದೆ” – ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್
ಬಿಹಾರ ಜನರ ತೀರ್ಪಿಗೆ ತಲೆಬಾಗುತ್ತೇವೆ: ಡಿಕೆ ಶಿವಕುಮಾರ್
ಎನ್‌ಡಿಎಗೆ ಸ್ಪಷ್ಟವಾದ ಜನಾದೇಶ: ಬಿಎಸ್‌ವೈ
“ಬಿಹಾರವು ಎನ್‌ಡಿಎಗೆ ಸ್ಪಷ್ಟ ಮತ್ತು ಆತ್ಮವಿಶ್ವಾಸದ ಜನಾದೇಶವನ್ನು ನೀಡಿದೆ. ಜನರ ನಂಬಿಕೆಯು ಅಭಿವೃದ್ಧಿಯತ್ತ ಕೆಲಸ ಮಾಡುವುದನ್ನು ಮುಂದುವರಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ನರೇಂದ್ರ ಮೋದಿ ಅವರ ಸ್ಥಿರ ನಾಯಕತ್ವ ಮತ್ತು ಮಾರ್ಗದರ್ಶನಕ್ಕಾಗಿ ಅಭಿನಂದನೆಗಳು” – ಯಡಿಯೂರಪ್ಪ
ಮೋದಿ-ನಿತೀಶ್ ಹವಾ – ಬಿಹಾರದಲ್ಲಿ NDA ದ್ವಿಶತಕ
ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಇನ್ನೇನು ಮುಕ್ತಾಯ ಹಂತಕ್ಕೆ ಬರುತ್ತಿದೆ. ಎನ್‌ಡಿಎ ಬರೋಬ್ಬರಿ 200 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸರ್ಕಾರ ರಚಿಸಲು ಉತ್ಸುಕವಾಗಿದೆ. 243 ಕ್ಷೇತ್ರಗಳ ಪೈಕಿ ಎಲ್ಲಾ 202 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿವೆ. 122 ಮ್ಯಾಜಿಕ್ ನಂಬರ್.
ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಮುನ್ನಡೆ?
BJP – 91
JD(U) – 81
LJP(RV) – 21
HAM(S) – 5
RLM – 4
ರಾಘೋಪುರದಲ್ಲಿ ಹಾವು-ಏಣಿ ಆಟ; ತೇಜಸ್ವಿ ಯಾದವ್‌ಗೆ ಮತ್ತೆ 2,288 ಮತಗಳ ಹಿನ್ನಡೆ
ಮಹಾಘಟಬಂಧನ್ ಉಡೀಸ್ ಮಾಡಲು ಪಕ್ಕಾ ಪ್ಲ್ಯಾನ್- ಕಮಲ ಗೆಲುವಿನ ಹಿಂದಿದೆ ಕ್ಯಾಂಪೇನ್ ಕಮಾಲ್
ಮುಸ್ಲಿಂ ಬಾಹುಳ್ಯವುಳ್ಳ ಕ್ಷೇತ್ರಗಳಲ್ಲೂ NDA ಕಮಾಲ್
ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ಗೆ ಮತ್ತೆ ಮುನ್ನಡೆ
Bihar Election Results | ಮತದಾರ ಕೊಟ್ಟಿರೋ ತೀರ್ಪಿಗೆ ನಾವು ತಲೆಬಾಗುತ್ತೇವೆ: ಡಿಕೆಶಿ
ಬಿಹಾರ ಚುನಾವಣಾ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮತದಾರರು ಕೊಟ್ಟಿರುವ ತೀರ್ಪಿಗೆ ತಲೆಬಾಗುತ್ತೇವೆ ಎಂದು ತಿಳಿಸಿದರು.
ಬಿಹಾರ ಚುನಾವಣಾ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮತದಾರರು ಕೊಟ್ಟಿರುವ ತೀರ್ಪಿಗೆ ತಲೆಬಾಗುತ್ತೇವೆ ಎಂದು ತಿಳಿಸಿದರು.
ಬಿಹಾರ ಮೈತ್ರಿಕೂಟದಲ್ಲಿ ನಾವು ದೊಡ್ಡ ಪಾಲುದಾರರಾಗಲಿಲ್ಲ – ಕಾಂಗ್ರೆಸ್ ವಿರುದ್ಧವೇ ಶಶಿ ತರೂರ್ ಬೇಸರ
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿರುವ ಕುರಿತು ಕಾಂಗ್ರೆಸ್‌ನ ಹಿರಿಯ ಸಂಸದ ಶಶಿ ತರೂರ್ ಮಾತನಾಡಿ, ಸ್ವಪಕ್ಷದ ವಿರುದ್ಧವೇ ಬೇಸರ ಹೊರಹಾಕಿದರು.
