ಡಾ.ರಾಜ್ಕುಮಾರ್ ಹಾಗೂ ತಲೈವಾ ರಜನಿಕಾಂತ್ (Rajinikanth) ಅವರ ನಡುವೆ ಗಾಢವಾದ ಗೆಳೆತನವಿತ್ತು. ರಜನಿಕಾಂತ್ ಅವರಿಗೆ ಈಗಲೂ ರಾಜ್ಕುಮಾರ್ ಕುಟುಂಬದ ಜೊತೆಗಿನ ನಂಟು, ಕುಟುಂಬದ ಮೇಲಿನ ಪ್ರೀತಿ, ಗೌರವ ಚೆನ್ನಾಗಿಯೇ ಇದೆ. ಇದೀಗ ರಾಜ್ಕುಮಾರ್ ಮೊಮ್ಮಗಳು ಧನ್ಯಾ ರಾಮ್ಕುಮಾರ್ (Dhanya Ramkumar) ತಾಯಿ ಪೂರ್ಣಿಮಾ ಅವರೊಂದಿಗೆ ರಜನಿಕಾಂತ್ರನ್ನ ಭೇಟಿಯಾಗಿದ್ದಾರೆ. ಈ ಫೋಟೋಗಳನ್ನ ಇನ್ಸ್ಟಾಗ್ರಾಮ್ನಲ್ಲಿ ಧನ್ಯಾ ಶೇರ್ ಮಾಡಿದ್ದಾರೆ.
ಡಾ.ರಾಜ್ಕುಮಾರ್ ಪುತ್ರಿ ಪೂರ್ಣಿಮಾ ಕುರಿತು ರಜನಿಕಾಂತ್ ಅವರಿಗೆ ಪರಿಚಯ ಹಿಂದಿನಿಂದಲೂ ಇರುತ್ತೆ. ಆದರೆ ಧನ್ಯ ಈಗಿನ ಜನರೇಶನ್ ಆಗಿರೋದ್ರಿಂದ ಕಾಂಟ್ಯಾಕ್ಟ್ ಕಡಿಮೆ ಇರಬಹುದು. ಆದರೀಗ ದಿಢೀರ್ ಎಂದು ರಜನಿಕಾಂತ್ ಜೊತೆ ಧನ್ಯಾ ಪೋಸ್ಟ್ ಮಾಡಿರುವ ಫೋಟೋವನ್ನ ಥಟ್ ಅಂತ ನೋಡಿದ್ರೆ ಜೊತೆಯಲ್ಲಿ ಸಿನಿಮಾ ಮಾಡ್ತಿದ್ದಾರೆ ಅನ್ನೋ ಅನುಮಾನ ಬರುತ್ತೆ. ಆದ್ರೆ ಇದು ಚಿತ್ರಕ್ಕಾಗಿ ಆಗಿರುವ ಭೇಟಿಯಲ್ಲ. ಜಸ್ಟ್ ಕ್ಯಾಶುವಲ್ ಭೇಟಿ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ
ಅಮ್ಮನ ಜೊತೆ ಧನ್ಯಾ ಮೈಸೂರಿಗೆ ಹೋಗಿದ್ದಾರೆ ಅಲ್ಲಿ ರಜನಿಕಾಂತ್ ಅವರ `ಜೈಲರ್-2′ ಚಿತ್ರೀಕರಣ ನಡೆಯುತ್ತಿರುವುದು ಇವರಿಗೆ ತಿಳಿದಿತ್ತು. ಬಳಿಕ ಭೇಟಿಯಾಗಿ ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಇದನ್ನೂ ಓದಿ: Ahmedabad Plane Crash | ಬ್ಲ್ಯಾಕ್ ಬಾಕ್ಸ್ ಡೌನ್ಲೋಡ್ ಪ್ರಕ್ರಿಯೆ ಪೂರ್ಣ, ವಿಶ್ಲೇಷಣೆ ಶುರು – ವಿಮಾನಯಾನ ಸಚಿವಾಲಯ
ಮೈಸೂರಲ್ಲಿ ಜೈಲರ್-2 ಚಿತ್ರೀಕರಣ ನಡೆಯುತ್ತಿತ್ತು. ಐದಾರು ದಿನ ಚಿತ್ರೀಕರಣವಾಗಿದೆ. ಈ ವೇಳೆ ರಜನಿಕಾಂತ್ ಮೈಸೂರಿನ ಹೋಟೇಲ್ನಲ್ಲೇ ತಂಗಿದ್ದಾರೆ. ಈ ವೇಳೆ ಶೂಟಿಂಗ್ ಸ್ಪಾಟ್ಗೆ ತೆರಳಿದ್ದ ಧನ್ಯ ಹಾಗೂ ಪೂರ್ಣಿಮಾ ರಾಮ್ಕುಮಾರ್ ರಜನಿಕಾಂತ್ರನ್ನ ಭೇಟಿಯಾಗಿದ್ದಾರೆ. ಆ ಫೋಟೋಗಳು ಈಗ ವೈರಲ್ ಆಗಿದೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಡಾಕಿಂಗ್ ಯಶಸ್ವಿ