ಮೊದಲ ದಿನವೇ ನೂರು ಕೋಟಿ ಬಾಚಿದ ಬಾಹುಬಲಿ: ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ಉಳಿದ ಕಡೆ ಎಷ್ಟು?

Public TV
3 Min Read
baahubali collection

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ 2 ಎಲ್ಲ ಕಲೆಕ್ಷನ್ ದಾಖಲೆಯನ್ನು ಪುಡಿಮಾಡಿದೆ. ಶುಕ್ರವಾರ ಒಂದೇ ದಿನ ಭಾರತದಲ್ಲೇ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ ವರದಿ ಮಾಡಿದೆ.

ಭಾರತದಲ್ಲಿ 6,500 ಸ್ಕ್ರೀನ್, ವಿಶ್ವದಲ್ಲೆಡೆ ಸೇರಿ ಒಟ್ಟು 9 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಾಹುಬಲಿ ಪ್ರದರ್ಶನ ಕಾಣುತ್ತಿದ್ದು ಮೊದಲ ದಿನವೇ 100 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ.

ಹಿಂದಿಗೆ ಡಬ್ ಆಗಿರುವ ಬಾಹುಬಲಿ 35 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಬಾಲಿವುಡ್ ಫಿಲ್ಮ್ ಗಳನ್ನು ದಾಖಲೆಯನ್ನು ಬ್ರೇಕ್ ಮಾಡಿದೆ.

ಎಲ್ಲಿ ಎಷ್ಟು?
ಹಿಂದಿ – 35 ಕೋಟಿ ರೂ.
ನಿಜಾಮ್/ ಆಂಧ್ರ -45 ಕೋಟಿ ರೂ.
ತಮಿಳುನಾಡು – 14 ಕೋಟಿ ರೂ.
ಕರ್ನಾಟಕ – 10 ಕೋಟಿ ರೂ.
ಕೇರಳ – 4 ಕೋಟಿ ರೂ.
ಒಟ್ಟು – 108 ಕೋಟಿ. ರೂ.

ಇಲ್ಲಿ ಸಿಕ್ಕಿರುವ ಮಾಹಿತಿ ಪೂರ್ಣ ಮಾಹಿತಿ ಅಲ್ಲ. ಎಲ್ಲ ಲೆಕ್ಕವನ್ನು ಹಾಕಿದ್ರೆ ಮೊದಲ ದಿನವೇ ಅಂದಾಜು 120 ಕೋಟಿ ರೂ.ಗಳಿಸಬಹುದು ಎಂದು ಬಾಕ್ಸ್ ಆಫೀಸ್ ಇಂಡಿಯಾ ಹೇಳಿದೆ. ಇದು ಭಾರತದ ಲೆಕ್ಕಾಚಾರ. ವಿದೇಶದಲ್ಲಿ ಎಷ್ಟು ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ.

ಸಾಧಾರಣವಾಗಿ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಹಬ್ಬಗಳ ದಿನ ಬಿಡುಗಡೆಯಾಗುತ್ತದೆ. ಆದರೆ ಬಾಹುಬಲಿ ಯಾವುದೇ ಹಬ್ಬದ ದಿನ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೇ ಈ ವಾರ ದೊಡ್ಡ ಸ್ಟಾರ್‍ಗಳ ಯಾವೊಂದು ಫಿಲ್ಮ್ ರಿಲೀಸ್ ಆಗಿಲ್ಲ. ಹೀಗಾಗಿ ಶುಕ್ರವಾರ ಒಂದೇ ದಿನ ಇಷ್ಟು ಸಂಗ್ರಹಿಸಿದರೆ ಶನಿವಾರ, ಭಾನುವಾರ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಇದರ ಜೊತೆಗೆ ಸೋಮವಾರವೂ ಕಾರ್ಮಿಕರ ದಿನಾಚರಣೆಗೆ ರಜೆ ಇರುವ ಕಾರಣ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮಾರುಕಟ್ಟೆ ವಿಶ್ಲೇಷಕರು ಬಾಹುಬಲಿ ಮೊದಲ ದಿನ 100 ಕೋಟಿ ರೂ. ಕಲೆಕ್ಷನ್, ವಾರಾಂತ್ಯಕ್ಕೆ ಒಟ್ಟು 300-350 ರೂ. ಕಲೆಕ್ಷನ್ ಮಾಡಬಹುದು. ಮೊದಲ ವಾರದಲ್ಲಿ ಒಟ್ಟು 500 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಿದ್ದಾರೆ.