ಎನ್‌ಡಿಎ ಹೆಚ್ಚಿನ ಅಂತರದಿಂದ ಮುನ್ನಡೆ ಸಾಧಿಸುತ್ತಿದೆ. ಆದ್ರೂ ಚುನಾವಣಾ ಆಯೋಗದಿಂದ ಅಧಿಕೃತ ಫಲಿತಾಂಶ ಹೊರಬರುವವರೆಗೆ ಕಾಯೋಣ. ಖಂಡಿತವಾಗಿಯೂ ಚುನಾವಣಾ ಫಲಿತಾಂಶದ ಬಗ್ಗೆ ಕಾರಣಗಳನ್ನ ಅಧ್ಯಯನ ಮಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷಕ್ಕೆ ಇದೆ. ಆರ್‌ಜೆಡಿ ತನ್ನ ಕಾರ್ಯಕ್ಷಮತೆಯನ್ನ ಎಚ್ಚರಿಕೆಯಿಂದ ನಿರ್ವಹಿಸಬೇಕಿತ್ತು, ಅದು ಆಗಲಿಲ್ಲ. ನಾವು ಕೂಡ ಮೈತ್ರಿಕೂಟದಲ್ಲಿ ದೊಡ್ಡ ಪಾಲುದಾರರಾಗಲಿಲ್ಲ ಎಂದು ಬೇಸರ ಹೊರಹಾಕಿದರು.
ಬಿಜೆಪಿ ಅತಿದೊಡ್ಡ ಪಕ್ಷ; ಪಾಟ್ನಾದಲ್ಲಿ ʻಮೋದಿ ರಥʼದಲ್ಲಿ ಸಂಭ್ರಮ
ಬಿಹಾರ ಚುನಾವಣೆ ಫಲಿತಾಂಶ ಇನ್ನೇನು ಮುಕ್ತಾಯ ಹಂತಕ್ಕೆ ಬರುತ್ತಿದೆ. ಎನ್‌ಡಿಎ 190+ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಇನ್ನೂ ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಮಧ್ಯಾಹ್ನ 12:40ರ ಟ್ರೆಂಡ್ ವೇಳೆಗೆ ಎನ್‌ಡಿಎ ಭಾಗವಾದ ಬಿಜೆಪಿ 89 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, 78 ಸ್ಥಾನಗಳಲ್ಲಿ ಜೆಡಿಯು ಮುನ್ನಡೆಯಲ್ಲಿದೆ. ಇನ್ನು ಮಹಾಘಟಬಂಧನ್ ಮೈತ್ರಿಕೂಟದ ಆರ್‌ಜೆಡಿ 33, ಕಾಂಗ್ರೆಸ್ ಕೇವಲ 4 ಸ್ಥಾನಗಳಲ್ಲಿದ್ದರೆ, ಚಿರಾಗ್ ಪಾಸ್ವಾನ್ ನಾಯಕತ್ವದ ಎಲ್‌ಜೆಪಿ 21 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಅಧಿಕೃತ ಫಲಿತಾಂಶ ಹೊರಬೀಳುವ ಮುನ್ನವೇ ವಿಜಯೋತ್ಸವ ಆಚರಿಸುತ್ತಿದ್ದಾರೆ. ಪಾಟ್ನಾದಲ್ಲಿ ʻಮೋದಿ ಮುಖದ ಚಿತ್ರವಿರುವ ರಥʼದಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಲಾಗುತ್ತಿದೆ.
ಮಗದ, ಮಿಥಿಲಾಂಚಲ ಸೇರಿ 6 ಪ್ರಾಂತ್ಯಗಳಲ್ಲಿ ಎನ್‌ಡಿಎ ಮೇಲುಗೈ
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕೊನೆಯ ಹಂತದತ್ತ ಸಾಗುತ್ತಿದ್ದು, ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಬಹುಮತದತ್ತ ದಾಪುಗಾಲಿಡುತ್ತಿದೆ. ಬಿಹಾರದಲ್ಲಿ ಪ್ರಮುಖವಾಗಿ 6 ಪ್ರಾಂತ್ಯಗಳಿದ್ದು, ಎಲ್ಲೆಡೆ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ. ಹಾಗೇಯೇ ಬಿಹಾರದ ಅಂಗ ಪ್ರದೇಶದಲ್ಲಿ ಒಟ್ಟು 27 ಕ್ಷೇತ್ರಗಳಿದ್ದು, ಇಲ್ಲಿ ಎನ್‌ಡಿಎ 23ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದು ಕಳೆದ ಚುನಾವಣೆಗೆ ಹೋಲಿಸಿದ್ರೆ ಹೆಚ್ಚುವರಿ 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯುದಕೊಂಡಿದೆ. ಕಳೆದ ಬಾರಿ 8 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿತ್ತು.
