Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಮಾಸ್‌ ಸುರಂಗ ರಹಸ್ಯ – ಇಸ್ರೇಲನ್ನೇ ಅಚ್ಚರಿಸಿಗೊಳಿಸಿದ್ದ ಸುರಂಗ ಜಾಲ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಹಮಾಸ್‌ ಸುರಂಗ ರಹಸ್ಯ – ಇಸ್ರೇಲನ್ನೇ ಅಚ್ಚರಿಸಿಗೊಳಿಸಿದ್ದ ಸುರಂಗ ಜಾಲ

Latest

ಹಮಾಸ್‌ ಸುರಂಗ ರಹಸ್ಯ – ಇಸ್ರೇಲನ್ನೇ ಅಚ್ಚರಿಸಿಗೊಳಿಸಿದ್ದ ಸುರಂಗ ಜಾಲ

Public TV
Last updated: October 22, 2024 3:00 pm
Public TV
Share
5 Min Read
hamas tunnel
SHARE

2023ರ ಅಕ್ಟೋಬರ್‌ 7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಯಾರೂ ಊಹಿಸದ ರೀತಿಯಲ್ಲಿ ಘಾತುಕ ದಾಳಿ ನಡೆಸಿದ್ದರು. ಅಂದು ಇಸ್ರೇಲ್ ಮೇಲಿನ ದಾಳಿಯ ಸಿದ್ಧತೆಗೆ ಗಾಜಾದ ನೆಲದಾಳದಲ್ಲಿರುವ ಸುರಂಗಗಳ ಜಾಲವೂ ಒಂದು ಭಾಗವಾಗಿತ್ತು. ಯಾಹ್ಯಾ ಸಿನ್ವರ್ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡಿದ್ದವರ ಪ್ರಕಾರ, ದಾಳಿಗೆ 6 ತಿಂಗಳ ಹಿಂದೆಯೇ ಹಮಾಸ್ ಇದರ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿತ್ತು.

ಈ ಹಿಂದೆ 2006, 2019ರಲ್ಲಿ ಇಸ್ರೇಲ್‌ ಹಮಾಸ್‌ ಮೇಲೆ ದಾಳಿ ನಡೆಸಿದಾಗ ಗಾಜಾದಲ್ಲಿದ್ದ ಅನೇಕ ಹಮಾಸ್‌ ಸುರಂಗಗಳನ್ನು ಧ್ವಂಸ ಮಾಡಿದ್ದ ಇಸ್ರೇಲ್ ಈಗಲೂ ಅದೇ ಕೆಲಸ ಮಾಡುತ್ತಿದೆ. ಹಮಾಸ್‌ನ ಒಂದೊಂದೇ ಸುರಂಗಗಳನ್ನು ಪತ್ತೆಹಚ್ಚುತ್ತಿದೆ. ಅದರಲ್ಲಿನ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಸುರಂಗಗಳನ್ನು ಧ್ವಂಸ ಮಾಡುತ್ತಿದೆ. ಇತ್ತೀಚೆಗಷ್ಟೇ ಅ.7ರ ರಾಕೆಟ್‌ ದಾಳಿಗೂ ಹಮಾಸ್‌ ಮುಖ್ಯಸ್ಥ ಯಹ್ಯಾ ಅಡಗಿದ್ದ ಸುರಂಗದ ವೀಡಿಯೋವನ್ನ ಬಹಿರಂಗಪಡಿಸಿತ್ತು. ಗಾಜಾದ ನೆಲದಾಳದಲ್ಲಿರುವ ಹಮಾಸ್ ಸುರಂಗ ಜಾಲಕ್ಕೆ ನೂರಾರು ಮಿಲಿಯನ್ ಡಾಲರ್ ವೆಚ್ಚ ತಗುಲಿದ್ದು, ಇದು 300 ಮೈಲಿಗೂ ಹೆಚ್ಚು (ಅಂದಾಜು 480 ಕಿಲೋಮೀಟರ್) ವ್ಯಾಪ್ತಿ ಹೊಂದಿತ್ತು. ಅಂದರೆ, ಇದು ನ್ಯೂಯಾರ್ಕ್ ನಗರದ ಸಬ್‌ವೇಗಿಂತಲೂ ಉದ್ದವಾಗಿದೆ ಎಂದು ಮಾಧ್ಯಮಗಳ ವರದಿಯಾಗಿತ್ತು. ಅಷ್ಟಕ್ಕೂ ಈ ಸುರಂಗ ಜಾಲ ಹುಟ್ಟಿಕೊಂಡಿದ್ದು ಹೇಗೆ? ಸುರಂಗ ಜಾಲದ ಹಿನ್ನೆಲೆ ಏನು? ಇಸ್ರೇಲ್‌ ಹೋರಾಟ ಹೇಗಿದೆ ಎಂಬುದನ್ನು ನೋಡೋಣ… ಅದಕ್ಕೂ ಮುನ್ನ ಹಮಾಸ್‌ ಮುಖ್ಯಸ್ಥನ ಬಗ್ಗೆ ಒಂದಿಷ್ಟು ಕಿರು ಮಾಹಿತಿ ತಿಳಿಯೋಣ…

