ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನದ (Pakistan) ಎಫ್-16 ಮತ್ತು ಜೆಎಫ್-17 ಯುದ್ಧ ವಿಮಾನಗಳನ್ನು ನಾಶ ಮಾಡಲಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ (AP Singh) ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ (Pahalgam Attack) ಪ್ರತಿಯಾಗಿ ಭಾರತ ನಡೆಸಿದ ಕಾರ್ಯಾಚರಣೆಯ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, F-16 ಮತ್ತು JF-17 ವರ್ಗದ ನಡುವಿನ 5 ಪಾಕಿಸ್ತಾನಿ ಹೈಟೆಕ್ ಯುದ್ಧವಿಮಾನಗಳನ್ನು ಹೊಡೆದು ಹಾಕಿದ್ದೇವೆ ಎಂದಿದ್ದಾರೆ.
#WATCH | Delhi: On Pakistan’s claim of downing IAF planes in Op Sindoor, Indian Air Force Chief Air Chief Marshal AP Singh says, “…their (Pakistan) narrative is ‘Manohar Kahaniyan’. Let them be happy, after all, they also have to show something to their audience to save their… pic.twitter.com/qNc49KL5xR
— ANI (@ANI) October 3, 2025
4 ಸ್ಥಳಗಳಲ್ಲಿದ್ದ ರಾಡಾರ್‌ಗಳು, 2 ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, 2 ರನ್‌ವೇಗಳು, 3 ಹ್ಯಾಂಗರ್‌ಗಳು ನಾಶಮಾಡಿದ್ದೇವೆ. ಈ ಹ್ಯಾಂಗರ್‌ನಲ್ಲಿದ್ದ ಎಫ್-16 ಮತ್ತು ಜೆಎಫ್-17 ವಿಮಾನಗಳು ನಾಶವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಆಧುನಿಕ ರಾವಣ, ಶೀಘ್ರವೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ: ಕಾಂಗ್ರೆಸ್ ನಾಯಕ
#WATCH | Delhi: Responding to ANI’s question on the losses suffered by Pakistan during Operation Sindoor, Indian Air Force Chief Air Chief Marshal AP Singh says, “…As far as Pakistan’s losses are concerned…we have struck a large number of their airfields and we struck a large… pic.twitter.com/qhf7yl27LO
— ANI (@ANI) October 3, 2025
ಭಾರತಕ್ಕೆ ರಫೇಲ್ ಅಥವಾ ಸು-57 ವಿಮಾನಗಳು ಬೇಕಾಗಿವೆ ಮತ್ತು ಸರ್ಕಾರವು ಉತ್ತಮವಾದದ್ದನ್ನು ಖರೀದಿಸುತ್ತದೆ. ನಮಗೆ ಹೆಚ್ಚಿನ ಎಸ್-400ಗಳು ಬೇಕು. ಆದರೆ ಎಷ್ಟು ಎಂದು ನಾವು ಹೇಳುವುದಿಲ್ಲ ಎಂದು ಹೇಳಿದರು.
ಪಾಕಿಸ್ತಾನದ ಉಗ್ರರು ಬೇರೆ ಕಡೆ ಸ್ಥಳಾಂತರವಾಗುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ದೊಡ್ಡ ದೊಡ್ಡ ಶಿಬಿರಗಳಿಂದ ಈಗ ಸಣ್ಣ ಸಣ್ಣ ಶಿಬಿರಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಇದರಿಂದಾಗಿ ಅವರನ್ನು ಗುರಿಯಾಗಿಸುವುದು ಕಷ್ಟವಾಗುತ್ತದೆ. ಆದರೆ ಅಗತ್ಯವಿದ್ದಾಗ ಆ ನೆಲೆಗಳ ಮೇಲೆ ಭಾರತ ದಾಳಿ ಮಾಡಬಹುದು ಎಂದರು.