Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನೋವಿನಲ್ಲೂ ಫಿಫ್ಟಿ ಹೊಡೆದ ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ನೋವಿನಲ್ಲೂ ಫಿಫ್ಟಿ ಹೊಡೆದ ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌

Cricket

ನೋವಿನಲ್ಲೂ ಫಿಫ್ಟಿ ಹೊಡೆದ ಪಂತ್‌ – ಏಕದಿನದಂತೆ ಬ್ಯಾಟ್‌ ಬೀಸಿದ ಇಂಗ್ಲೆಂಡ್‌

Public TV
Last updated: July 24, 2025 11:37 pm
Public TV
Share
2 Min Read
Rishabh Pant 1
SHARE

ಮ್ಯಾಂಚೆಸ್ಟರ್‌: ಭಾರತದ (Team India) ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡಿದರೆ ಇಂಗ್ಲೆಂಡ್‌ (England) ಬ್ಯಾಟರ್‌ಗಳು ಏಕದಿನದಂತೆ ಬ್ಯಾಟ್‌ ಬೀಸಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 46 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 225 ರನ್‌ಗಳಿಸಿದ್ದು 133 ರನ್‌ ಹಿನ್ನಡೆಯಲ್ಲಿದೆ.

ಇನ್ನಿಂಗ್ಸ್‌ ಆರಂಭಿಸಿದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 195 ಎಸೆತಗಳಲ್ಲಿ 166 ರನ್‌ ಜೊತೆಯಾಟವಾಡಿ ಭದ್ರವಾದ ಅಡಿಪಾಯ ಹಾಕಿದರು. ಜ್ಯಾಕ್ ಕ್ರಾಲಿ 84 ರನ್‌(113 ಎಸೆತ, 13 ಬೌಂಡರಿ, 1 ಸಿಕ್ಸ್‌) ಹೊಡೆದರೆ ಬೆನ್ ಡಕೆಟ್ 94 ರನ್‌(100 ಎಸೆತ, 13 ಬೌಂಡರಿ) ಹೊಡೆದು ಔಟಾದರು.

Here comes Rishabh Pant…

A classy reception from the Emirates Old Trafford crowd 👏 pic.twitter.com/vBwSuKdFcW

— England Cricket (@englandcricket) July 24, 2025

ಕ್ರೀಸ್‌ನಲ್ಲಿ ಓಲಿ ಪೋಪ್ 20 ರನ್‌, ಜೋ ರೂಟ್‌ 11 ರನ್‌ ಗಳಿಸಿದ್ದು ಮೂರನೇ ದಿನ ಆಟ ಆಡಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಇಂದು ಟೆಸ್ಟ್‌ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಅನ್ಶುಲ್ ಕಾಂಬೋಜ್ ತಲಾ ಒಂದು ವಿಕೆಟ್‌ ಪಡೆದರು. ಇದನ್ನೂ ಓದಿ: WWE ಲೆಜೆಂಡ್‌, ಕುಸ್ತಿಪಟು ಹಲ್ಕ್ ಹೊಗನ್ ನಿಧನ

ಮೊದಲ ದಿನ 4 ವಿಕೆಟ್‌ ಕಳೆದುಕೊಂಡು 264 ರನ್‌ ಗಳಿಸಿದ್ದ ಭಾರತ ಇಂದು ಆ ಮೊತ್ತಕ್ಕೆ 6 ವಿಕೆಟ್‌ಗಳ ಸಹಾಯದಿಂದ 94 ರನ್‌ ಸೇರಿಸಿತು. ಎರಡನೇ ದಿನ ಉತ್ತಮ ಜೊತೆಯಾಟ ಬಾರದ ಕಾರಣ ಭಾರತ ಅಂತಿಮವಾಗಿ 114.1 ಓವರ್‌ಗಳಲ್ಲಿ 358 ರನ್‌ಗಳಿಗೆ ಆಲೌಟ್‌ ಆಯ್ತು.  ಇದನ್ನೂ ಓದಿ: ಏಷ್ಯಾಕಪ್ ಆಯೋಜನೆಗೆ ಬಿಸಿಸಿಐ ಒಪ್ಪಿಗೆ – ಸೆಪ್ಟೆಂಬರ್‌ನಲ್ಲಿ ಭಾರತ, ಪಾಕ್ ಮುಖಾಮುಖಿ?

 

An imperious shot from Zak to get to his 50 🤌

🤝 @IGcom pic.twitter.com/rlQZleKA7D

— England Cricket (@englandcricket) July 24, 2025

ಜಡೇಜಾ ನಿನ್ನೆಯ ಮೊತ್ತಕ್ಕೆ 1 ರನ್‌ ಸೇರಿಸಿ 20 ರನ್‌ಗಳಿಗೆ ಔಟಾದರೆ ಶಾರ್ದೂಲ್‌ ಠಾಕೂರ್‌ 41 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ವಾಷಿಂಗ್ಟನ್‌ ಸುಂದರ್‌ 27 ರನ್‌ಗಳಿಸಿದರು. 37 ರನ್‌ ಗಳಿಸಿದ್ದಾಗ ಗಂಭೀರವಾಗಿ ಗಾಯಗೊಂಡು ಮೈದಾನ ತೊರೆದಿದ್ದ ರಿಷಭ್‌ ಪಂತ್‌ (Rishabh Pant) ಇಂದು 54 ರನ್‌(74 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ 9ನೇಯವರಾಗಿ ಔಟಾದರು.