ಯಹ್ಯಾ ಸಿನ್ವರ್‌ ಯಾರು?
ಇತ್ತೀಚೆಗಷ್ಟೇ ಹತ್ಯೆಯಾದ ಹಮಾಸ್‌ ಮುಖ್ಯಸ್ಥ ಯಹ್ಯಾ ಸಿನ್ವರ್‌, 80ರ ದಶಕದಲ್ಲಿ ಹಮಾಸ್‌ ಅನ್ನು ಸ್ಥಾಪಿಸಿದ ಮೊದಲಿಗರಲ್ಲಿ ಒಬ್ಬ. ಇಸ್ರೇಲ್‌ ಸೇನೆ ಕೈಗೂ ಹಲವುಬಾರಿ ಸಿಕ್ಕಿಬಿದ್ದಿದ್ದ. 2011ರಲ್ಲಿ ಖೈದಿಗಳ ವಿನಿಮಯದ ಸಮಯದಲ್ಲಿ ಸಿನ್ವರ್‌ ಕೂಡ ಒಬ್ಬನಾಗಿದ್ದ. ಇಸ್ರೇಲ್‌ ಸೇನೆಯಿಂದ ಬಿಡುಗಡೆ ಹೊಂದಿದ ನಂತರ ಹಮಾಸ್‌ ಸೇನೆ ಸೇರಿದ ಯಹ್ಯಾ, ಗಾಜಾದಲ್ಲಿ ಹಮಾಸ್‌ ಗುಂಪನ್ನು ಬಲಪಡಿಸುವ ಕೆಲಸಕ್ಕೆ ಮುದಾದನು. ಅದಕ್ಕಾಗಿ ವಿದೇಶಗಳೊಂದಿಗೆ ಸಂಪರ್ಕ ಸಾಧಿಸಿ, ನಿಧಿ ಸಂಗ್ರಹಿಸುವ ಕೆಲಸಕ್ಕೂ ಮುಂದಾದನು. ಬಳಿಕ ಇಸ್ರೇಲ್‌ ಪರವಾಗಿರುವವರನ್ನು ಕೊಲ್ಲುವುದಕ್ಕೆ ಪ್ರಾರಂಭಿಸಿದ್ದ

