Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading:ತಾಕತ್ತಿದ್ರೆ ಯತ್ನಾಳ್‌ನ ಉಚ್ಚಾಟಿಸಿ – ವಿಜಯೇಂದ್ರಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲ್‌
Share
NotificationShow More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ತಾಕತ್ತಿದ್ರೆ ಯತ್ನಾಳ್‌ನ ಉಚ್ಚಾಟಿಸಿ – ವಿಜಯೇಂದ್ರಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲ್‌

Districts

ತಾಕತ್ತಿದ್ರೆ ಯತ್ನಾಳ್‌ನ ಉಚ್ಚಾಟಿಸಿ – ವಿಜಯೇಂದ್ರಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲ್‌

Public TV
Last updated: November 30, 2024 3:35 pm
Public TV
Share
2 Min Read
priyank kharge
SHARE

– ಕ್ರಿಮಿನಲ್ ಕೆಲ್ಸ ಮಾಡಿ ಜೈಶ್ರೀರಾಮ್‌ ಅಂದ್ರೆ ಎಲ್ಲವೂ ಮುಚ್ಚಿ ಹೋಗುತ್ತಾ? ಎಂದು ಲೇವಡಿ

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಮೊದಲು ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಪಕ್ಷದಿಂದ ಉಚ್ಚಾಟಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ (BJP) ಎರಡು ಬಣಗಳ ಮಧ್ಯೆ ಫೈಟ್ ನಡೆದಿದೆ. ಮೇಲಾಗಿ ಬಿಜೆಪಿ ಕಾರ್ಯಕರ್ತರೇ (BJP Workers) ಯತ್ನಾಳ್ ಅರೆಹುಚ್ಚ ಅಂದಿದ್ದಾರೆ. ಇಷ್ಟಾದರೂ ಅವರನ್ನ ಏಕೆ ಪಕ್ಷದಿಂದ ಉಚ್ಚಾಟಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 93 ವರ್ಷದ ಅಜ್ಜಿಗೆ ಪರೋಲ್ – ಜೈಲಲ್ಲಿ ಅಜ್ಜಿಯ ಪರಿಸ್ಥಿತಿ ಕಂಡು ಮರುಗಿದ್ದ ಉಪಲೋಕಾಯುಕ್ತ

ಇದೇ ವೇಳೆ ಮುಸ್ಲಿಮರಿಗೆ (Muslims) ಮತದಾನದ ಹಕ್ಕಿಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದರು. ಸ್ವಾಮೀಜಿ ಆದ ತಕ್ಷಣ ಅವರಿಗೆ ಕಾನೂನು ಅನ್ವಯ ಆಗುವುದಿಲ್ಲವಾ ಮಿಸ್ಟರ್ ಅಶೋಕ್? ತಮ್ಮ ಹೇಳಿಕೆಗೆ ಕುರಿತು ಖುದ್ದು ಸ್ವಾಮೀಜಿಯವರೇ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಸ್ವಾಮೀಜಿಯವರ ಹೇಳಿಕೆಯನ್ನ ಬಿಜೆಪಿ ಸಮರ್ಥನೆ ಮಾಡುತ್ತಿದೆ. ಕಾನೂನು ಅಂದ್ರೆ ನಮಗೇ ಬೇರೆ, ನಿಮಗೇ ಬೇರೆನಾ? ಎಂದು ಕಿಡಿಕಾರಿದರು.

ಯತ್ನಾಳ್ ಬಸವಣ್ಣ ಅವರನ್ನ ಹೇಡಿ ಎನ್ನುತ್ತಾರೆ. ಇದಕ್ಕೆ ಬಿಜೆಪಿಯ ಒಬ್ಬರೂ ಈವರೆಗೆ ತುಟಿ ಬಿಚ್ಚಿಲ್ಲ. ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದಾಗ್ಯೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಬಸವಣ್ಣ ಅಂದ್ರೆ ನಿಮಗೆ ಅಷ್ಟೊಂದು ಅಲರ್ಜಿನಾ? ಕ್ರಿಮಿನಲ್ ಕೆಲಸ ಮಾಡಿ ಜೈಶ್ರೀರಾಮ್‌ ಅಂದ್ರೆ ಎಲ್ಲವೂ ಮುಚ್ಚಿ ಹೋಗುತ್ತಾ? ಲೇವಡಿ ಮಾಡಿದರು. ಇದನ್ನೂ ಓದಿ: ಮೋದಿ ಮನೆ ಹೊರಗಿನ ನಾಯಿಯಂತೆ ಚುನಾವಣಾ ಆಯೋಗ ವರ್ತಿಸುತ್ತಿದೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಎಂಎಲ್‌ಸಿ

ಸಂಪುಟ ಪುನಾರಚನೆ ಇಲ್ಲ:
ರಾಜ್ಯ ಸಚಿವ ಸಂಪುಟದ ಪುನಾರಚನೆ ಸದ್ಯಕ್ಕೆ ಮಾಡುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ‌ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ದೆಹಲಿಗೆ ಹೋಗಿರಲಿಲ್ಲ. ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ನೂತನ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯ ಕೋರಲು ತೆರಳಿದ್ದರು. ಈ ವೇಳೆ ಮುಖ್ಯಮಂತ್ರಿಗಳು ಎಐಸಿಸಿ ಅಧ್ಯಕ್ಷರನ್ನು ಸಹಜವಾಗಿ ಭೇಟಿ ಮಾಡಿದ್ದಾರೆ ಅಷ್ಟೇ ಎಂದು ವಿವರಿಸಿದರು.