ಅತಿ ದೊಡ್ಡ ಪಕ್ಷ ಯಾವುದು? – ಬಿಜೆಪಿ, ಜೆಡಿಯು ಮಧ್ಯೆ ನೆಕ್-ಟು-ನೆಕ್ ಸ್ಪರ್ಧೆ
ಫಸ್ಟ್ ಟೈಮ್ ವೋಟರ್ಸ್ NDA ಪರವಾಗಿದ್ದಾರೆ; ಗಾಯಕಿ ಮೈಥಿಲಿ ಠಾಕೂರ್‌ಗೆ ಮುನ್ನಡೆ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಲಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಜನಪದ ಗಾಯಕಿ ಮೈಥಿಲಿ ಠಾಕೂರ್ ಮುನ್ನಡೆ ಸಾಧಿಸಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಈ ಕುರಿತು ಮಾತನಾಡಿರುವ ಮೈಥಿಲಿ, ಫಸ್ಟ್ ಟೈಮ್ ವೋಟರ್ಸ್ ಎನ್‌ಡಿಎ ಪರವಾಗಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಬಿಹಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎನ್ನುವ ಭರವಸೆನನ್ನು ನಾನು ಅವರಿಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
Trends At till 12 pm | 191 ಕ್ಷೇತ್ರಗಳಲ್ಲಿ ಎನ್‌ಡಿಎ ಭರ್ಜರಿ ಮುನ್ನಡೆ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ ಟ್ರೆಂಡ್ ಹೊತ್ತಿಗೆ ಎನ್‌ಡಿಎ 191 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಮಹಾಘಟಬಂಧನ್ 48, ಇತರರು 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಶೂನ್ಯ ಸುತ್ತಿದ್ದು, ಮುಖಭಂಗ ಅನುಭವಿಸಿದ್ದಾರೆ.
ರಾಹುಲ್ ಗಾಂಧಿ ಅಂದ್ರೆ ಸೋಲು, ಸೋಲು ಅಂದ್ರೆ ರಾಹುಲ್ ಗಾಂಧಿ – ಆರ್. ಅಶೋಕ್ ಲೇವಡಿ
ಬಿಹಾರ ಚುನಾವಣಾ ಫಲಿತಾಂಶ ಕುರಿತು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ 93 ಚುನಾವಣೆಗಳನ್ನ ಫೇಸ್ ಮಾಡಿದ್ದಾರೆ ಎಲ್ಲದರಲ್ಲೂ ಸೋತಿದ್ದಾರೆ. ರಾಹುಲ್ ಗಾಂಧಿ ಅಂದ್ರೆ ಸೋಲು, ಸೋಲು ಅಂದ್ರೆ ರಾಹುಲ್ ಗಾಂಧಿ ಎನ್ನುವಂತಾಗಿದೆ. ಅದಕ್ಕಾಗಿ ವೋಟ್ ವೋರಿ, ವೋಟಿಂಗ್ ಮಿಷನ್ ಸರಿಯಿಲ್ಲ ಅನ್ನೋದನ್ನ ಬ್ರ್ಯಾಂಡ್ ಮಾಡಿಕೊಂಡಿದ್ದಾರೆ. ವೋಟ್ ಚೋರಿ ಅನ್ನೋದು 15 ದಿನ ಫಾರಿನ್‌ಗೆ ಓಡಿಹೋಗೋದು ಮಾಡ್ತಿದ್ದಾರೆ ರಾಹುಲ್ ಗಾಂಧಿ ಎಂದು ತಿವಿದಿದ್ದಾರೆ.