ಅಕ್ಟೋಬರ್ 7ರ ದಾಳಿಯ ಬಳಿಕದ ಅವಧಿಯನ್ನು ‘ರೆಸಿಸ್ಟೆನ್ಸ್ ಫೇಸ್’ (ಪ್ರತಿರೋಧದ ಅವಧಿ) ಎಂದು ಹಮಾಸ್ ಪರಿಗಣಿಸಿತ್ತು. ಅಂದರೆ, ಈ ದಾಳಿಯ ಬಳಿಕ ಇಸ್ರೇಲ್ ಭಾರೀ ಪ್ರಮಾಣದಲ್ಲಿ ಪ್ರತಿದಾಳಿ ನಡೆಸಲಿದೆ ಎಂದು ಹಮಾಸ್‌ ಊಹಿಸಿತ್ತು. ಆದ್ದರಿಂದ, ಇಸ್ರೇಲ್ ವಿರುದ್ಧ ಮರು ಹೋರಾಟ ನಡೆಸುವ ಸಲುವಾಗಿ, ಹಮಾಸ್ ನಾಯಕರು ಸಂಘಟನೆ ತನಗೆ ಅವಶ್ಯಕವಾದ ಆಯುಧಗಳನ್ನು ತಾನೇ ಉತ್ಪಾದಿಸುವಂತೆ ಮಾಡುವ ಕುರಿತು ಗಮನ ಕೇಂದ್ರೀಕರಿಸಿತ್ತು. ಆ ಮೂಲಕ ಇಸ್ರೇಲ್ ದಾಳಿ ನಡೆಸಿದರೂ, ಯುದ್ಧ ಮುಂದುವರಿಸಲು ಬೇಕಾದ ಆಯುಧ ಸಂಪನ್ಮೂಲ ನಮ್ಮ ಬಳಿ ಇರುತ್ತದೆ ಎಂದು ಹಮಾಸ್ ಲೆಕ್ಕಾಚಾರ ಹಾಕಿತ್ತು. ಇಂತಹ ಸಿದ್ಧತೆಯ ಕಾರಣದಿಂದಲೇ ಇಸ್ರೇಲ್ ಜೊತೆಗಿನ ಒಂದು ವರ್ಷದ ಸುದೀರ್ಘ ಯುದ್ಧದಲ್ಲೂ ಹಮಾಸ್ ಸಂಘಟನೆಗೆ ಇನ್ನೂ ಉಳಿದುಕೊಳ್ಳಲು ಸಾಧ್ಯವಾಗಿದೆ ಎನ್ನುತ್ತವೆ ವರದಿಗಳು. ಹಮಾಸ್ ನಾಯಕರು ಇಸ್ರೇಲ್ ಪ್ರತಿರೋಧವನ್ನು ಮೊದಲೇ ಊಹಿಸಿದ್ದರಿಂದ, ಅವರು ಹೋರಾಟ ಮುಂದುವರಿಸಲು ಸಾಧ್ಯವಾಯಿತು.

ಗಾಜಾದಲ್ಲಿ ಹಮಾಸ್ ಸಂಘಟನೆಯ ರಾಜಕೀಯ ವಿಭಾಗದ ಸದಸ್ಯನಾದ ಘಾಜಿ ಅಹಮದ್ ಎಂಬಾತ ಹಮಾಸ್ ಸಂಘಟನೆ ಗಾಜಾದ ಭೂಮಿಯಾಳದಲ್ಲಿ ಉತ್ಪಾದನಾ ಘಟಕಗಳನ್ನು ಯಶಸ್ವಿಯಾಗಿ ನಿರ್ಮಿಸಿತು ಎಂದಿದ್ದಾನೆ. ಒಂದಲ್ಲ ಒಂದು ದಿನ ಎಲ್ಲ ಪೂರೈಕೆ ಮಾರ್ಗಗಳೂ ಸ್ಥಗಿತಗೊಳ್ಳುವ ಅಪಾಯವನ್ನು ಮನಗಂಡು ನಾವು ಇಂತಹ ನಿರ್ಣಯ ಕೈಗೊಂಡೆವು ಎಂದು ಅವನು ವಿವರಿಸಿದ್ದಾನೆ. ಆಯುಧಗಳನ್ನು ಉತ್ಪಾದಿಸಿ, ಅವುಗಳನ್ನು ಸಂಗ್ರಹಿಸುವ ಜೊತೆಗೆ, ಈ ನೆಲದಾಳದ ಸುರಂಗಗಳು ಸಂವಹನ ಜಾಲವಾಗಿ, ಅವಶ್ಯಕ ವಸ್ತುಗಳ ಸಂಗ್ರಹಾಗಾರವಾಗಿ, ಸಾಗಾಣಿಕಾ ಮಾರ್ಗವಾಗಿ, ಲಾಜಿಸ್ಟಿಕ್ ಕೇಂದ್ರವಾಗಿ, ಬಾಂಬ್ ದಾಳಿಯಿಂದ ರಕ್ಷಣೆ ಒದಗಿಸುವ ತಾಣವಾಗಿ, ಹಾಗೂ ಆಸ್ಪತ್ರೆಯಾಗಿಯೂ ಬಳಕೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದರೊಡನೆ, ಅಕ್ಟೋಬರ್ 7ರಂದು ಕರೆತಂದ ಒಂದಷ್ಟು ಇಸ್ರೇಲಿ ಒತ್ತೆಯಾಳುಗಳೂ ಈ ಸುರಂಗದಲ್ಲೇ ಇದ್ದು, ಸುರಂಗವನ್ನು ಇಸ್ರೇಲಿ ಸೈನಿಕರ ವಿರುದ್ಧ ಬಳಸಲೂ ಯೋಜಿಸಲಾಗಿತ್ತು.