ಶುಕ್ರವಾರವೇ ಚಿತ್ರ ಬಿಡುಗಡೆಯಾದರೂ ಭಾರತದ ಮಹಾನಗರಗಳಲ್ಲಿ ಗುರುವಾರ ರಾತ್ರಿಯೇ ಬಾಹುಬಲಿ ರಿಲೀಸ್ ಆಗಿತ್ತು. ಅಮೆರಿಕದಲ್ಲಿ ಅತಿಹೆಚ್ಚು ಸಂಖ್ಯೆಯ ಸ್ಕ್ರೀನ್ ನಲ್ಲಿ ರಿಲೀಸ್ ಆಗಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಬಾಹುಬಲಿ ಪಾತ್ರವಾಗಿದ್ದು, ಮಾಹಿತಿಗಳ ಪ್ರಕಾರ ತಮಿಳು, ತೆಲುಗು, ಹಿಂದಿ ಸೇರಿ ಒಟ್ಟು 1,100 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ. ಕೆನಡಾದಲ್ಲಿ 80ಕ್ಕೂ ಹೆಚ್ಚು ಸ್ಥಳಗಳಲ್ಲಿ 150 ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ. ಐ ಮ್ಯಾಕ್ಸ್ ಮಾದರಿಯಲ್ಲೂ ಬಾಹುಬಲಿ ಬಂದಿದ್ದು, ಈ ಮಾದರಿಯ ಫಿಲ್ಮ್ ಗಳು 40-45 ಸ್ಥಳಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಮೆರಿಕ, ಕೆನಡದಲ್ಲಿ ವಿತರಣೆ ಹಕ್ಕು ಪಡೆದಿರುವ ಗ್ರೇಟ್ ಇಂಡಿಯಾ ಫಿಲ್ಮ್ ಸಂಸ್ಥೆ ತಿಳಿಸಿತ್ತು.

ಹಿಂದಿ ಭಾಷೆಯಲ್ಲಿರುವ ಬಾಹುಬಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಫಿಜಿಯಲ್ಲಿ ಬಿಡುಗಡೆಯಾಗಿದ್ದರೆ, ಮಲೇಷ್ಯಾದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ತಮಿಳು ಡಬ್ ಆವೃತ್ತಿ ಬಿಡುಗಡೆಯಾಗಿದೆ.

2015 ಜುಲೈ 10 ರಂದು 4 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ `ಬಾಹುಬಲಿ ದಿ ಬಿಗ್‍ನಿಂಗ್’ ಬಿಡುಗಡೆಯಾಗಿತ್ತು. 180 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಾಣಗೊಂಡಿದ್ದ ಈ ಫಿಲ್ಮ್ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು. ಈ ಮೂಲಕ ಬಾಲಿವುಡ್ ಹೊರತು ಪಡಿಸಿ ಅತಿಹೆಚ್ಚು ಹಣವನ್ನು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ. ಬಾಹುಬಲಿ1 ಮೊದಲ ದಿನ 50.5 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಭಾರತದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವೀಕ್ಷಣೆಯಾದ ಟ್ರೇಲರ್ ಎಂಬ ದಾಖಲೆಯನ್ನು ಬಾಹುಬಲಿ ಬರೆದಿದಿದೆ. ಬಿಡುಗಡೆಯಾದ 6 ಗಂಟೆಯಲ್ಲಿ 4 ಭಾಷೆಯಲ್ಲಿರುವ ಟ್ರೇಲರ್ 1 ಕೋಟಿ ವೀಕ್ಷಣೆ ಕಂಡರೆ, 24 ಗಂಟೆಯಲ್ಲಿ 2.5 ಕೋಟಿ ವ್ಯೂ ಕಂಡಿತ್ತು.

ಕರ್ನಾಟಕ ಬಜೆಟ್ ನಲ್ಲಿ ಘೋಷಣೆಯಾಗಿರುವಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂ. ಆಗಬೇಕಿತ್ತು. ಆದರೆ ಈ ಘೋಷಣೆ ಇನ್ನು ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿ ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಮಾಲೀಕರು ತಮಗೆ ಇಷ್ಟ ಬಂದ ದರವನ್ನು ಫಿಕ್ಸ್ ಮಾಡಿದ್ದು, ಬಾಹುಬಲಿಯ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಾಗಲು ಸಹಕಾರಿಯಾಗಿದೆ.

ಇದನ್ನೂ ಓದಿ: ಬೆಂಗ್ಳೂರಿನಲ್ಲಿ 1200 ರೂ, ಆಂಧ್ರದಲ್ಲಿ ಬಾಹುಬಲಿ-2 ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

ಇದನ್ನೂ ಓದಿ: ಕಲ್ಪನಾ ಲೋಕಕ್ಕೆ ಹೊಸ ಭಾಷ್ಯ ಬರೆದ ಬಾಹುಬಲಿ-2 ಚಿತ್ರದ ಫಸ್ಟ್ ರಿಪೋರ್ಟ್ 

ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ

Baahubali

baahubali song 3

baahubali song 2

bahubali 2

rana baahubali

Baahubali prabhas 768x384 1

ramya krishna bahubali hd picture

bahubali anushka copy

bahubali ccc copy

bahubali 22 copy

bahubali c copy

bahubali cc copy

bahubali 1

bahubali 2 1

Share This Article
Leave a Comment

Leave a Reply

Your email address will not be published. Required fields are marked *