ಪ್ರಶಾಂತ್ ಕಿಶೋರ್ ಮ್ಯಾಜಿಕ್ ಢಮಾರ್ – ಮಹಾಘಟಬಂಧನ್‌ಗೆ ಬಲವಾದ ಹೊಡೆತ
ʻಬಿಹಾರ ಅಂದ್ರೆ ನಿತೀಶ್ ಕುಮಾರ್ʼ – ಪಾಟ್ನಾದಲ್ಲಿ ಪೋಸ್ಟರ್ ವೈರಲ್
ಸಿಎಂ ನಿತೀಶ್ ಕುಮಾರ್ ಬೆಂಬಲಿಗರಿಂದ ಸಿಹಿ ಹಂಚಿ ಸಂಭ್ರಮ
ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್, ಸಹೋದರ ತೇಜ್ ಪ್ರತಾಪ್‌ಗೂ ಹಿನ್ನಡೆ
ಬಿಹಾರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದ್ದ ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ಗೆ ಹಿನ್ನಡೆಯಾಗಿದೆ. ರಾಘೋಪುರ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಮತ್ತೊಂದು ಕಡೆ ಸಹೋದರ ಜನಶಕ್ತಿ ಜನತಾದಳ ಅಭ್ಯರ್ಥಿ ತೇಜ್ ಪ್ರತಾಪ್ ಯಾದವ್ ಕೂಡ ಮಹುವಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಮೋದಿ ಸ್ಟ್ರೈಕ್‌ರೇಟ್‌ಗೆ ಎದುರಾಳಿಗಳು ಉಡೀಸ್; 197 ಕ್ಷೇತ್ರಗಳಲ್ಲಿ NDA ಮುನ್ನಡೆ
ಪ್ರಧಾನಿ ನರೇಂದ್ರ ಮೋದಿ ಅವರ ಸ್ಟ್ರೈಕ್‌ರೇಟ್‌ಗೆ ಎದುರಾಳಿಗಳು ಉಡೀಸ್ ಆಗಿದ್ದಾರೆ. ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ 115 ಕ್ಷೇತ್ರಗಳ ಪೈಕಿ 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಹೌದು. 243 ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು. ಈ ಪೈಕಿ 14 ರ‍್ಯಾಲಿ, 1 ರೋಡ್ ಶೋ ನಡೆಸಿದ್ದ ಮೋದಿ 115 ಕ್ಷೇತ್ರಗಳನ್ನ ಗುರಿಯಾಗಿಸಿ ಬಿರುಸಿನ ಪ್ರಚಾರ ನಡೆಸಿದ್ದರು. ಈ ಪೈಕಿ 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಒಟ್ಟಾರೆ 11 ಗಂಟೆ ಟ್ರೆಂಡ್ ವೇಳೆಗೆ ಎನ್‌ಡಿಎ 190+ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ 43, ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಜನರು ಕೊಟ್ಟ ತೀರ್ಪು ಒಪ್ಪಬೇಕು: ಸಿದ್ದರಾಮಯ್ಯ
ಬಿಹಾರ ಚುನಾವಣಾ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ತೀರ್ಪು ಒಪ್ಪಿಕೊಳ್ಳಬೇಕು. ಯಾಕೆ ಹಿನ್ನಡೆ ಆಗಿದೆ, ಯಾರು ವೋಟ್ ಹಾಕಿಲ್ಲ ಅಂತ ಗೊತ್ತಿಲ್ಲ. NDA ಯಾಕೆ ಇಷ್ಟು ದೊಡ್ಡ ಬಹುಮತ ಬರ್ತಿದೆ ಗೊತ್ತಿಲ್ಲ. ಮಾಹಿತಿ ಪಡೆದು ಮಾತಾಡುತ್ತೇನೆ ಎಂದರು.

Bihar Election Result 2025: ರಾಹುಲ್ ಮತಾಧಿಕಾರ ಯಾತ್ರೆ ಫ್ಲಾಪ್..!
Bihar Election Results 2025 – ನಿಜವಾಯ್ತಾ ಚಾಣಕ್ಯ ಅಮಿತ್ ಶಾ ಭವಿಷ್ಯ?
