Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಿನಿ ತಾರಾಲಯಕ್ಕೆ 12.88 ಕೋಟಿ, ವಸತಿ ಶಾಲೆಗಳಿಗೆ 44 ಕೋಟಿ ವೆಚ್ಚಕ್ಕೆ ಅಸ್ತು: ಎಂ.ಬಿ ಪಾಟೀಲ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮಿನಿ ತಾರಾಲಯಕ್ಕೆ 12.88 ಕೋಟಿ, ವಸತಿ ಶಾಲೆಗಳಿಗೆ 44 ಕೋಟಿ ವೆಚ್ಚಕ್ಕೆ ಅಸ್ತು: ಎಂ.ಬಿ ಪಾಟೀಲ್‌

Districts

ಮಿನಿ ತಾರಾಲಯಕ್ಕೆ 12.88 ಕೋಟಿ, ವಸತಿ ಶಾಲೆಗಳಿಗೆ 44 ಕೋಟಿ ವೆಚ್ಚಕ್ಕೆ ಅಸ್ತು: ಎಂ.ಬಿ ಪಾಟೀಲ್‌

Public TV
Last updated: February 23, 2025 8:41 pm
Public TV
Share
2 Min Read
m.b.patil
SHARE

ವಿಜಯಪುರ: ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (Mini Planetarium) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ (Vijayapura) ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು 56.88 ಕೋಟಿ ರೂ. ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಸಚಿವ ಎಂ.ಬಿ ಪಾಟೀಲ್‌ (M.B. Patil) ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, `2015-16ನೇ ಸಾಲಿನ ಬಜೆಟ್‌ನಲ್ಲೇ ವಿಜಯಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರ ಗಳಿಂದ ಇದು ಅನುಷ್ಠಾನಕ್ಕೆ ಬರಲಿಲ್ಲ. ಈಗ 12.88 ಕೋಟಿ ರೂ.ಗೆ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಇದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಈ ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದಿದ್ದಾರೆ.

ವಿಜಯಪುರದಲ್ಲಿ ಈ ಯೋಜನೆಯ ಕಾಮಗಾರಿಗೆ ಇದುವರೆಗೆ 1.44 ಕೋಟಿ ರೂ. ವೆಚ್ಚವಾಗಿದೆ. ತಾರಾಲಯದಲ್ಲಿ ಡೋಮ್, ಪ್ರೊಜಕ್ಷನ್ ಸಿಸ್ಟಂ, ಒಳಾಂಗಣ, ಹೊರಾಂಗಣ ವಿಜ್ಞಾನ ಪ್ರದರ್ಶಿಕೆಗಳು, ಆಡಿಯೋ ವ್ಯವಸ್ಥೆ, ಹವಾ ನಿಯಂತ್ರಣ ವ್ಯವಸ್ಥೆ ಎಲ್ಲವೂ ಇರಲಿದೆ. ಇದರ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಲಾಗುವುದು. ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾಗಿ ಅವರು ತಿಳಿಸಿದ್ದಾರೆ.

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಮದಾಪುರದಲ್ಲಿರುವ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಮತ್ತು ವಿಜಯಪುರದಲ್ಲಿರುವ ವಸತಿಸಹಿತ ಪದವಿಪೂರ್ವ ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ತಲಾ 22 ಕೋಟಿ ರೂ.ಗಳಂತೆ ಒಟ್ಟು 44 ಕೋಟಿ ರೂ. ಒದಗಿಸಲು ಕೂಡ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ.

ಈ ಎರಡೂ ವಸತಿ ಶಾಲೆಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, ಇಲ್ಲಿ ತಲಾ 250 ರಂತೆ ಒಟ್ಟು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಇವು ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಹೊಸ ಕಟ್ಟಡಗಳಲ್ಲಿ ಶಾಲಾ ಕಟ್ಟಡ, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್, ಭೋಜನಾಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಸತಿ ಗೃಹಗಳು, ರಂಗಮಂದಿರ, ಕಾಂಪೌಂಡ್, ಸೋಲಾರ್ ವಾಟರ್ ಹೀಟರ್, ಒಳಚರಂಡಿ ವ್ಯವಸ್ಥೆ ಮುಂತಾದವು ಇರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿರುವ 61 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಕ್ಕಾಗಿ ಒಟ್ಟು 1292.50 ಕೋಟಿ ರೂ. ಒದಗಿಸಲು ಸರ್ಕಾರ ತೀರ್ಮಾನಿಸಿದೆ.‌ ಇದರಲ್ಲಿ ಜಿಲ್ಲೆಯ ಈ ಎರಡು ಶಾಲೆಗಳೂ ಸೇರಿವೆ ಎಂದು ಅವರು ಹೇಳಿದ್ದಾರೆ.

TAGGED:M.B Patilmini planetariumvijayapura
Share This Article
Facebook Whatsapp Whatsapp Telegram

Cinema news

Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood

You Might Also Like

Shivaratri 1
Bengaluru City

ಮಹಾಶಿವರಾತ್ರಿಯ ಮಹತ್ವ ಏನೆಂಬುದು ಗೊತ್ತೆ?

Public TV
By Public TV
9 minutes ago
hassan women
Hassan

ಹಾಸನ ಮಹಿಳೆ ನಾಪತ್ತೆ ಕೇಸ್‌ಗೆ ಟ್ವಿಸ್ಟ್‌ – ಕುಣಿಗಲ್‌ನಲ್ಲಿ ಜೀವಂತವಾಗಿ ಪತ್ತೆ

Public TV
By Public TV
8 hours ago
MP Ramesh Jigajinagi
Districts

ಇಷ್ಟೊಂದು ಹೊಲಸು ಸರ್ಕಾರವನ್ನು ನಾನು ನೋಡಿಯೇ ಇಲ್ಲ – ರಮೇಶ ಜಿಗಜಿಣಗಿ

Public TV
By Public TV
9 hours ago
south africa 1
Cricket

ಮಾರ್ಕ್ರಾಮ್‌ ಸ್ಫೋಟಕ ಬ್ಯಾಟಿಂಗ್‌, ಜಾನ್ಸೆನ್‌ ಬೆಂಕಿ ಬೌಲಿಂಗ್‌ಗೆ ನ್ಯೂಜಿಲೆಂಡ್‌ ತತ್ತರ – ಆಫ್ರಿಕಾಗೆ 7 ವಿಕೆಟ್‌ಗಳ ಜಯ

Public TV
By Public TV
9 hours ago
DK Shivakumar 2
Davanagere

ನೂರು ಜನ್ರು ಗೋ-ಬ್ಯಾಕ್ ಅಂದ್ರೆ, ಅದಕ್ಕಿಂತ ಜಾಸ್ತಿ ಕಮ್ ಬ್ಯಾಕ್ ಅನ್ನೋರು ಇರ‍್ತಾರೆ: ಡಿಕೆಶಿ

Public TV
By Public TV
9 hours ago
India vs Pakistan shake hands row
Cricket

ಮ್ಯಾಚ್‌ನಲ್ಲಿ ಪಾಕ್‌ ಆಟಗಾರರ ಜೊತೆ ಹ್ಯಾಂಡ್‌ಶೇಕ್‌ ಮಾಡ್ತೀರಾ?- ಪ್ರಶ್ನೆಗೆ ಸೂರ್ಯಕುಮಾರ್‌ ಹೇಳಿದ್ದೇನು?

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?