ಅಚ್ಚರಿ ಮೂಡಿಸಿದ ಸುರಂಗ ಜಾಲ:
ಐಡಿಎಫ್ ತನಿಖಾಧಿಕಾರಿಗಳಿಗೂ ಹಮಾಸ್ ಬಳಿ ಕೆಲವೇ ಇರಾನ್ ನಿರ್ಮಿತ ಆಯುಧಗಳು ಲಭಿಸಿದ್ದವು. ಇರಾನ್ ನಿರ್ಮಾಣದ ಹೆಚ್ಚಿನ ಆಯುಧಗಳ ಬದಲಿಗೆ, ಐಡಿಎಫ್ ಅಧಿಕಾರಿಗಳಿಗೆ, ಹಳೆಯ ಪೈಪ್‌ಗಳು ಮತ್ತು ಕೃಷಿ ಬಳಕೆಯ ರಾಸಾಯನಿಕಗಳನ್ನು ಆಯುಧಗಳ ಬಿಡಿಭಾಗಗಳನ್ನಾಗಿಸುವ ಕಾರ್ಖಾನೆಗಳು ಕಂಡಿದ್ದವು. ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು ಹಮಾಸ್‌ನ ನೂತನ ಸುರಂಗ ಜಾಲವನ್ನು ನೋಡಿ ಅಚ್ಚರಿಗೊಂಡಿದ್ದವು.