ಬಿಹಾರ ಚುನಾವಣಾ ಫಲಿತಾಂಶ ಇಂದು ಹೊರಬೀಳಲು ಕ್ಷಣಗಣನೆ ಬಾಕಿಯಿದೆ. 243 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ 195 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎದುರಾಳಿ ಮಹಾಘಟಬಂಧನ್ 45 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಸಾಧಿಸಿದ್ದು, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿ ಚುನಾವಣೆಗೂ ಮುನ್ನವೇ ಅಮಿತ್ ಶಾ ನುಡಿದಿದ್ದ ಭವಿಷ್ಯ ನಿಜವಾಗುತ್ತಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಹೌದು. ಚುನಾವಣೆಗೂ ಮುನ್ನವೇ ಸುದ್ದಿವಾಹಿನಿಯ ಕಾನ್‌ಕ್ಲೈವ್‌ವೊಂದರಲ್ಲಿ ಮಾತನಾಡಿದ್ದ ಅಮಿತ್ ಶಾ, ಎನ್‌ಡಿಎ ಈ ಬಾರಿ 160+ ಸ್ಥಾನಗಳಲ್ಲಿ ಗೆಲುವು ಸಾಧಿಸಿ 3/2 ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ ಎಂದು ಹೇಳಿದ್ದರು. ಅದರಂತೆ ಈಗಾಗಲೇ ಎನ್‌ಡಿಎ 190+ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
Bihar Election Results 2025: ಎನ್‌ಡಿಎಗೆ ಮುನ್ನಡೆ
ಮೋದಿ, ನಿತೀಶ್ ಪ್ರಭಾವದಿಂದ ಎನ್‌ಡಿಎಗೆ ಪೂರ್ಣ ಬಹುಮತ: ಸಂಸದ ಮನನ್ ಮಿಶ್ರಾ
ಎನ್‌ಡಿಎ ಈ ಬಾರಿ ಬಿಹಾರದಲ್ಲಿ ಪೂರ್ಣ ಬಹುಮತದೊಂದಿಗೆ ತನ್ನ ಸರ್ಕಾರ ರಚನೆ ಮಾಡಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಅವರ ಪ್ರಭಾವದಿಂದ ಸಾಧ್ಯವಾಗಿದೆ. ಇಲ್ಲಿ ಯಾವುದೇ ಬೆದರಿಕೆಗಳು ಕೆಲಸ ಮಾಡುವುದಿಲ್ಲ ಅನ್ನೋದು ಇಂಡಿ ಒಕ್ಕೂಟಕ್ಕೆ ಗೊತ್ತಾಗಿದೆ. ಅದಕ್ಕಾಗಿ ಅವರೆಲ್ಲ ಈಗ ಮನೆಯಲ್ಲಿ ಅಡಗಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ಮನನ್ ಮಿಶ್ರಾ ಗುಡುಗಿದ್ದಾರೆ.
180+ ಕ್ಷೇತ್ರಗಳಲ್ಲಿ ಎನ್‌ಡಿಎ ಭರ್ಜರಿ ಮುನ್ನಡೆ
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ 183 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದ್ದರೆ, ಮಹಾಘಟಬಂಧನ್ 56, ಇತರರು ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಶೂನ್ಯಕ್ಕೆ ಇಳಿದಿದೆ.
ತೇಜಸ್ವಿ ಯಾದವ್ ಮುನ್ನಡೆ
893 ಮತಗಳಿಂದ ರಾಘೋಪುರ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ಮುನ್ನಡೆ
ಬಿಹಾರ ಗೆದ್ದಾಯ್ತು, ಮುಂದೆ ಬಂಗಾಳ: ಗಿರಿರಾಜ್ ಸಿಂಗ್
“ಬಿಹಾರದಲ್ಲಿ ಎನ್‌ಡಿಎ ಅಧಿಕಾರ ಸ್ಥಾಪಿಸಲಿದೆ. ಬಿಹಾರದ ಯುವಕರು ಬುದ್ಧಿವಂತರು.. ಇದು ಅಭಿವೃದ್ಧಿಯ ಗೆಲುವು. ನಾವು ಬಿಹಾರವನ್ನು ಗೆದ್ದಿದ್ದೇವೆ. ಮುಂದೆ ಬಂಗಾಳವನ್ನು ಗೆಲ್ಲುತ್ತೇವೆ”- ಕೇಂದ್ರ ಸಚಿವ ಗಿರಿರಾಜ್ ಸಿಂಗ್
160+ ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ
