ಬೆಂಗಳೂರು: ಕೆಲಸ ಸಿಗದಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣಾದ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ.
ಬಿಹಾರ (Bihar) ಮೂಲದ ರಾಹುಲ್ ಕುಮಾರ್ ಯಾದವ್ (22) ಮೃತ ಯುವಕ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ರಾಹುಲ್ ಕೆಲಸ ಸಿಗದೆ ವಾಪಸ್ ಊರಿಗೆ ಹೋಗಲು ನಿರ್ಧಾರ ಮಾಡಿದ್ದ. ಇದನ್ನೂ ಓದಿ: SSLC ಫೇಲ್ ಆದ್ರೂ ಶಾಲೆಗೆ ಹೋಗ್ಬೋದು – ರೂಲ್ಸ್ ಏನು?
ಇತ್ತ ಪೋಷಕರು ಊರಿಗೆ ಬರಲು ನಿರಾಕರಿಸಿದ ಹಿನ್ನೆಲೆ ಮನನೊಂದ ಯುವಕ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಳೆದ 15 ತಿಂಗಳಲ್ಲಿ ಅಯ್ಯರ್ ಮುಟ್ಟಿದ್ದೆಲ್ಲವೂ ಚಿನ್ನ – ಈಗ 6ನೇ ಟ್ರೋಫಿ ಗೆಲುವಿನ ಗುರಿ!