Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಳಗಾವಿಯಲ್ಲಿ ಮತ್ತೊಂದು ಜಾಲ ಪತ್ತೆ – 2ನೇ ಮದ್ವೆ ಮಾಡಿಸಿ ಲಕ್ಷ ಲಕ್ಷ ಹಣಕ್ಕೆ ಮಗು ಮಾರಾಟ ಮಾಡಿದ್ದ ಗ್ಯಾಂಗ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ಬೆಳಗಾವಿಯಲ್ಲಿ ಮತ್ತೊಂದು ಜಾಲ ಪತ್ತೆ – 2ನೇ ಮದ್ವೆ ಮಾಡಿಸಿ ಲಕ್ಷ ಲಕ್ಷ ಹಣಕ್ಕೆ ಮಗು ಮಾರಾಟ ಮಾಡಿದ್ದ ಗ್ಯಾಂಗ್‌

Belgaum

ಬೆಳಗಾವಿಯಲ್ಲಿ ಮತ್ತೊಂದು ಜಾಲ ಪತ್ತೆ – 2ನೇ ಮದ್ವೆ ಮಾಡಿಸಿ ಲಕ್ಷ ಲಕ್ಷ ಹಣಕ್ಕೆ ಮಗು ಮಾರಾಟ ಮಾಡಿದ್ದ ಗ್ಯಾಂಗ್‌

Public TV
Last updated: January 27, 2025 9:19 pm
Public TV
Share
4 Min Read
Child
SHARE

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ (Belagavi) ಸದ್ದಿಲ್ಲದೇ ಮಕ್ಕಳ ಮಾರಾಟ ಜಾಲ (Child Sale Gang) ಆಕ್ಟೀವ್ ಆಗಿದೆ. ನೇರವಾಗಿ ಫೀಲ್ಡಿಗಿಳಿಯದ ಈ ಗ್ಯಾಂಗ್ ಗಂಡ ಇಲ್ಲದ ಮಹಿಳೆಯರನ್ನೇ ಟಾರ್ಗೆಟ್‌ ಮಾಡ್ತಿತ್ತು. ಅವರಿಗೆ 2ನೇ ಮದುವೆ ಮಾಡಿಸಿ ಬಳಿಕ ಅವರ ಮಕ್ಕಳನ್ನ ಗಯಾಬ್ ಮಾಡುತ್ತಿತ್ತು ಈ ಗ್ಯಾಂಗ್.

ಕಳೆದ 1 ತಿಂಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಎಷ್ಟು ಮಕ್ಕಳ ಮಾರಾಟ ಆಗಿವೆ? ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿ ಮಕ್ಕಳ ಮಾರಾಟ ಗ್ಯಾಂಗ್ ಯಾವ ರೀತಿ ಕೆಲಸ ಮಾಡ್ತಿದೆ. ಮೂರು ಪ್ರಕರಣದಲ್ಲಿ ಖೆಡ್ಡಾಗೆ ಬಿದ್ದ ಖದೀಮರು ಎಷ್ಟು? ಮಕ್ಕಳ ಮಾರಾಟ ಜಾಲದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ…