ಬಿಜೆಪಿ 69, ಜೆಡಿಯು 76, ಆರ್‌ಜೆಡಿ 58, ಕಾಂಗ್ರೆಸ್ 16, ಜೆಎಸ್‌ಪಿ 02, ಇತರರು 04 ಕ್ಷೇತ್ರಗಳಲ್ಲಿ ಮುನ್ನಡೆ
ಜನ ಸುರಾಜ್, ಎಐಎಂಐಎಂ ವಿರುದ್ಧ ಕಾಂಗ್ರೆಸ್ ಕಿಡಿ
ಜನ ಸುರಾಜ್ ಮತ್ತು ಎಐಎಂಐಎಂ ಹೆಚ್ಚಾಗಿ ಬಿಜೆಪಿಯ ಬಿ & ಸಿ ತಂಡವಾಗಿ ಕೆಲಸ ಮಾಡುತ್ತಿವೆ: ಕಾಂಗ್ರೆಸ್ ವಕ್ತಾರ ಅಶ್ವನಿ ಕುಮಾರ್ ಮಿಶ್ರಾ
ಮಹಾಘಟ್‌ಬಂಧನ್‌ಗೆ ಹಿನ್ನಡೆ
ಎನ್‌ಡಿಎ 133, ಎಂಜಿಬಿ 85, ಜೆಎಸ್‌ಪಿ 4, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ
ಎನ್‌ಡಿಎಗೆ ಭಾರೀ ಮುನ್ನಡೆ
ಬಿಜೆಪಿ: 52, ಜೆಡಿ(ಯು): 51, ಎಲ್‌ಜೆಪಿ(ಆರ್‌ವಿ): 08, ಹೆಚ್‌ಎಎಂ (ಎಸ್): 04
ಆರ್‌ಜೆಡಿ: 51, ಕಾಂಗ್ರೆಸ್: 13, ಎಡ: 10, ವಿಐಪಿ 03
ಮತ್ತೊಮ್ಮೆ ಎನ್‌ಡಿಎ ಅಧಿಕಾರಕ್ಕೆ : ದಿಲೀಪ್ ಜೈಸ್ವಾಲ್
ಮತ್ತೊಮ್ಮೆ ಭಾರೀ ಜನಬಲದೊಂದಿಗೆ ಎನ್‌ಡಿಎ ಅಧಿಕಾರಕ್ಕೆ ಏರಲಿದೆ. ಮೊದಲ ಮತ್ತು ಎರಡನೇ ಹಂತದ ಚುನಾವಣೆಯ ಸಮಯದಲ್ಲಿ ಜನರು ಮತ್ತು ಬೆಂಬಲಿಗರ ಮುಖಭಾವಗಳಿಂದ ಅವರು ಮತ್ತೊಮ್ಮೆ ಎನ್‌ಡಿಎಗೆ ಮತ ಹಾಕುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು. ಇದು ದೇಶದ ಜನಾದೇಶವನ್ನು ಸೂಚಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ.
ಎನ್‌ಡಿಎ ಸರ್ಕಾರ ಖಚಿತ: ಬಿಜೆಪಿಯ ಶಹನವಾಜ್ ಹುಸೇನ್
ನಾವು ಅಧಿಕಾರಕ್ಕೆ ಬರುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿದೆ – ಎನ್‌ಡಿಎ ಸರ್ಕಾರ ಖಚಿತ. ಸೂರ್ಯೋದಯ ಖಚಿತವಾದಂತೆಯೇ ಎನ್‌ಡಿಎ ಗೆಲುವು ಕೂಡ ಖಚಿತ. ಭಾರಿ ಮತದಾನ ನಡೆದಿದೆ ಮತ್ತು ಅದು ಮತ್ತೆ ಸರ್ಕಾರ ರಚಿಸುವ ಪರವಾಗಿದೆ. ಬಿಹಾರದ ಜನರು ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಜಿ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಆ ನಂಬಿಕೆ ಫಲಿತಾಂಶಗಳಲ್ಲಿ ಪ್ರತಿಫಲಿಸುತ್ತದೆ.
ಎನ್‌ಡಿಎಗೆ ಮುನ್ನಡೆ
ಬಿಜೆಪಿ 44, ಜೆಡಿಯು 29, ಆರ್‌ಜೆಡಿ 43, ಕಾಂಗ್ರೆಸ್ 8, ಜೆಎಸ್‌ಪಿ 4, ಇತರರು 9 ಕ್ಷೇತ್ರಗಳಲ್ಲಿ ಮುನ್ನಡೆ
ಮೈಥಿಲಿ ಠಾಕೂರ್‌ಗೆ ಮುನ್ನಡೆ
ಮೊದಲ ಬಾರಿಗೆ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಜನಪ್ರಿಯ ಗಾಯಕಿ ಮೈಥಿಲಿ ಠಾಕೂರ್ ಅಲಿನಗರ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ
66 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ
ಎನ್‌ಡಿಎ 66, ಎಂಜಿಬಿ 40, ಜೆಎಸ್‌ಪಿ 3, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ
ಎನ್‌ಡಿಎಗೆ ಆರಂಭಿಕ ಮುನ್ನಡೆ
ಅಂಚೆ ಮತ ಎಣಿಕೆಯಲ್ಲಿ ಎನ್‌ಡಿಎಗೆ 47, ಮಹಾಘಟಬಂಧನ್ 26, ಜನಸೂರಜ್ 3, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ
ಯಾರು ಮುನ್ನಡೆ?