ವಿಕಲಚೇತನರ ಅನುದಾನ ಕಡಿತ ಆಗಿಲ್ಲ:
ಇದೇ ವೇಳೆ ವಿಶೇಷ ಚೇತನರ ಅನುದಾನ ಕಡಿತ ಆರೋಪಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಅಂಗವಿಕಲರ ಅನುದಾನದಲ್ಲಿ ಶೇ.80ರಷ್ಟು ಕಡಿತ ಮಾಡಲಾಗಿದೆ ಎಂಬುದು ಸುಳ್ಳು. ಯಾವುದೇ ಅನುದಾನ ಕಡಿತ ಮಾಡಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ಅನುದಾನ ಹೆಚ್ಚಿಸಲಾಗಿದೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೀಡಿದ ಕ್ರಿಯಾಯೋಜನೆ ಆಧರಿಸಿ ಅನುದಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಮದುವೆಗಳಿಗೆ ಹೋಗ್ತಿನಿ – ಚಂದ್ರಶೇಖರ ಸ್ವಾಮೀಜಿ ಯೂಟರ್ನ್‌

TAGGED:Basanagouda Patil YatnalBY VijayendraKalaburagiPriyank Khargeಕಲಬುರಗಿಪ್ರಿಯಾಂಕ್ ಖರ್ಗೆಬಸನಗೌಡ ಪಾಟೀಲ್ ಯತ್ನಾಳ್ಬಿ.ವೈ.ವಿಜಯೇಂದ್ರ
Share This Article
FacebookWhatsappWhatsappTelegram

Cinema news

Vijay Trisha Krishnan
ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ
CinemaLatestNationalTop Stories
Trisha at tirupati
ನಟ ವಿಜಯ್‌ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ತ್ರಿಷಾ
CinemaLatestNationalTop Stories
darshan 1
ಜೈಲಿನಲ್ಲಿ ಅಮಾನವೀಯ ವರ್ತನೆ, ಸಹಕೈದಿಗಳಿಂದ ಬೆದರಿಕೆ- ವೃತ್ತಿಜೀವನಕ್ಕೆ ಮರಣಗಂಟೆ: ಸುಪ್ರೀಂನಲ್ಲಿ ದರ್ಶನ್ ಅಳಲು
Bengaluru CityCinemaCourtLatestMain Post
Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru CityCrimeDistrictsKarnatakaLatestSandalwoodTop Stories

You Might Also Like

pm modi 5
Latest

ಬಂಗಾಳದಲ್ಲಿ ಕಮಲ ಅರಳಿದೆ, ಅದ್ಭುತ ಜನಾದೇಶ ಸಿಕ್ಕಿದೆ: ಮೋದಿ ಕೃತಜ್ಞತೆ

Public TV
ByPublic TV
18 minutes ago
Siddaramaiah
Bengaluru City

SIR ಮೋಸದಾಟ, ಚುನಾವಣಾ ಆಯೋಗದ ಕೈವಾಡದಿಂದ ಮಮತಾಗೆ ಸೋಲು: ಸಿದ್ದರಾಮಯ್ಯ ಆಕ್ರೋಶ

Public TV
ByPublic TV
20 minutes ago
Narenndra Modi BJP Victory Specch delhi lection
Latest

ವಾಜಪೇಯಿ ಕನಸು ನನಸು – ಬಿಜೆಪಿ ಆಡಳಿತ ರಾಜ್ಯಗಳ ಸಂಖ್ಯೆ 20ಕ್ಕೆ ಏರಿಕೆ

Public TV
ByPublic TV
29 minutes ago
Siddaramaiah 4
Bagalkot

ನಮ್ಮ ಪಕ್ಷದ ಸಾಧನೆ, ಸಿದ್ಧಾಂತಕ್ಕೆ ಜಯ ಸಿಕ್ಕಿದೆ: ಸಿಎಂ ಸಿದ್ದರಾಮಯ್ಯ

Public TV
ByPublic TV
50 minutes ago
Vijay
Latest

18ನೇ ವಯಸ್ಸಿಗೆ ಸಿನಿ ರಂಗ ಪ್ರವೇಶ – ಜೋಸೆಫ್‌ ವಿಜಯ್‌ `ದಳಪತಿ’ ಆಗಿದ್ದು ಹೇಗೆ?

Public TV
ByPublic TV
57 minutes ago
DN Jeevaraj
Chikkamagaluru

ಅಂಚೆ ಮತ ಮರು ಎಣಿಕೆಯಲ್ಲಿ ಗೆದ್ದ ಜೀವರಾಜ್‌ಗೆ ECI ಪ್ರಮಾಣ ಪತ್ರ

Public TV
ByPublic TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?