Children

ಹೌದು. ಗಡಿ ಜಿಲ್ಲೆಯ ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಮತ್ತೆ ಆಕ್ಟೀವ್ ಆಗಿದೆ. ಸದ್ದಿಲ್ಲದೇ ಲಕ್ಷ ಲಕ್ಷ ಹಣಕ್ಕೆ ಮಕ್ಕಳನ್ನ ಮಾರಿ ದುಡ್ಡು ಮಾಡ್ತಿರುವ ಕತರ್ನಾಕ್ ಗ್ಯಾಂಗ್ ಇದೀಗ ಪೊಲೀಸರ ಖೆಡ್ಡಾಗೆ ಬಿದ್ದಿದೆ. ಕಳೆದ 1 ತಿಂಗಳಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು ಈ ವರೆಗೂ ಮಹಾರಾಷ್ಟ್ರ, ಕರ್ನಾಟಕ, ಗೋವಾ ಸೇರಿ 13 ಜನ ಆರೋಪಿಗಳನ್ನ ವಿವಿಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಷ್ಟಕ್ಕೂ ಈ ಗ್ಯಾಂಗ್ ಗಳು ಹೇಗೆಲ್ಲಾ ಕೆಲಸ ಮಾಡುತ್ತವೆ ಅಂತಾ ಕೇಳಿದ್ರೇ ನೀವು ಕೂಡ ಶಾಕ್ ಆಗ್ತಿರಿ. ಮದುವೆಯಾಗಿ ಮಕ್ಕಳಿದ್ದು ಗಂಡ ಇಲ್ಲದಿರುವ ಮಹಿಳೆಯರನ್ನ ಟಾರ್ಗೆಟ್ ಮಾಡ್ತಾರೆ. ಜೀವನ ನಡೆಸಲು ಹರಸಾಹಸ ಪಡುವ ಮಹಿಳೆಯರಿಗೆ ಮತ್ತೊಂದು ಮದುವೆ ಆಸೆ ಹಚ್ಚುತ್ತಾರೆ. ಇದಾದ ಬಳಿಕ 2ನೇ ಮದುವೆ ಕೂಡ ಮಾಡಿಸುತ್ತಾರೆ. ಮದುವೆಯಾದ ಬಳಿಕ ಮಗುವನ್ನ ನಾವು ನೋಡಿಕೊಳ್ತೇವಿ ಗಂಡ-ಹೆಂಡತಿ ಸ್ವಲ್ಪ ದಿನ ಅರಾಮಾಗಿ ಇರೀ ಅಂತಾ ಆ ಮಗುವನ್ನ ತಮ್ಮೊಟ್ಟಿಗೆ ಕರೆದುಕೊಂಡು ಹೋಗ್ತಾರೆ. ಹೀಗೆ ಹೋದವರು ಮಹಾರಾಷ್ಟ್ರದಲ್ಲಿರುವ ತಮ್ಮ ಟೀಮ್ ಜೊತೆಗೆ ಸೇರಿಕೊಂಡು ಅಲ್ಲಿ ಮೂರು, ನಾಲ್ಕು ಲಕ್ಷಕ್ಕೆ ಮಗುವನ್ನ ಮಾರಾಟ ಮಾಡ್ತಾರೆ. ಹೀಗೆ ಮಾರಿದ ಬಳಿಕ ಸ್ವಂತ ತಾಯಿ ಸಂಪರ್ಕಕ್ಕೆ ಇವರು ಸಿಗುವುದಿಲ್ಲ. ಈ ರೀತಿ ಮಕ್ಕಳನ್ನ ಮಾರಾಟ ಮಾಡಿ ಬಿಂದಾಸ್ ಜೀವನ ಮಾಡ್ತಿದ್ದ ಗ್ಯಾಂಗ್ ಕಡೆಗೂ ಪೊಲೀಸರ ಖೆಡ್ಡಾಗೆ ಬಿದ್ದಿವೆ.