ಬಿಜೆಪಿ 9, ಜೆಡಿಯು 2, ಆರ್‌ಜೆಡಿ 7, ಕಾಂಗ್ರೆಸ್ 1, ಜೆಎಸ್‌ಪಿ 2 ಇತರರು 1 ಕ್ಷೇತ್ರಲ್ಲಿ ಮುನ್ನಡೆ
ಎನ್‌ಡಿಎಗೆ ಮುನ್ನಡೆ
ಅಂಚೆ ಮತ ಎಣಿಕೆಯಲ್ಲಿ ಎನ್‌ಡಿಎಗೆ ಮುನ್ನಡೆ. 4 ಕ್ಷೇತ್ರದಲ್ಲಿ ಎನ್‌ಡಿಎ, 1 ರಲ್ಲಿ ಮಹಾಘಟಬಂಧನ್, 1 ಕ್ಷೇತ್ರದಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ.
ನಾವು ಗೆಲ್ಲುತ್ತೇವೆ: ತೇಜಸ್ವಿ ಯಾದವ್
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಹಾಘಟಬಂಧನ್ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ನಾವು ಗೆಲ್ಲುತ್ತೇವೆ. ಎಲ್ಲರಿಗೂ ಧನ್ಯವಾದಗಳು. ಬದಲಾವಣೆ ಬರಲಿದೆ. ನಾವು ಸರ್ಕಾರ ರಚಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಅಂಚೆ ಮತ ಎಣಿಕೆ ಆರಂಭ
ಸ್ಟ್ರಾಂಗ್ ರೂಂ ತೆರೆದು ಅಂಚೆ ಮತ ಎಣಿಕೆ ಆರಂಭವಾಗಿದೆ. ಬಳಿಕ ಇವಿಎಂ ಮತಗಳ ಎಣಿಕೆ ನಡೆಯಲಿದೆ
2020 ರ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
ಎನ್‌ಡಿಎ 122 ಕ್ಷೇತ್ರಗಳನ್ನು ಗೆದ್ದಿದ್ದರೆ, ಮಹಾಘಟಬಂಧನ್ 114 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. 7 ಕ್ಷೇತ್ರಗಳಲ್ಲಿ ಇತರರು ಜಯ ಸಾಧಿಸಿದ್ದರು.
ಶೇ.67.13ರಷ್ಟು ಮತದಾನ
ನ.6 ಮತ್ತು ನ.11 ರಂದು ಎರಡು ಹಂತದಲ್ಲಿ ಒಟ್ಟು 243 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು ಶೇ.67.13 ರಷ್ಟು ಮತದಾನ ನಡೆದಿತ್ತು
ನಿತೀಶ್‌ಗೆ ಒಲಿಯುತ್ತಾ ಸಿಎಂ ಪಟ್ಟ?
ಎನ್‌ಡಿಎಗೆ ಮುಖ್ಯಮಂತ್ರಿ ಯಾರೆಂಬ ಸ್ಪಷ್ಟನೆ ಇಲ್ಲ. 19 ವರ್ಷ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಅಧಿಕಾರದಲ್ಲಿದ್ದು ವಯಸ್ಸು ಮತ್ತು ಆರೋಗ್ಯದ ಕಾರಣದಿಂದಾಗಿ ಗೊಂದಲವಿದೆ. ಮುಖ್ಯಮಂತ್ರಿ ಯಾರಾಗಬೇಕೆಂಬುದು ಗೆದ್ದ ಬಳಿಕ ತೀರ್ಮಾನವಾಗುವ ಸಾಧ್ಯತೆಯಿದೆ. ನಿತೀಶ್ ಅವರ ಆಸೆ ಈಡೇರುವುದು ಅಷ್ಟು ಸುಲಭವಿಲ್ಲ ಎಂಬ ಚರ್ಚೆ ನಡೆಯುತ್ತಿದೆ.