ಇಂಗ್ಲೆಂಡ್‌ ಪರ ಬೆನ್‌ ಸ್ಟೋಕ್ಸ್‌ 5 ವಿಕೆಟ್‌ ಪಡೆದರೆ ಜೋಫ್ರಾ ಅರ್ಚರ್‌ 3 ವಿಕೆಟ್‌, ಕ್ರಿಸ್‌ ವೋಕ್ಸ್‌ ಮತ್ತು ಲಿಯಾಮ್ ಡಾಸನ್ ತಲಾ 1 ವಿಕೆಟ್‌ ಪಡೆದರು. ಇದನ್ನೂ ಓದಿ:  ಗಾಯಗೊಂಡು ಕಣ್ಣೀರು ಹಾಕುತ್ತಾ ಹೊರ ಹೋದ ಪಂತ್‌

 

TAGGED:englandRishabh PantTeam indiaಇಂಗ್ಲೆಂಡ್ಟೀಮ್ ಇಂಡಿಯಾರಿಷಭ್ ಪಂತ್
Share This Article
Facebook Whatsapp Whatsapp Telegram

Cinema news

Mia Khalifa
Viral | 71 ವರ್ಷದ ʻಮಿಸ್ಟರ್ ಬೀನ್ʼ ಜೊತೆ 32 ರ ಮಿಯಾ ಖಲೀಫಾ ಡೇಟಿಂಗ್‌?
Cinema Latest World
Dhurandhar 2 teaser
Dhurandhar 2 Teaser; ಹಮ್ಜಾ ಆಗಿ ರಣವೀರ್ ಸಿಂಗ್ ಮತ್ತೆ ಮಾಸ್ ಎಂಟ್ರಿ
Bollywood Cinema Latest Top Stories
dhanush maari sai pallavi
8 ವರ್ಷಗಳ ಬಳಿಕ ಒಂದಾದ ರೌಡಿಬೇಬಿ
Cinema Latest South cinema Top Stories
Ram Charan Mob At Hospital
ರಾಮ್ ಚರಣ್ ತಳ್ಳಾಟ ನೂಕಾಟ..ಆಸ್ಪತ್ರೆ ಅನ್ನೋದನ್ನೂ ನೋಡದ ಜನ
Cinema Latest Top Stories

You Might Also Like

Ghaziabad
Crime

ಆನ್‌ಲೈನ್ ಗೇಮ್‌ ಆಡ್ಬೇಡಿ – ಪೋಷಕರು ಬೈದಿದ್ದಕ್ಕೆ 16, 14, 12 ವರ್ಷದ ಸಹೋದರಿಯರು ಅಪಾರ್ಟ್‌ಮೆಂಟ್‌ನಿಂದ ಹಾರಿ ಆತ್ಮಹತ್ಯೆ

Public TV
By Public TV
33 minutes ago
Ration Card
Latest

ಉದ್ಯಮಿಗಳು, ಕಾರು ಮಾಲೀಕರ ಬಳಿಯೂ ಬಿಪಿಎಲ್‌ ಕಾರ್ಡ್‌ – 2 ಲಕ್ಷಕ್ಕೂ ಅಧಿಕ ಅನರ್ಹರಿಗೆ ನೋಟಿಸ್‌!

Public TV
By Public TV
1 hour ago
sister and brother
Bengaluru City

ಪೋಷಕರು ಜೋರು ಮಾಡಿದ್ದಕ್ಕೆ ಸಿಟ್ಟಾಗಿ ಮನೆ ತೊರೆದ ಅಕ್ಕ-ತಮ್ಮ!

Public TV
By Public TV
2 hours ago
Mother son attacked for uploading photo of saffron flag Gurmatkal Yadagiri
Latest

ಕೇಸರಿ ಧ್ವಜದ ಪೋಟೋ ಅಪ್ಲೋಡ್‌ ಮಾಡಿದ್ದಕ್ಕೆ ತಾಯಿ, ಮಗನ ಮೇಲೆ ಹಲ್ಲೆ

Public TV
By Public TV
2 hours ago
R Ashoka 2
Bengaluru City

ಸಿಎಂ ಕುರ್ಚಿ ಉಳಿಯಬೇಕಿದೆ, ಅದಕ್ಕೆ AICC ಗೆ ಸಾವಿರ ಸಾವಿರ ಕೋಟಿ ಹೋಗ್ತಿದೆ; ಆರ್‌. ಅಶೋಕ್‌

Public TV
By Public TV
3 hours ago
Government Hospital 3
Bagalkot

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ – ರಾಜ್ಯದಲ್ಲಿ ಶುರುವಾಗುತ್ತಾ ಹೆಲ್ತ್ ಎಮೆರ್ಜೆನ್ಸಿ?

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?