ಅಷ್ಟಕ್ಕೂ ಮೂರು ಕೇಸ್‌ಗಳಲ್ಲಿ ಹೇಗೆಲ್ಲಾ ಮಕ್ಕಳ ಮಾರಾಟ ಆಗಿತ್ತು ಅನ್ನೋದನ್ನ ನೋಡೊದಾದ್ರೇ.. ಈ ಎರಡನೇ ಮದುವೆ ಮಾಡಿಸಿ ಹೇಗೆ ಮಕ್ಕಳನ್ನ ಮಾರಾಟ ಮಾಡಿದ್ರೂ ಅನ್ನೋದನ್ನ ಮೊದಲು ಹೇಳ್ತೇವೆ ನೋಡಿ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ್ ಅನ್ನೋ ಈ ಗ್ರಾಮದಲ್ಲೇ ಇಬ್ಬರು ಮಹಿಳೆಯರಿಗೆ ಬೇರೆ ಬೇರೆ ಸಮಯದಲ್ಲಿ ಎರಡನೇ ಮದುವೆ ಮಾಡಿಸಿ ಎರಡು ಮಕ್ಕಳನ್ನ ಮಾರಾಟ ಮಾಡಿದ್ದರು. ಸಂಗೀತಾ ಅನ್ನೋ ಮಹಿಳೆ ಸದಾಶಿವ ಅನ್ನೋನಿಗೆ ಎರಡನೇ ಮದುವೆಯಾಗಿದ್ದ, ಮದುವೆ ಮಾಡಿಸಿದ್ದ ಲಕ್ಷ್ಮೀ ಗೋಲಬಾಂವಿ ಹೊಸದಾಗಿ ಮದುವೆ ಮಾಡಿಕೊಂಡಿದೀರಿ ಮಗುವನ್ನ ತಾನೇ ಸಾಕುವುದಾಗಿ ಹೇಳಿ ಸಂಗೀತಾ ಕಡೆಯಿಂದ ಮಗು ತೆಗೆದುಕೊಳ್ತಾಳೆ. ಇದಾದ ಬಳಿಕ ಸಂಗೀತಾಳನ್ನ ಮದುವೆಯಾಗಿದ್ದ ಸದಾಶಿವ ಮಗದುಮ್ ಹಾಗೂ ಸಂಗೀತಾ ಸಾವಂತ್, ಅನುಸೂಯಾ ದೊಡ್ಡಮನಿ ಮೂರು ಜನ ಸೇರಿ ಬೆಳಗಾವಿ ನಗರದ ದಿಲ್ ಶಾದ್ ಎಂಬಾಕೆಗೆ 4 ಲಕ್ಷ ಹಣಕ್ಕೆ ಮಗು ಮಾರಿರುತ್ತಾರೆ. ಮೂರು ತಿಂಗಳ ಬಳಿಕ ಸಂಗೀತಾ ಸ್ಪಂದನಾ ಎಂಬ ಎನ್‌ಜಿಒ ಸುಶೀಲಾ ಅವರಿಗೆ ಹೇಳ್ತಾಳೆ. ಸುಶೀಲಾ ಕೂಡಲೇ ಹುಕ್ಕೇರಿ ಠಾಣೆಗೆ ಸಂಗೀತಾಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು ಈ ಕೇಸ್‌ನಲ್ಲಿ 6 ಆರೋಪಿಗಳ ಪೈಕಿ ನಾಲ್ಕು ಜನ ಆರೋಪಿಗಳನ್ನ ಬಂಧಿಸುತ್ತಾರೆ. ಈ ವೇಳೆ ಅರ್ಚನಾ ಎಂಬಾಕೆ ಕೂಡ ಸುಶೀಲಾ ಅವರಿಗೆ ತನ್ನ ಮಗಳು ಕೂಡ ಮಾರಾಟ ಮಾಡಿದ್ದಾರೆ ಅನ್ನೋದನ್ನ ಹೇಳ್ತಾರೆ, ಈ ಕಾರಣಕ್ಕೆ ವಾರದ ಹಿಂದೆ ಮತ್ತೊಂದು ಕೇಸ್ ದಾಖಲಿಸಿದ್ದಾರೆ. ಇಲ್ಲಿ ಕೂಡ ಅರ್ಚನಾ ಅನ್ನೋ ಮಹಿಳೆಗೆ ಎರಡನೇ ಮದುವೆ ಮಾಡಿಸಿ ಬಳಿಕ ತನ್ನ ಮಗುವನ್ನ ನೋಡಿಕೊಳ್ತೇತಿ ಅಂತಾ ಹೇಳಿ ಸಂಗೀತಾ ಗೌಳಿ ತನ್ನೊಟ್ಟಿಗೆ ಮಗುವನ್ನ ತೆಗೆದುಕೊಂಡು ಹೋಗಿ ಮಹಾರಾಷ್ಟ್ರದ ಗಡಹಿಂಗ್ಲಜ್ ನ ಮೋಹನ್ ತಾವಡೆ, ಸಂಗೀತಾ ತಾವಡೆ ಮೂಲಕ ಬೇರೆ ಅವರಿಗೆ ಮೂರು ಲಕ್ಷಕ್ಕೆ ಮಗು ಮಾರಾಟ ಮಾಡಿರುತ್ತಾರೆ.

ಕೇಸ್ ದಾಖಲಿಸಿಕೊಂಡ ಹುಕ್ಕೇರಿ ಪೊಲೀಸರು ಈ ಕೇಸ್ ನಲ್ಲಿ ಕೂಡ ಮೂರು ಜನ ಆರೋಪಿಗಳನ್ನ ಬಂಧಿಸಿದ್ದು ಇಬ್ಬರು ತಾಯಂದಿರಿಗೂ ಎರಡು ಮಕ್ಕಳನ್ನ ವಾಪಾಸ್ ಮಡಿಲು ಸೇರಿಸಿದ್ದಾರೆ. ಇತ್ತ ಜ.8ರಂದು ಬೆಳಗಾವಿ ನಗರದಲ್ಲಿ ಮತ್ತೊಂದು ಹೆಣ್ಣು ಮಗು ಮಾರಾಟ ಆಗಿದ್ದನ್ನ ರಕ್ಷಣೆ ಮಾಡಿ ತಾಯಿ ಮಡಿಲು ಸೇರಿಸಿದ್ದ ಪ್ರಕರಣ ಕೂಡ ನಡೆದಿತ್ತು. ನಾಲ್ಕು ಲಕ್ಷ ರೂಪಾಯಿಗೆ ಗೋವಾ ಮೂಲದ ಮಹಿಳೆಗೆ ಮಗು ಮಾರಾಟ ಮಾಡಿದ್ದು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಈ ಕೇಸ್ ನಲ್ಲಿ ಮಧ್ಯವರ್ತಿಗಳು ಸೇರಿ ಆರು ಜನರನ್ನ ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಿ ಬಳಿಕ ಮಗುವನ್ನ ಹೆತ್ತವರಿಗೆ ಮರಳಿಸಿದ್ದರು.