ಬಿಹಾರ ಬ್ಯಾಟಲ್‌ನಲ್ಲಿ ಜಾತಿ ಲೆಕ್ಕಾಚಾರ
ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ನಡೆಸಿರುವ ಬಿಹಾರ
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಒಬಿಸಿ, ಇಬಿಸಿ
ಇತರ ಹಿಂದುಳಿದ ವರ್ಗಗಳು (ಒಬಿಸಿ) ಶೇ. 27% ರಷ್ಟು ಇದ್ದಾರೆ
ಅತಿ ಹಿಂದುಳಿದ ವರ್ಗಗಳು (ಇಬಿಸಿ) ಶೇ.36% ರಷ್ಟು ಇದ್ದಾರೆ
ಅತಿ ಹಿಂದುಳಿದ ವರ್ಗಗಳಿಗೆ ಸೇರಿದ ಮತದಾರರರೇ ನಿರ್ಣಾಯಕ ಪಾತ್ರ
120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿಶಾದ, ತೆಲೀ, ಲೋಹಾರ್, ಕುಮ್ಹಾರ್ ಜಾತಿ ನಿರ್ಣಾಯಕ
19% ಇರುವ ದಲಿತ ಸಮುದಾಯದ ಮತಗಳ ಮೇಲೆ ಮೈತ್ರಿಕೂಟಗಳ ಕಣ್ಣು
ಬಿಹಾರ ರಣಾಂಗಣದ ಹೈಲೈಟ್ಸ್ ಏನು?
ಗ್ಯಾರಂಟಿಗಳ ಮಹಾಪೂರ, ಮಹಿಳೆಯರೇ ಟಾರ್ಗೆಟ್
ಹೊಸ ಯೋಜನೆಗಳ ಘೋಷಣೆಗಳ ಪ್ರಭಾವ ಹೆಚ್ಚಿತ್ತು
ಯಾದವೀ ಕಲಹ: ಲಾಲೂ ಕುಟುಂಬದೊಳಗಿನ ಕಿತ್ತಾಟ
ಲಾಲು ಪುತ್ರ ಸ್ಥಾಪಿಸಿದ ಪಕ್ಷ ಜನಶಕ್ತಿ ಜನತಾದಳ ಪಾತ್ರ
ರಣಕಣದಲ್ಲಿ ಮೋದಿ ತಾಯಿ ಎಮೋಶನಲ್ ಅಸ್ತ್ರ ಪ್ರಯೋಗ
ಪ್ರಶಾಂತ್ ಕಿಶೋರ್ ನೇತೃತ್ವದ ಜನಸುರಾಜ್ ಪಕ್ಷದ ಇಂಪ್ಯಾಕ್ಟ್
ಮತಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಬಗ್ಗೆ ದೊಡ್ಡ ಹೋರಾಟ
47% ರಷ್ಟು ಮಹಿಳಾ ಮತದಾರರ ವರ ಯಾರಿಗೆ ಎಂಬ ಕುತೂಹಲ
ಸಮೀಕ್ಷೆಯಲ್ಲಿ ಎನ್‌ಡಿಎಗೆ ಬಹುಪರಾಕ್
ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಎನ್‌ಡಿಎ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದಿವೆ. ಚುನಾವಣೆಗೂ ಮುನ್ನವೇ ಮಹಿಳೆಯರ ಖಾತೆಗೆ 10 ಸಾವಿರ ರೂ. ವರ್ಗಾವಣೆ ಮಾಡಲಾಗಿತ್ತು. ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ ಪರಿಣಾಮ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಬಿಹಾರ ಯಾರಿಗೆ ಹಾರ?
ಬಿಹಾರದ ಗೆಲುವಿನ ಹಾರ ಯಾರ ಕೊರಳಿಗೆ? ಆಡಳಿತ ವಿರೋಧಿ ಅಲೆ ಎಂಬುದನ್ನ ಅಳಿಸಿ ಹಾಕ್ತಾರಾ ಅಥವಾ ಉಳಿಸಿ ಬಿಡ್ತಾರಾ? ಮೋದಿ-ನಿತೀಶ್ ಜೋಡಿಗೆ ಜೈಕಾರವೋ? ತೇಜಸ್ವಿ-ರಾಹುಲ್ ಕಮಾಲ್‌ಗೆ ಮಾಲೆಯೋ? ಬಿಹಾರ ಚುನಾವಣೆಯ ಫಲಿತಾಂಶದತ್ತಇಡೀ ದೇಶದ ಚಿತ್ತ ಇದೆ. ಮುಂದಿನ ದೇಶದ ರಾಜಕಾರಣದ ದಿಕ್ಕು ಬದಲಿಸುವ ರಿಸಲ್ಟ್ ಎನ್ನಲಾಗುತ್ತಿದ್ದು ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.