ಜೆರುಸಲೇಂ ಪೋಸ್ಟ್ ಜೊತೆ ಮಾತನಾಡಿದ ಐಡಿಎಫ್ ಅಧಿಕಾರಿಗಳು, ನಾವು ಆರಂಭದಲ್ಲಿ ಹಮಾಸ್ ಬಂಕರ್‌ಗಳು ಅಂದಾಜು 30 ಅಡಿ (ಅಂದಾಜು 9 ಮೀಟರ್) ಆಳದಲ್ಲಿ ಇರಬಹುದು ಎಂದು ಊಹಿಸಿದ್ದಾಗಿ ಹೇಳಿದ್ದಾರೆ. ಆದರೆ, ಇನ್ನಷ್ಟು ತೀವ್ರ ಶೋಧ ನಡೆಸಿದಾಗ, ಸುರಂಗಗಳು ಕೆಲವೆಡೆ 120 ಅಡಿಗಳಷ್ಟು (ಅಂದಾಜು 37 ಮೀಟರ್) ಆಳಕ್ಕೆ ಸಾಗುವುದು ಕಂಡುಬಂದಿತ್ತು. ಇದು ಹಮಾಸ್‌ನ ವ್ಯಾಪಕವಾದ ಸುರಂಗ ಜಾಲವನ್ನು ಪತ್ತೆಹಚ್ಚಿ ನಾಶಪಡಿಸಲು ಇಸ್ರೇಲಿ ಪಡೆಗಳು ಎದುರಿಸಬೇಕಾಗಿದ್ದ ಸವಾಲಿಗೆ ಸಾಕ್ಷಿಯಾಗಿತ್ತು. ಗಾಜಾದ ನೆಲದಾಳದ ಸುರಂಗಗಳಿಗೆ ಐಡಿಎಫ್ ಅತಿಥಿಯಾಗಿ ಭೇಟಿ ನೀಡಿದ್ದ ಅಮೆರಿಕದ ಮಾಜಿ ಉಗ್ರ ನಿಗ್ರಹ ಅಧಿಕಾರಿಯೊಬ್ಬರು ಹಮಾಸ್‌ನ ಸುರಂಗ ವ್ಯವಸ್ಥೆಯನ್ನು ನೋಡಿಯೇ ನಾವು ಆಶ್ಚರ್ಯಚಕಿತರಾದೆವು ಎಂದಿದ್ದಾರೆ. ಈ ಸುರಂಗ ಮಾರ್ಗ ಎಷ್ಟು ದೊಡ್ಡದಾಗಿತ್ತು ಎಂದು ನಮಗೆ ಅರಿವೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ವಾಸ್ತವದಲ್ಲಿ ಹಮಾಸ್‌ನ ಸುರಂಗ ಎಲ್ಲರ ಊಹೆಯನ್ನೂ ಮೀರಿ ವ್ಯಾಪಕವಾಗಿತ್ತು. ಅಕ್ಟೋಬರ್ 7ರ ದಾಳಿ ಹಾಗೇ ನೇರವಾಗಿ ನಡೆದ ದಾಳಿಯಲ್ಲ. ಅದಕ್ಕಾಗಿ ಹಲವಾರು ವರ್ಷಗಳ ಕಾಲ, ದಿನದ 24 ಗಂಟೆಯೂ ನಾವು ಸಿದ್ಧತೆ ನಡೆಸಿದ್ದೇವೆ. ಅದು ಕೇವಲ ಒಂದೆರಡು ವರ್ಷದ ಸಿದ್ಧತೆಯಲ್ಲ ಎಂದು ಹಮದ್ ಹೇಳಿದ್ದಾನೆ. ಬೈಡನ್ ಆಡಳಿತದ ಮೊದಲ ಮೂರು ವರ್ಷಗಳ ಕಾಲ ಮಧ್ಯ ಪೂರ್ವದಲ್ಲಿ ರಕ್ಷಣಾ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದ ಡಾನಾ ಸ್ಟ್ರೌಲ್ ಅವರು ಗಾಜಾದ ಸುರಂಗಗಳು ಇಷ್ಟು ದೊಡ್ಡ ಪ್ರಮಾಣದಲ್ಲಿದ್ದವು ಮತ್ತು ಅವುಗಳು ಇಷ್ಟೊಂದು ವೈವಿಧ್ಯಮಯವಾಗಿದ್ದವು ಎಂಬ ಅರಿವು ಯಾರಿಗೂ ಇರಲಿಲ್ಲ ಎಂದಿದ್ದಾರೆ.