ಸದ್ಯ 1 ತಿಂಗಳ ಅವಧಿಯಲ್ಲಿ ಮೂರು ಕೇಸ್‌ಗಳಲ್ಲಿ ಮೂರು ಮಕ್ಕಳನ್ನ ರಕ್ಷಣೆ ಮಾಡಿ ಆಯಾ ತಾಯಂದಿರಿಗೆ ಪೊಲೀಸರು ಮರಳಿಸಿದ್ದಾರೆ. ಆದ್ರೆ ಇಲ್ಲಿ ಹಣದ ಆಸೆಗೆ ಇಲ್ಲಾ ಅನಿವಾರ್ಯತೆಗೆ ತಮ್ಮ ಮಕ್ಕಳನ್ನ ಹೆತ್ತವರು ಮಾರಾಟ ಮಾಡ್ತಿದ್ದಾರಾ? ಅಥವಾ ಅವರ ದಿಕ್ಕು ತಪ್ಪಿಸಿ ಗ್ಯಾಂಗ್‌ಗಳು ಮಕ್ಕಳ ಮಾರಾಟ ಮಾಡ್ತಿವೆಯಾ ಅನ್ನೋದು ಕೂಡ ಪೊಲೀಸರು ತನಿಖೆಯಿಂದ ಹೊರ ಬರಬೇಕಿದೆ. ಅದೇನೆ ಇರಲಿ ಈ ರೀತಿ ಬಡ ಹೆಣ್ಣು ಮಕ್ಕಳ ಮುದ್ಧತೆ ದುರ್ಬಳಕೆ ಮಾಡಿಕೊಳ್ತಿರುವ ಖದೀಮರಿಗೆ ತಕ್ಕ ಶಿಕ್ಷೆ ಆಗಲಿ.

TAGGED:belagavibelagavi policeChild Sale Gangಬೆಳಗಾವಿಬೆಳಗಾವಿ ಪೊಲೀಸ್ಮಕ್ಕಳ ಮಾರಾಟ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Oman Tankers
Latest

ಇರಾನ್‌ ಸಮುದ್ರ ಬಳಸದೇ ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಮೂರು ಒಮಾನ್ ಹಡಗುಗಳು

Public TV
By Public TV
17 minutes ago
Justice Santosh Hegde
Bengaluru City

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸ್ವಸ್ಥ – ಆಸ್ಪತ್ರೆಗೆ ದಾಖಲು

Public TV
By Public TV
18 minutes ago
Iranian Crude Oil
Latest

ಭಾರತದತ್ತ ಹೊರಟಿದ್ದ ಇರಾನ್ ಕಚ್ಚಾ ತೈಲ ಹೊತ್ತ ಹಡಗು ಚೀನಾದತ್ತ ಪ್ರಯಾಣ

Public TV
By Public TV
1 hour ago
Raw Bitumen Karwar
Latest

ಕಾರವಾರ| ಮಧ್ಯಪ್ರಾಚ್ಯದಿಂದ ಬರುತ್ತಿದ್ದ ಕಚ್ಚಾ ಡಾಂಬರ್ ಸಂಪೂರ್ಣ ಬಂದ್

Public TV
By Public TV
2 hours ago
Induction Stove
Bengaluru City

ಇಂಡಕ್ಷನ್‌ ಸ್ಟವ್‌ ಖರೀದಿ ಮುನ್ನ ಈ ಅಂಶಗಳನ್ನು ತಿಳಿದುಕೊಳ್ಳಿ

Public TV
By Public TV
2 hours ago
Hubli Love Jihad
Dharwad

ಜ್ಯೂಸ್‌ನಲ್ಲಿ ಮತ್ತಿನ ಔಷಧ ಬೆರಸಿಕೊಟ್ಟು ಸಮೀರ್‌ ಅತ್ಯಾಚಾರ ಮಾಡಿದ್ದಾನೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?