ಹಮಾಸ್‌ನ ಹಳೆಯ ಕಾರ್ಯತಂತ್ರ
ಈ ಹಿಂದೆ ಕದನಗಳು ನಡೆದಾಗ, ಹಮಾಸ್ ಸಂಘಟನೆ ಸುರಂಗಗಳ ಮೂಲಕ ಈಜಿಪ್ಟ್‌ಗೆ ಆಯುಧಗಳ ಕಳ್ಳ ಸಾಗಣೆ ನಡೆಸುತ್ತಿತ್ತು. ಇದಕ್ಕಾಗಿ ಹಲವಾರು ಬಾರಿ ಐಡಿಎಫ್ ಮುಚ್ಚಿದ ಸುರಂಗಗಳನ್ನೂ ಡ್ರಿಲ್ ಬಳಸಿ ಕೊರೆಯುತ್ತಿತ್ತು. ಆದರೆ ಅಕ್ಟೋಬರ್‌ 7ರ ದಾಳಿಗೆ ಮುನ್ನ ಆಯುಧಗಳನ್ನು ಇಸ್ರೇಲ್ ಮತ್ತು ಈಜಿಪ್ಟ್ ಎರಡೂ ನಿರ್ವಹಿಸುವ ಗಡಿಯನ್ನು ದಾಟಿ, ಭೂ ಮಾರ್ಗದಲ್ಲೇ ಗಾಜಾಗೆ ತರಲಾಯಿತು. ಹಮಾಸ್ ತಾನು ಆಯುಧಗಳನ್ನು ಉತ್ಪಾದಿಸಿ ಸ್ವಾವಲಂಬನೆ ಸಾಧಿಸಬೇಕು ಎಂಬ ಗುರಿ ಹೊಂದಿದ್ದರೂ, ಅದಕ್ಕೆ ಬಾಹ್ಯ ಮೂಲಗಳಿಂದ ನೆರವು ಲಭಿಸಿತ್ತು. ಅನಾಮಧೇಯ ಮೂಲಗಳ ಪ್ರಕಾರ, ಹಮಾಸ್ ಸಂಘಟನೆ ಹತ್ತಾರು ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದ್ದು, ಅದರಲ್ಲಿ ಒಂದು ಸಣ್ಣ ಭಾಗವಷ್ಟೇ ಇರಾನ್‌ನಿಂದ ಬಂದಿತ್ತು. ಅದರೊಡನೆ ಹಮಾಸ್ ಸಹಾಯ ಧನ, ಚಾರಿಟಿಯ ಹಣ, ತೆರಿಗೆ ಹಣವನ್ನೂ ತಮ್ಮ ಚಟುವಟಿಕೆಗಳಿಗೆ ಬಳಸಿತ್ತು. ಅಷ್ಟೇ ಅಲ್ಲದೆ ಗಾಜಾದ ಬ್ಯಾಂಕುಗಳಲ್ಲಿ ಜಮೆಯಾದ ಹಣವನ್ನು ಕದ್ದು ತನ್ನ ಚಟುವಟಿಕೆಗಳಿಗೆ ಬಳಸಿಕೊಂಡಿತ್ತು.

TAGGED:GazaHamasIsraeltunnelYahya Sinwarಗಾಂಜಾಯಾಹ್ಯಾ ಸಿನ್ವರ್ಹಮಾಸ್‌ ಸುರಂಗ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

Nikhil Kumaraswamy
Bengaluru City

ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ: ರಾಹುಲ್ ಗಾಂಧಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

Public TV
By Public TV
10 minutes ago
Mandya Police
Crime

ಆ್ಯಸಿಡ್ ಅಟ್ಯಾಕ್ ಕಮ್ ದರೋಡೆ ನಾಟಕ – ಚಿನ್ನದಂಗಡಿ ಮಾಲೀಕನೀಗ ಪೊಲೀಸರ ಅತಿಥಿ

Public TV
By Public TV
39 minutes ago
Vidhana Soudha
Bengaluru City

ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?

Public TV
By Public TV
2 hours ago
Byrati Basavaraj a
Bengaluru City

ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಬೈರತಿ ಫುಲ್ ಸೈಲೆಂಟ್ – ಕೊಲೆ ಆರೋಪಿಗಳ ಹೇಳಿಕೆಗಳೇ ಶಾಸಕರಿಗೆ ಕಂಟಕವಾಗುತ್ತಾ?

Public TV
By Public TV
2 hours ago
Cheetah Gamini
Latest

ಮತ್ತೆ 3 ಮರಿಗಳಿಗೆ ಜನ್ಮ ನೀಡಿದ ʻಗಾಮಿನಿʼ – ಕುನೋದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ

Public TV
By Public TV
2 hours ago
PM Modi Tarique Rahman
Latest

ಭಾರತಕ್ಕೆ ಭೇಟಿ ನೀಡುವಂತೆ ಬಾಂಗ್ಲಾದೇಶ ಪ್ರಧಾನಿಗೆ ಮೋದಿ ಆಹ್ವಾನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?